Vinoo Mankad Trophy: ಹೆಸರಲ್ಲಿ ದ್ರಾವಿಡ್, ಬ್ಯಾಟಿಂಗ್ ಮಾತ್ರ ಕ್ರಿಸ್​ ಗೇಲ್ ಸ್ಟೈಲ್! ದೆಹಲಿ ವಿರುದ್ಧ 41 ಎಸೆತಗಳಲ್ಲಿ 85 ರನ್ ಚಚ್ಚಿದ ಅನ್ವಯ್ | ಕ್ರೀಡಾ ಸುದ್ದಿ | ACTPnews

ಅನ್ವಯ್ ದ್ರಾವಿಡ್ - ರಾಹುಲ್ ದ್ರಾವಿಡ್

[ad_1]

Last Updated:

ಸೋಮವಾರ ನಡೆದ ದೆಹಲಿ ವಿರುದ್ಧದ ಪಂದ್ಯದಲ್ಲಿ ಅನ್ವಯ್ ದ್ರಾವಿಡ್ ಕೇವಲ 41 ಎಸೆತಗಳಲ್ಲಿ 85 ರನ್ ಚಚ್ಚುವ ಮೂಲಕ ಕರ್ನಾಟಕ ತಂಡ 49 ಓವರ್‌ಗಳಲ್ಲಿ 4 ವಿಕೆಟ್‌ಗೆ 418 ರನ್‌ಗಳ ದೈತ್ಯ ಮೊತ್ತ ಪೇರಿಸಲು ನೆರವಾಗಿದ್ದರು.

ಅನ್ವಯ್ ದ್ರಾವಿಡ್ - ರಾಹುಲ್ ದ್ರಾವಿಡ್
ಅನ್ವಯ್ ದ್ರಾವಿಡ್ – ರಾಹುಲ್ ದ್ರಾವಿಡ್

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಹಾಗೂ ಹೆಡ್ ಕೋಚ್ ರಾಹುಲ್ ದ್ರಾವಿಡ್ (Rahul Dravid) ಅವರ ಕಿರಿಯ ಪುತ್ರ ಅನ್ವಯ್ ದ್ರಾವಿಡ್ (Anvay Dravid) ವಿನೂ ಮಂಕಡ್ ಟ್ರೋಫಿ (Vinoo Mankad Trophy) ಅಂಡರ್-19 ಕ್ರಿಕೆಟ್ ಟೂರ್ನಿಯಲ್ಲಿ ತಮ್ಮ ಸ್ಫೋಟಕ ಬ್ಯಾಟಿಂಗ್ ಮುಂದುವರಿಸಿದ್ದಾರೆ. ಸೋಮವಾರ ನಡೆದ ದೆಹಲಿ ವಿರುದ್ಧದ ಪಂದ್ಯದಲ್ಲಿ ಅನ್ವಯ್ ಕೇವಲ 41 ಎಸೆತಗಳಲ್ಲಿ 85 ರನ್ ಚಚ್ಚುವ ಮೂಲಕ ಕರ್ನಾಟಕ ತಂಡ 49 ಓವರ್‌ಗಳಲ್ಲಿ 4 ವಿಕೆಟ್‌ಗೆ 418 ರನ್‌ಗಳ ದೈತ್ಯ ಮೊತ್ತ ಪೇರಿಸಲು ನೆರವಾಗಿದ್ದಾರೆ.

ಸಿಕ್ಸರ್‌ಗಳ ಸುರಿಮಳೆಗೈದ ಅನ್ವಯ್

17 ವರ್ಷದ ವಿಕೆಟ್‌ಕೀಪರ್-ಬ್ಯಾಟರ್ ಹಾಗೂ ಕರ್ನಾಟಕ ತಂಡದ ನಾಯಕನೂ ಆಗಿರುವ ಅನ್ವಯ್ ದ್ರಾವಿಡ್, ಡೆಲ್ಲಿ ಬೌಲರ್‌ಗಳ ವಿರುದ್ಧ 207.32 ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದರು. ತಮ್ಮ ಈ ಬಿರುಸಿನ ಇನಿಂಗ್ಸ್‌ನಲ್ಲಿ ಅವರು 5 ಭರ್ಜರಿ ಸಿಕ್ಸರ್ ಹಾಗೂ 7 ಬೌಂಡರಿಗಳನ್ನು ಸಿಡಿಸಿ ದೆಹಲಿ ಬೌಲರ್‌ಗಳನ್ನು ಧೂಳೀಪಟ ಮಾಡಿದರು.

ಕಳೆದ ಶನಿವಾರವಷ್ಟೇ ಚಂಡೀಗಢ ವಿರುದ್ಧ ನಡೆದ ಪಂದ್ಯದಲ್ಲಿ ಕೇವಲ 62 ಎಸೆತಗಳಲ್ಲಿ 104 ರನ್ ಸಿಡಿಸಿ ಕರ್ನಾಟಕದ 100 ರನ್‌ಗಳ ಜಯಕ್ಕೆ ಕಾರಣರಾಗಿದ್ದ ಅನ್ವಯ್, ಇದೀಗ ಮತ್ತೊಂದು ಸ್ಫೋಟಕ ಇನಿಂಗ್ಸ್ ಆಡಿ ಮಿಂಚಿದ್ದಾರೆ. ನಾಯಕತ್ವ ಹಾಗೂ ವಿಕೆಟ್‌ಕೀಪಿಂಗ್ ಜವಾಬ್ದಾರಿಯ ನಡುವೆಯೂ ಅವರ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿ ಟೂರ್ನಿಯಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ.

ನಿತೀಶ್ ಆರ್ಯ, ಧ್ರುವ್ ಕೃಷ್ಣನ್ ಶತಕದ ಧಮಾಕಾ

ಪಂದ್ಯದಲ್ಲಿ ಅನ್ವಯ್ ಅಬ್ಬರಕ್ಕೂ ಮುನ್ನ ಆರಂಭಿಕ ಬ್ಯಾಟರ್ ನಿತೀಶ್ ಆರ್ಯ 109 ಎಸೆತಗಳಲ್ಲಿ 9 ಬೌಂಡರಿ, 6 ಸಿಕ್ಸರ್‌ಗಳ ಸಹಿತ 111 ರನ್, 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಧ್ರುವ್ ಕೃಷ್ಣನ್ ಕೂಡ ದೆಹಲಿ ಬೌಲಿಂಗ್ ದಾಳಿಯನ್ನು ಧೂಳೀಪಟ ಮಾಡಿದರು. ಧ್ರುವ್ ಕೃಷ್ಣನ್ ಕೇವಲ 51 ಎಸೆತಗಳಲ್ಲಿ 7 ಬೌಂಡರಿ ಮತ್ತು 7 ಸಿಕ್ಸರ್‌ಗಳ ಸಹಿತ 103 ರನ್ ಚಚ್ಚಿ ಕರ್ನಾಟಕ ತಂಡ 400 ರನ್‌ಗಳ ಗಡಿ ದಾಟಲು ಗಟ್ಟಿ ತಳಹದಿ ಹಾಕಿಕೊಟ್ಟಿದ್ದರು. ಮತ್ತೊಬ್ಬ ಆರಂಭಿಕ ಬ್ಯಾಟರ್ ರೋಹಿತ್ ರೆಡ್ಡಿ 84 ಎಸೆತಗಳಲ್ಲಿ 7 ಬೌಂಡರಿ, 2 ಸಿಕ್ಸರ್‌ಗಳ ಸಹಿತ 70 ರನ್ ಗಳಿಸಿದ್ದರು.

ಅಂಡರ್-19 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲೂ ಮಿಂಚಿಂಗ್

ಅನ್ವಯ್ ದ್ರಾವಿಡ್ ಭಾರತ ಅಂಡರ್-19 ತಂಡದ ಪರವಾಗಿಯೂ ಭರವಸೆಯ ಆರಂಭ ಪಡೆದಿದ್ದಾರೆ. ಕಳೆದ ಜುಲೈನಲ್ಲಿ ನಡೆದ ಶ್ರೀಲಂಕಾ ಪ್ರವಾಸದ ಯೂತ್ ಒಡಿಐ ಪಂದ್ಯದಲ್ಲಿ ಅವರು 67 ಎಸೆತಗಳಲ್ಲಿ 87 ರನ್ ಗಳಿಸಿದ್ದರು. ಅದೇ ರೀತಿ ಸೆಪ್ಟೆಂಬರ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಮಳೆ ಬಾಧಿತ 20 ಓವರ್‌ಗಳ ಪಂದ್ಯದಲ್ಲಿ ಕೇವಲ 18 ಎಸೆತಗಳಲ್ಲಿ 3 ಸಿಕ್ಸರ್ ಸಹಿತ 38 ರನ್ ಚಚ್ಚಿ ಭಾರತದ 7 ರನ್‌ಗಳ ಜಯಕ್ಕೆ ಪ್ರಮುಖ ಕೊಡುಗೆ ನೀಡಿದ್ದರು.

ಕೇವಲ ವಿಕೆಟ್ ಕಾಯ್ದುಕೊಳ್ಳುವುದಷ್ಟೇ ಅಲ್ಲದೆ, ಪಂದ್ಯದ ಗತಿಯನ್ನು ಬದಲಿಸುವ ಅನ್ವಯ್ ಅವರ ಸ್ಫೋಟಕ ಆಟವು ಕರ್ನಾಟಕ ತಂಡಕ್ಕೆ ಮಧ್ಯಮ ಕ್ರಮಾಂಕದಲ್ಲಿ ದೊಡ್ಡ ಬಲ ತಂದಿದೆ.

ಪಂದ್ಯದ ಫಲಿತಾಂಶ

ಕರ್ನಾಟಕದ 419 ರನ್‌ಗಳ ಗುರಿ ಬೆನ್ನಟ್ಟಿದ ಡೆಲ್ಲಿ ತಂಡ ಕೇವಲ 220 ರನ್‌ಗಳಿಗೆ ಆಲೌಟ್ ಆಗಿ 190 ರನ್‌ಗಳ ಬೃಹತ್ ಅಂತರದಿಂದ ಸೋಲೊಪ್ಪಿಕೊಂಡಿತು. ಕರ್ನಾಟಕ ಪರ ಧ್ಯಾನ್ ಹಿರೇಮಠ್ ಕೇವಲ 19 ರನ್ ನೀಡಿ 5 ವಿಕೆಟ್ ಪಡೆದು ಗೆಲುವಿನ ರೂವಾರಿಯಾದರು. ರತನ್ ಬಿಆರ್ 55ಕ್ಕೆ 2, ಸಿ ವೈಭವ್ 37ಕ್ಕೆ 2 ವಿಕೆಟ್ ಪಡೆದರೆ, ಸಮರ್ಥ್ ಕುಲಕರ್ಣಿ 1 ವಿಕೆಟ್ ಪಡೆದರು.

[ad_2]

Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed