Rangayana Raghu: ಪ್ರೇಮದ ಊರಲಿ ಚಿತ್ರಕ್ಕಾಗಿ ಬೃಂದಾವಿಹಾರಿ ಮುಂದಕ್ಕೆ; ರಂಗಾಯಣ ರಘು ಹೇಳಿದ್ದೇನು? | | ACTPnews

ಪ್ರೇಮದ ಊರಲಿ ಚಿತ್ರಕ್ಕಾಗಿ ಬೃಂದಾವಿಹಾರಿ ಮುಂದಕ್ಕೆ; ರಂಗಾಯಣ ರಘು ಹೀಗ್ಯಾಕ್ ಹೇಳಿದರು? (ಚಿತ್ರ ಕೃಪೆ: ಪ್ರೇಮದ ಊರಲಿ ಮೂವಿ ಇನ್​ಸ್ಟಾಗ್ರಾಮ್)

[ad_1]

Last Updated:

ಪ್ರೇಮದ ಊರಲಿ ರಂಗಾಯಣ ರಘು ತುಂಬಾನೆ ಖುಷಿಯಲ್ಲಿದ್ದಾರೆ. ತಮ್ಮ ಪ್ರೇಮದ ಊರಲಿ ಚಿತ್ರ ಇನ್ನೂ ಚೆನ್ನಾಗಿ ಹೋಗಲಿ ಅಂತಲೇ ಬೃಂದಾವಿಹಾರಿ ಚಿತ್ರ ಮುಂದೆ ಹೋಗಿದ್ದಕ್ಕೆ ಇವರಿಗೆ ಖುಷಿ ಇದೆ. ಚಿತ್ರ ತಂಡದ ಈ ನಿರ್ಧಾರವನ್ನ ಬಹುವಾಗಿಯೇ ಇವರು ಕೊಂಡಾಡಿದ್ದಾರೆ. ಇವರ ಮಾತುಗಳ ವಿವರ ಇಲ್ಲಿದೆ ಓದಿ.

ಪ್ರೇಮದ ಊರಲಿ ಚಿತ್ರಕ್ಕಾಗಿ ಬೃಂದಾವಿಹಾರಿ ಮುಂದಕ್ಕೆ; ರಂಗಾಯಣ ರಘು ಹೀಗ್ಯಾಕ್ ಹೇಳಿದರು? (ಚಿತ್ರ ಕೃಪೆ: ಪ್ರೇಮದ ಊರಲಿ ಮೂವಿ ಇನ್​ಸ್ಟಾಗ್ರಾಮ್)
ಪ್ರೇಮದ ಊರಲಿ ಚಿತ್ರಕ್ಕಾಗಿ ಬೃಂದಾವಿಹಾರಿ ಮುಂದಕ್ಕೆ; ರಂಗಾಯಣ ರಘು ಹೀಗ್ಯಾಕ್ ಹೇಳಿದರು? (ಚಿತ್ರ ಕೃಪೆ: ಪ್ರೇಮದ ಊರಲಿ ಮೂವಿ ಇನ್​ಸ್ಟಾಗ್ರಾಮ್)

ಪ್ರೇಮದ ಊರಲಿ ಚಿತ್ರ (Premad Oorali Movie) ಕ್ಕಾಗಿಯೇ ಗಣೇಶ್ (Ganesh) ತಮ್ಮ ಚಿತ್ರ ಮುಂದೆ ಹಾಕಿದ್ದಾರೆ. ಇನ್ನೇನು ಅಕ್ಟೋಬರ್-16 ರಂದು ಈ ಚಿತ್ರ ರಿಲೀಸ್ ಅಗೋದಿತ್ತು. ಹಾಡುಗಳು ರಿಲೀಸ್ ಆಗಿವೆ. ಸಿನಿಮಾದ ಪ್ರಮೋಷನ್ ಶುರು ಆಗಿದೆ. ಹುಬ್ಬಳ್ಳಿಯಿಂದಲೇ (Hubballi) ಪ್ರಚಾರ ಆರಂಭಿಸಬೇಕು ಅಂತ ಇಷ್ಟು ದೊಡ್ಡ ಪ್ರೊಗ್ರಾಮ್ ಮಾಡಿದ್ದಾರೆ. ಆದರೆ, ಕನ್ನಡದ ಪ್ರೇಮದ ಊರಲಿ (Premada Oorali) ಚೆನ್ನಾಗಿ ಹೋಗುತ್ತಿದೆ. ಇದು ಇನ್ನು ಚೆನ್ನಾಗಿ ಹೋಗಲಿ ಅಂತಲೇ ತಮ್ಮ ಚಿತ್ರ ಮುಂದೆ ಹಾಕಿದ್ದಾರೆ. “ಇದು ನಿಜಕ್ಕೂ ಕನ್ನಡ ಇಂಡಸ್ಟ್ರೀಯ ಬೆಳವಣಿಗೆಗೆ ಪೂರಕ” ಅಂತಲೇ ರಂಗಾಯಣ ರಘು ಹೇಳಿದ್ದಾರೆ. ಇವರ ಮಾತುಗಳ ಕಂಪ್ಲೀಟ್ ವಿವರ ಇಲ್ಲಿದೆ ಓದಿ.

ಇದು ನಿಜವಾದ ಬೆಳವಣಿಗೆ…

ರಂಗಾಯಣ ರಘು ಎಂದಿನಂತೆ ತಮ್ಮ ಶೈಲಿಯಲ್ಲಿ ಮಾತು ಶುರು ಮಾಡಿದರು. ಇವರ ಮಾತುಗಳನ್ನ ಕೇಳುವುದಕ್ಕೆ ಎಲ್ಲರೂ ಕಾಯ್ತಾ ಇದ್ರು. ಕಾರಣ, ಪ್ರೇಮದ ಊರಲಿ ಚಿತ್ರದ ಇವರ ನಾಗಣ್ಣ ಪಾತ್ರ ಎಲ್ರಿಗೂ ಇಷ್ಟ ಆಗಿದೆ.

Brindavihari Release Date Postponed Rangayana Raghu Praises Teams Decision

ಇದು ನಿಜವಾದ ಬೆಳವಣಿಗೆ…
(ಚಿತ್ರ ಕೃಪೆ: ಪ್ರೇಮದ ಊರಲಿ ಟೀಮ್)

ಮಕ್ಕಳು ಕೂಡ ನಾಗಣ್ಣ ಅಂತಲೇ ಹೇಳ್ತಾರೆ. ಆ ರೀತಿಯ ಪಾತ್ರವೇ ಇದಾಗಿದೆ. ಉತ್ತಮ ಕಂಟೆಂಟ್ ಇರೋ ಚಿತ್ರದಲ್ಲಿ ಅತ್ಯುತ್ತಮ ಪಾತ್ರವನ್ನೆ ಇವರು ಮಾಡಿದ್ದಾರೆ.

ಗಣಿ ಸಿನಿಮಾ ಮುಂದಕ್ಕೆ

ಬೃಂದಾವಿಹಾರಿ ಚಿತ್ರ ಅಕ್ಟೋಬರ್-16 ರಂದು ಬರೋದಿತ್ತು. ಹಾಡುಗಳು ರಿಲೀಸ್ ಆಗಿವೆ. ಪ್ರಮೋಷನ್ ಕೂಡ ಶುರು ಆಗಿದೆ. ಅದಕ್ಕಾಗಿಯೇ ಹುಬ್ಬಳ್ಳಿಯಿಂದಲೇ ಪ್ರಚಾರದ ಆ ಕೆಲಸ ಶುರು ಆಗಿದೆ.

“ಇದು ನಿಜಕ್ಕೂ ಒಳ್ಳೆ ಬೆಳವಣಿಗೆ ಆಗಿದೆ. ಕನ್ನಡ ಚಿತ್ರದ ಬೆಳಬೇಕು ಅಂತ ತೆಗೆದುಕೊಂಡ ನಿರ್ಧಾರ ಒಳ್ಳೆಯದೇ” ಅಂತಲೇ ರಂಗಾಯಣ ರಘು ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ…

ರಂಗಾಯಣ ರಘು ಇದನ್ನ ಹುಬ್ಬಳ್ಳಿಯಲ್ಲಿ ಹೇಳಿದ್ದಾರೆ. ಅಕ್ಟೋಬರ್-10 ರಂದು ಇಲ್ಲಿಯ ನೆಹರು ಮೈದಾನದಲ್ಲಿ ಬೃಂದಾವಿಹಾರಿ ಚಿತ್ರದ ಪ್ರೀ-ರಿಲೀಸ್ ಇವೆಂಟ್ ಇತ್ತು.

Brindavihari Release Date Postponed Rangayana Raghu Praises Teams Decision

ರಂಗಾಯಣ ರಘು ಹೀಗ್ಯಾಕ್ ಹೇಳಿದರು?
(ಚಿತ್ರ ಕೃಪೆ: ಮನೋಜ್ ಕುಮಾರ್ ಇನ್​ಸ್ಟಾಗ್ರಾಮ್)

ಸಂಜೆ ನಡೆದ ಈ ಕಾರ್ಯಕ್ರಮಕ್ಕೆ ರಂಗಾಯಣ ರಘು ಬಂದಿದ್ದರು. ಬಂದು ಚಿತ್ರ ತಂಡದ ನಿರ್ಧಾರವನ್ನ ಕೊಂಡಾಡಿದರು. ಅಷ್ಟೆ ಖುಷಿಯಿಂದಲೇ ಆ ನಿರ್ಧಾರದ ಬಗ್ಗೆ ಮಾತನಾಡಿದರು. ಇದು ನಿಜವಾದ ಬೆಳವಣಿಗೆ ಅಂತಲೂ ಹೆಮ್ಮೆಯಿಂದಲೇ ಹೇಳಿಕೊಂಡರು.

ಪ್ರೇಮದ ಊರಲಿ…

ಪ್ರೇಮದ ಊರಲಿ ಸಿನಿಮಾ ಓಡ್ತಿದೆ. ಇದನ್ನ ಜನ ಇನ್ನೂ ಎರಡ್ಮೂರು ಸಲ ನೋಡ್ಬೇಕಿದೆ. ಹೋಗಿ ನೋಡ್ತೀರಲ್ಲಾ? ಹೀಗೆ ಹುಬ್ಬಳ್ಳಿಯ ಜನರನ್ನ ರಂಗಾಯಣ ರಘು ಕೇಳಿದರು.

ಪ್ರೇಮದ ಊರಲಿ ಸಿನಿಮಾ 3 ನೇ ವಾರಕ್ಕೆ ಕಾಲಿಟ್ಟಿದೆ. ಸಿಂಗಲ್ ಥಿಯೇಟರ್ ಹಾಗೂ ಮಲ್ಟಿಪ್ಲೆಕ್ಸ್ ಅಲ್ಲೂ ಈ ಚಿತ್ರ ಇದೆ. ಈಗಲೂ ಶೋಗಳು ಹೌಸ್‌ಫುಲ್ ಆಗುತ್ತಿವೆ. ಬುಕ್ ಮೈಶೋದಲ್ಲೂ ಟಕೆಟ್ ಸೋಲ್ಡ್ ಔಟ್ ಆಗುತ್ತಿವೆ ಅಂತ ಸಿನಿಮಾ ತಂಡವೇ ಹೇಳಿಕೊಂಡಿದೆ ಅಂತ ಹೇಳಬಹುದು.

[ad_2]

Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed