Last Updated:
ಕರಾವಳಿ ಚಿತ್ರದ ನಾಯಕ ನಟ ಪ್ರಜ್ವಲ್ ದೇವರಾಜ್ ಚಿತ್ರವನ್ನ ಪ್ರಮೋಟ್ ಮಾಡ್ತಿದ್ದಾರಾ? ಈ ಚಿತ್ರದ ಯಶಸ್ಸಿಗಾಗಿಯೇ ಶೃಂಗೇರಿ ಶಾರದಾಂಬೆಯ ದರ್ಶನ ಪಡೆದರಾ? ಈ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.
ಪ್ರಜ್ವಲ್ ದೇವರಾಜ್ (Prajwal Devaraj) ಮತ್ತು ಕರಾವಳಿ ಚಿತ್ರ (Karavali Movie) ತಂಡದಲ್ಲಿ ಎಲ್ಲವು ಇನ್ನು ಹಾಗೆ ಇದೆ. ಏನೂ ಬದಲಾವಣೆ ಆಗಿಯೇ ಇಲ್ಲ. ಚಿತ್ರದ ನಾಯಕ ನಟ ಪ್ರಜ್ವಲ್ ದೇವರಾಜ್ (Prajwal Devaraj) ಅವರನ್ನ ಪ್ರಚಾರಕ್ಕೆ ಕರೆಯೋ ಕೆಲಸವನ್ನ ಚಿತ್ರ ತಂಡ ಮಾಡಿಯೇ ಇಲ್ಲ. ಕೊಡುವ ಬಾಕಿ ದುಡ್ಡು ಕೊಟ್ಟು ಕೈತೊಳೆದುಕೊಂಡಿದೆ. ಆದರೆ, ಪ್ರಜ್ವಲ್ ದೇವರಾಜ್ ಈ ನಡುವೆ ಶೃಂಗೇರಿಯ ಶಾರದಾಂಬೆಯ (Sringeri Sharadamba Temple) ದರ್ಶನ ಪಡೆದುಕೊಂಡು ಬಂದಿದ್ದಾರೆ. ಯಾಕೆ ಈ ಭೇಟಿ ಅನ್ನುವ ಪ್ರಶ್ನೆನೂ ಇದೆ. ಆದರೆ, ಎಲ್ಲೂ ಕರಾವಳಿ ಚಿತ್ರಕ್ಕಾಗಿಯೇ ಇಲ್ಲಿ ಪೂಜೆ ಪುನಸ್ಕಾರ ಅಂತ ಪ್ರಜ್ವಲ್ ದೇವರಾಜ್ ಹೇಳಿಕೊಂಡಿಲ್ಲ. ಆದರೆ, ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋಗಳು ಈ ಅರ್ಥದಲ್ಲಿಯೇ ಹರಿದಾಡುತ್ತಿವೆ. ಈ ವಿಡಿಯೋಗಳ ಇನ್ನಷ್ಟು ವಿವರ ಇಲ್ಲಿದೆ ಓದಿ.
ಜುಲೈ-24 ರಂದು ಕರಾವಳಿ ಚಿತ್ರ ರಿಲೀಸ್
ತಾಯಿ ಶಾರದಾಂಬೆಯ ದರ್ಶನ ಪಡೆದ್ಮೇಲೆ ಪ್ರಜ್ವಲ್ ಇಲ್ಲಿಯ ಆನೆಯೊಟ್ಟಿಗೆ ನಿಂತು ಫೋಟೋ ಕೂಡ ತೆಗೆಸಿಕೊಂಡಿದ್ದಾರೆ.
ಆದರೆ, ಈ ವಿಡಿಯೋಗಳಿಗೆ ಕರಾವಳಿ ಚಿತ್ರದ ಹಾಡನ್ನ ಹಿನ್ನೆಲೆಯಲ್ಲಿ ಬಳಕೆ ಮಾಡಿದ್ದಾರೆ. ಕರಾವಳಿ ಅನ್ನುವ ಟೈಟಲ್ ಕೂಡ ಈ ವಿಡಿಯೋದ ಮೇಲೆ ಇದೆ ನೋಡಿ.
ಶೃಂಗೇರಿಯ ಶಾರದಾಂಬೆ ದೇವಸ್ಥಾನಕ್ಕೆ ಎಂಟ್ರಿ ಕೊಡುವಾಗಲೇ ಪ್ರಜ್ವಲ್ ದೇವರಾಜ್ ನಗ್ತಾನೇ ಒಳಗೆ ಕಾಲಿಟ್ಟಿದ್ದಾರೆ. ಪಾಪರಾಜಿಗಳ ಪ್ರಶ್ನೆಗಳಿಗೂ ಉತ್ತರ ಕೊಟ್ಟಿದ್ದಾರೆ.
ಶೃಂಗೇರಿ ಶಾರದಾಂಬೆ ದೇವಸ್ಥಾನಕ್ಕೆ ಫಸ್ಟ್ ಟೈಮ್ ಬರ್ತಿರೋದಾ? ಪಾಪರಾಜಿಗಳು ಹೀಗೆ ಕೇಳಿರೋ ಪ್ರಶ್ನೆಗೆ ಪ್ರಜ್ವಲ್ ಉತ್ತರ ಕೊಟ್ಟಿದ್ದಾರೆ. ಇದು ಫಸ್ಟ್ ಟೈಮ್ ಏನೂ ಅಲ್ಲ. ಈ ಹಿಂದೆ ಇಲ್ಲಿಗೆ ಬಂದು ಹೋಗಿದ್ದೇನೆ ಅಂತಲೂ ಪ್ರಜ್ವಲ್ ದೇವರಾಜ್ ಹೇಳಿಕೊಂಡಿದ್ದಾರೆ.
ಪ್ರಜ್ವಲ್ ದೇವರಾಜ್ ಹಾಗೂ ಕರಾವಳಿ ಚಿತ್ರ ತಂಡದ ಡಬ್ಬಿಂಗ್ ವಿವಾದ ಏನೇನೋ ಆಗಿದೆ. ಪ್ರಜ್ವಲ್ ದೇವರಾಜ್ ಅವರಿಗೆ ಕೊಡ್ಬೇಬೇಕಿರೋ ಬಾಕಿ ದುಡ್ಡನ್ನ ಚಿತ್ರ ತಂಡ ಕೊಟ್ಟಿದೆ.
ಶೃಂಗೇರಿಯಲ್ಲಿ ಪ್ರಜ್ವಲ್ ದೇವರಾಜ್
ಆದರೆ, ಇನ್ನು ಜಿಎಸ್ಟಿ ಬರಬೇಕು ಅಂತಲೂ ಪ್ರಜ್ವಲ್ ದೇವರಾಜ್ ಹೇಳಿಕೊಂಡಿದ್ದಾರೆ. ಇದರ ಹೊರತಾಗಿ ಕರಾವಳಿ ಚಿತ್ರದ ಪ್ರಚಾರದ ವಿಚಾರದಲ್ಲಿ ರಾಜ್ ಬಿ ಶೆಟ್ಟಿ ಸಾಥ್ ಕೊಟ್ಟಿದ್ದಾರೆ. ಹಾಗಾಗಿಯೇ ಎಲ್ಲೆಡೆ ಚಿತ್ರದ ನಿರ್ದೇಶಕ ಗುರುದತ್ತ ಗಾಣಿಗ ಹಾಗೂ ರಾಜ್ ಬಿ ಶೆಟ್ಟಿ ಅವರೇ ಸಂದರ್ಶನ ಕೊಡ್ತಿದ್ದಾರೆ ನೋಡಿ.
ಕರಾವಳಿ ಚಿತ್ರ ಈ ತಿಂಗಳು ರಿಲೀಸ್ ಆಗುತ್ತಿದೆ. ಜುಲೈ-24 ರಂದು ಈ ಸಿನಿಮಾ ರಾಜ್ಯದೆಲ್ಲೆಡೆ ತೆರೆ ಕಾಣುತ್ತಿದೆ. ಅದಕ್ಕೂ ಮೊದಲ ಈ ಚಿತ್ರದ ಮೂರು ಹಾಡುಗಳು ರಿಲೀಸ್ ಆಗಿವೆ.
ಹಾಗೆ ಈ ಸಿನಿಮಾದ ಟ್ರೈಲರ್ ಕೂಡ ರಿಲೀಸ್ ಆಗಿದೆ. ಈ ಚಿತ್ರದ ನಾಯಕ ನಟ ಪ್ರಜ್ವಲ್ ದೇವರಾಜ್ ಅವರ ಪಾತ್ರಕ್ಕೆ ಬೇರೆಯವರು ಡಬ್ಬಿಂಗ್ ಮಾಡಿದ್ದಾರೆ. ಹಾಗಾಗಿಯೇ ಪ್ರಜ್ವಲ್ ಧ್ವನಿ ಇಲ್ಲದೆ ಈ ಚಿತ್ರ ರಿಲೀಸ್ ಆಗುತ್ತಿದೆ ಅಂತಲೂ ಸದ್ಯ ಹೇಳಬಹುದು.
Bangalore [Bangalore],Bangalore,Karnataka














