Last Updated:
ಕೌಟುಂಬಿಕ ಕಲಹಕ್ಕೆ ಗಂಡ ಹೆಂಡತಿ ಜಗಳ, ಅತ್ತೆ ಸೊಸೆ ಜಗಳ ಎಲ್ಲಾ ಕೇಳಿದ್ದೇವೆ. ಆದರೆ ಇಲ್ಲೊಬ್ಬ ಮಹಿಳೆ ಕೌಟುಂಬಿಕ ಕಲಹಕ್ಕೆ 3 ತಿಂಗಳ ಮಗು ಮೇಲೆ ತನ್ನ ಕ್ರೌರ್ಯ ಮೆರೆದಿದ್ದಾಳೆ. ಮಗು ಕಾಲನ್ನೇ ಮುರಿದಿದ್ದು, ಆಕೆಯ ದುಷ್ಕೃತ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಕೌಟುಂಬಿಕ ಕಲಹಕ್ಕೆ ಗಂಡ ಹೆಂಡತಿ ಜಗಳ (Husband Wife Rivalry), ಅತ್ತೆ ಸೊಸೆ ಜಗಳ ಎಲ್ಲಾ ಕೇಳಿದ್ದೇವೆ. ಆದರೆ ಪುಟ್ಟ ಮಕ್ಕಳ ಮೇಲೆ ಕ್ರೌರ್ಯ ಮೆರೆಯೋ ಕೀಚಕರು ಕೂಡ ಇರ್ತಾರೆ ಎಂದು ಈ ಘಟನೆ ತೋರಿಸಿದೆ. ಬಾಂಗ್ಲಾದೇಶದಲ್ಲಿ (Bangladesh) ತುಂಬಾ ಆಘಾತಕಾರಿ ಘಟನೆ ಒಂದು ನಡೆದಿದೆ. ಕುಟುಂಬ ಕಲಹದ ಹಿನ್ನೆಲೆಯಲ್ಲಿ ಒಂದು ಮಹಿಳೆ ಮೂರು ತಿಂಗಳ ಮಗು ಮೇಲೆ ದರ್ಪ ತೋರಿದ್ದಾಳೆ. ಮಗು ಕಾಲನ್ನು ಬಲವಂತವಾಗಿ ಮುರಿದು ಹಾಕಿದ್ದಾಳೆ ಎಂಬ ಆರೋಪವಿದೆ.
ಮಹಿಳೆಯ ಈ ಭೀಕರ ದುಷ್ಕೃತ್ಯದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದೆ. ಇದು ಸಾರ್ವಜನಿಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಘಟನೆ ಬಾಂಗ್ಲಾದೇಶದ ನರ್ಸಿಂಗ್ದಿ ಜಿಲ್ಲೆಯ ಮಾಧಾಬ್ದಿ ಉಪಜಿಲ್ಲೆಯ ಅಮ್ದಿಯಾ ಯೂನಿಯನ್ನ ಚಾಂದ್ಗಾಂವ್ ಗ್ರಾಮದಲ್ಲಿ ನಡೆದಿದೆ. ಸುಮಾರು ಐದು ದಿನಗಳ ಹಿಂದೆ ಕುಟುಂಬದಲ್ಲಿ ನಡೆದ ವಾದ-ವಿವಾದದ ವೇಳೆ 32 ವರ್ಷದ ಮಹಿಳೆ ಈ ಕ್ರೌರ್ಯ ಮಾಡಿದ್ದಾಳೆ ಎನ್ನಲಾಗಿದೆ. ಮಗುವಿನ ತಾಯಿ ಈ ದೃಶ್ಯವನ್ನು ತನ್ನ ಮೊಬೈಲ್ ಫೋನ್ನಲ್ಲಿ ದಾಖಲಿಸಿಕೊಂಡು ಸಂಬಂಧಿಕರಿಗೆ ಕಳುಹಿಸಿದ್ದಳು. ಅಲ್ಲಿಂದ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದು ವೈರಲ್ ಆಗಿದೆ.
ಮಾಧಾಬ್ದಿ ಪೊಲೀಸ್ ಠಾಣೆಯ ಅಧಿಕಾರಿ ಮೊಹಮ್ಮದ್ ಕಮಾಲ್ ಹೊಸೇನ್ ಅವರು ಮಾತನಾಡುತ್ತಾ, ‘ಮಗುವಿನ ಕಾಲು ಮುರಿದಿಲ್ಲ ಎಂದು ಪೋಷಕರು ಹೇಳುತ್ತಿದ್ದಾರೆ. ಆದರೆ ಮಗುವಿನ ಮೇಲೆ ಹಲ್ಲೆ ನಡೆದಿರುವುದನ್ನು ಅವರು ಒಪ್ಪಿಕೊಂಡಿದ್ದಾರೆ. ವಿಡಿಯೋ ಹೇಗೆ ವೈರಲ್ ಆಯಿತು ಮತ್ತು ಮಗುವಿಗೆ ಎಷ್ಟು ಗಾಯವಾಗಿದೆ ಎಂಬುದನ್ನು ತನಿಖೆ ಮಾಡುತ್ತಿದ್ದೇವೆ’ ಎಂದು ತಿಳಿಸಿದ್ದಾರೆ.
ಪ್ರಕರಣ ಸಂಬಂಧ ಮಹಿಳೆಯ ಪತಿ ಕೌಸರ್ ಅಹ್ಮದ್ (40), ಮಾವ ಅಲ್ಮಾಸ್ ಮಿಯಾ (56) ಮತ್ತು ಅತ್ತೆ ಶೆಫಾಲಿ ಬೇಗಂ (50) ಅವರನ್ನು ಪೊಲೀಸರು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ. ಒಂದು ಮೊಬೈಲ್ ಫೋನ್ ಅನ್ನು ಸಹ ಜಪ್ತಿ ಮಾಡಲಾಗಿದೆ. ಆದರೆ ಆರೋಪಿತ ಮಹಿಳೆ ತಲೆಮರೆಸಿಕೊಂಡಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.
ಮಗುವಿನ ಪೋಷಕರು ವಿಡಿಯೋವನ್ನು ಸುಳ್ಳು ಮಾಹಿತಿ ಸೇರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಆದರೆ ವಿಡಿಯೋದಲ್ಲಿ ಮಗುವಿನ ಮೇಲೆ ಹಲ್ಲೆ ನಡೆಯುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ. ಪೊಲೀಸರು ಪ್ರಕರಣದ ಸಮಗ್ರ ತನಿಖೆ ನಡೆಸುತ್ತಿದ್ದಾರೆ. ತನಿಖೆ ಪೂರ್ಣಗೊಂಡ ಬಳಿಕ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಸ್ಥಳೀಯರು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸುತ್ತಿದ್ದಾರೆ.
ಈ ಘಟನೆ ಬಾಂಗ್ಲಾದೇಶದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಮಕ್ಕಳ ಮೇಲಿನ ಹಲ್ಲೆ ಮತ್ತು ಕುಟುಂಬದಲ್ಲಿ ನಡೆಯುವ ಹಿಂಸೆಯ ಬಗ್ಗೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮಕ್ಕಳ ಸುರಕ್ಷತೆಗೆ ಸಂಬಂಧಿಸಿದಂತೆ ಸರ್ಕಾರ ಮತ್ತು ಪೊಲೀಸರು ಹೆಚ್ಚು ಎಚ್ಚರಿಕೆ ವಹಿಸಬೇಕು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
एक महिला की हैवानियत देख कर आपका भी खून खोल उठेगा पारिवारिक नराज़ी के चलते एक महिला ने एक मासूम बच्चे का पैर तोड़ दिया।
महिला रिश्ते में बच्चे की चाची बताई जा रही है कोई इतना क्रूर कैसे हो सकता।
बच्चे का उसमे क्या कशूर था..? pic.twitter.com/bFqLaq3MvN
— Sunil Sharma (@SunilSharmaInc_) July 15, 2026
ಈ ಘಟನೆ ಮಕ್ಕಳ ಹಕ್ಕುಗಳ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸುವ ಅವಕಾಶವನ್ನು ಸೃಷ್ಟಿಸಿದೆ. ಕುಟುಂಬ ಕಲಹಗಳು ಮಕ್ಕಳ ಮೇಲೆ ಪರಿಣಾಮ ಬೀರುವುದನ್ನು ತಡೆಯುವುದು ಅತ್ಯಗತ್ಯ ಎಂಬ ಸಂದೇಶವನ್ನು ಈ ಘಟನೆ ನೀಡುತ್ತಿದೆ. ಪೊಲೀಸರು ತನಿಖೆಯನ್ನು ವೇಗವಾಗಿ ಮುಂದುವರೆಸುತ್ತಿದ್ದಾರೆ. ಮಗುವಿನ ಆರೋಗ್ಯ ಸ್ಥಿತಿಯ ಬಗ್ಗೆ ಸಂಪೂರ್ಣ ಮಾಹಿತಿ ಬರುವ ನಿರೀಕ್ಷೆಯಿದೆ. ಈ ಘಟನೆ ಸಮಾಜದಲ್ಲಿ ತೀವ್ರ ಚರ್ಚೆಯನ್ನು ಹುಟ್ಟುಹಾಕಿದೆ.
Dhaka,Purba Champaran,Bihar














