Prajwal Devaraj: ನನ್ನ ಅವರು ಟ್ಯಾಗ್ ಮಾಡ್ತಾರೋ ಇಲ್ವೋ; ನಾನೇ ಹುಡುಕಿ ಶೇರ್ ಮಾಡ್ತಿದ್ದೀನಿ! ಈ ಮಾತು ಹೇಳಿದ್ಯಾಕೆ ಪ್ರಜ್ವಲ್ ದೇವರಾಜ್! | | ACTPnews

ನಾನೇ ಹುಡ್ಕಿ ಹುಡ್ಕಿ ಶೇರ್ ಮಾಡ್ತಿದ್ದೀನಿ; ಪ್ರಜ್ವಲ್ ದೇವರಾಜ್!


Last Updated:

ಕರಾವಳಿ ನನ್ನ ಚಿತ್ರ ಜೀವನದ 40 ನೇ ಚಿತ್ರವೇ ಆಗಿದೆ. ಈ ಚಿತ್ರಕ್ಕೆ ನಾನು ಡಬ್ ಮಾಡಿಲ್ಲ ಅನ್ನೋ ಬೇಸರ ಇದ್ದೇ ಇರುತ್ತದೆ. ಪ್ರಜ್ವಲ್ ದೇವರಾಜ್ ತಮ್ಮ ಮನದ ಮಾತುಗಳನ್ನ ಹೇಳಿಕೊಂಡಿದ್ದಾರೆ. ಇನ್ನು ಏನೆಲ್ಲ ಹೇಳಿದ್ದಾರೆ ಅನ್ನೋದು ಇಲ್ಲಿದೆ ಓದಿ.

ನಾನೇ ಹುಡ್ಕಿ ಹುಡ್ಕಿ ಶೇರ್ ಮಾಡ್ತಿದ್ದೀನಿ; ಪ್ರಜ್ವಲ್ ದೇವರಾಜ್!
ನಾನೇ ಹುಡ್ಕಿ ಹುಡ್ಕಿ ಶೇರ್ ಮಾಡ್ತಿದ್ದೀನಿ; ಪ್ರಜ್ವಲ್ ದೇವರಾಜ್!

ಪ್ರಜ್ವಲ್ ದೇವರಾಜ್ (Prajwal Devaraj) ಮಾತನಾಡಿದ್ದಾರೆ. ಈ ಹಿಂದೆನೂ ತಮ್ಮ ಅಭಿಪ್ರಾಯ ಹೇಳಿಕೊಂಡಿದ್ದರು. ಆದರೆ, ಇವರಿಗೆ ಹರ್ಟ್ ಆಗಿರೋ ವಿಚಾರವನ್ನ ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದಾರೆ. ಟ್ರೈಲರ್ (Trailer) ಅಲ್ಲಿ ಮ್ಯೂಸಿಕ್ ಅಷ್ಟೆ ಹಾಕಿ ರಿಲೀಸ್ ಮಾಡ್ತಾರೆ ಅಂದುಕೊಂಡೆ. ಅದು ಆಗಲೇ ಇಲ್ಲ. ಅದಕ್ಕೆ ನನ್ನ ಅಭಿಮಾನಿಗಳು ಅಲ್ಲಿ “ವಾಯ್ಸ್ ಯಾಕೆ ಇಲ್ಲ” ಅಂತ ಪ್ರಶ್ನೆ ಮಾಡಿದರು. ತಪ್ಪಾಗಿ ಏನೂ ನಡೆದುಕೊಳ್ಳಲಿಲ್ಲ. ಹಾಗೆ ಮಾಡಿದ್ದರೆ ತಪ್ಪಾಗುತ್ತಿತ್ತು. ಅದರ ಹೊರತಾಗಿ ನಾನು ನನ್ನ ಚಿತ್ರಕ್ಕೆ ಡಬ್ (Dub) ಮಾಡಲೇ ಇಲ್ಲ ಅನ್ನೋ ನೋವು ಇದ್ದೇ ಇದೆ. ಹೀಗೆ ಪ್ರಜ್ವಲ್ ದೇವರಾಜ್ (Prajwal Devaraj) ಹೇಳಿಕೊಂಡಿದ್ದಾರೆ. ಇವರ ಮಾತುಗಳ ಕಂಪ್ಲೀಟ್ ವಿವರ ಇಲ್ಲಿದೆ ಓದಿ.

ಆ ವಿಚಾರ ಹರ್ಟ್ ಆಯಿತು

ಕರಾವಳಿ ಚಿತ್ರಕ್ಕೆ ನಾನು ಡಬ್ ಮಾಡ್ಲಿಲ್ಲ ಅನ್ನುವ ಬೇಸರ ಇದ್ದೇ ಇರುತ್ತದೆ. ಕನ್ನಡ ಇಂಡಸ್ಟ್ರಿ ಯಾವ ಸ್ಥಿತಿಯಲ್ಲಿದೆ ಅನ್ನೋದು ಗೊತ್ತೇ ಇದೆ.

prajwal devaraj reaction on karavali movie dubbing controversy

ಕರಾವಳಿ ಪ್ರಜ್ವಲ್ 40 ನೇ ಸಿನಿಮಾ

(ಚಿತ್ರ ಕೃಪೆ: ಪ್ರಜ್ವಲ್ ದೇವರಾಜ್ ಇನ್‌ಸ್ಟಾಗ್ರಾಮ್)

ಒಳ್ಳೆ ಚಿತ್ರಗಳನ್ನ ಕೊಡ್ಬೇಕು ಅಂತ ಎಲ್ಲ ಕಲಾವಿದರೂ ಕಷ್ಟಪಡ್ತಿದ್ದಾರೆ. ಇಂತಹ ಸಮಯದಲ್ಲಿ ನನ್ನ ಚಿತ್ರಕ್ಕೆ ನಾನು ಸಪೋರ್ಟ್ ಮಾಡೋದೇ ಇಲ್ವೇ? ಆದರೆ, ನನಗೆ ಹೇಳದೇ ಅವರು ಬೇರೆಯವರ ಕಡೆಗೆಯಿಂದ ಡಬ್ ಮಾಡಿಸಿದ್ದಾರೆ. ಇದು ನನಗೆ ನಿಜಕ್ಕೂ ಹರ್ಟ್ ಆಗಿದೆ.

ನಾನು ಏನೋ ಅಂದುಕೊಂಡಿದ್ದೆ

ಕರಾವಳಿ ಚಿತ್ರದ ಟ್ರೈಲರ್ ಅಲ್ಲಿ ವಾಯ್ಸ್ ಇಲ್ಲದೇನೆ ಮ್ಯೂಸಿಕ್ ಮೇಲೆ ಟ್ರೈಲರ್ ಮಾಡ್ತಾರೆ ಅಂದುಕೊಂಡಿದ್ದೆ. ಆದರೆ, ನನ್ನ ಪಾತ್ರಕ್ಕೆ ಬೇರೆಯವರ ಕಡೆಯಿಂದ ಡಬ್ ಮಾಡಿಸಿರೋ ಟ್ರೈಲರ್ ಅನ್ನೆ ಬಿಟ್ಟಿದ್ದಾರೆ.

ಕರಾವಳಿ ಪ್ರಜ್ವಲ್ 40 ನೇ ಸಿನಿಮಾ

ಕರಾವಳಿ ಪ್ರಜ್ವಲ್ ದೇವರಾಜ್ ಅವರ 40 ನೇ ಚಿತ್ರವಾಗಿದೆ. ಆದರೆ, ಈ ಚಿತ್ರದ ತಮ್ಮ ಪಾತ್ರಕ್ಕೆ ಇವರು ಡಬ್ ಮಾಡಿಯೇ ಇಲ್ಲ. ಇದರಿಂದ ಇವರಿಗೆ ಬೇಸರವೂ ಆಗಿದೆ.

ಬೇರೆಯವರ ಕಡೆಯಿಂದ ನನ್ನ ಪಾತ್ರಕ್ಕೆ ಡಬ್ ಮಾಡಿಸಿದ್ದಾರೆ. ಆದರೆ, ಇದು ತಪ್ಪು ಅಂತ ಚಿತ್ರವನ್ನ ನಿಲ್ಲಿಸಬಹುದಿತ್ತು. ನಾನು ಹಾಗೆ ಮಾಡೋಕೆ ಹೋಗ್ಲಿಲ್ಲ. ಕನ್ನಡ ಸಿನಿಮಾರಂಗ ಸದ್ಯದ ಸ್ಥಿತಿ ಸರಿಯಿಲ್ಲ.

prajwal devaraj reaction on karavali movie dubbing controversy

ಪ್ರಜ್ವಲ್ ಕಮ್‌ಬ್ಯಾಕ್ ಸಿನಿಮಾ

ಎಲ್ಲರೂ ಇಂಡಸ್ಟ್ರಿಯನ್ನ ಎತ್ತಕೋ ಪ್ರಯತ್ನ ಪಡ್ತಿದ್ದೇವೆ. ನನ್ನ ಚಿತ್ರ ರಿಲೀಸ್ ಆಗಿ ಹಿಟ್ ಆದರೆ ಒಳ್ಳೆಯದೇ ಅಲ್ವೇ? ಅದಕ್ಕೇನೆ ಯಾವುದೇ ರೀತಿಯ ಅಡ್ಡಿ ಮಾಡಲೇ ಇಲ್ಲ ಅಂತಲೇ ಪ್ರಜ್ವಲ್ ದೇವರಾಜ್ ಹೇಳಿದ್ದಾರೆ.

ನಾನು ಹೆಚ್ಚಿಗೆ ಯೋಚನೆ ಮಾಡೋದಿಲ್ಲ

ನಾನು ಹೆಚ್ಚಿಗೆ ಯೋಚನೆ ಮಾಡೋದಿಲ್ಲ. ಕರಾವಳಿ ವಿಚಾರದಲ್ಲಿ ಯಾವುದೇ ಅಗ್ರೀಮೆಂಟ್ ಮಾಡಿಕೊಂಡಿಲ್ಲ. ನನ್ನ ಮಾತಿಗೆ ನಾನು ಬದ್ಧನಾಗಿರುತ್ತೇನೆ. ನಿನ್ನ ಮಾತಿಗೆ ನೀನು ಬದ್ಧನಾಗಿರು ಅಂತಲೇ ಅಂದುಕೊಂಡಿದ್ದೇವು.

ನಾನೇ ಹುಡ್ಕಿ ಶೇರ್ ಮಾಡ್ತಾ ಇದ್ದೀನಿ

ಕರಾವಳಿ ಚಿತ್ರದ ಕಂಟೆಂಟ್ ಅನ್ನ ನಾನೇ ಹುಡುಕಿ ಶೇರ್ ಮಾಡುತ್ತಿದ್ದೇನೆ. ನನಗೆ ಚಿತ್ರ ತಂಡದ ಯಾರೂ ಟ್ಯಾಗ್ ಕೂಡ ಮಾಡ್ತಿಲ್ಲ. ಆದರೆ, ಟೈಮ್ ಎಲ್ಲವನ್ನು ಸರಿ ಮಾಡುತ್ತದೆ.

ಇದೇ ಇಂಡಸ್ಟ್ರಿಯಲ್ಲಿ ನಾವು ಇದ್ದೇವೆ. ಮತ್ತೆ ನಾವೆಲ್ಲ ಒಟ್ಟಿಗೆ ಬೆಳೆಬೇಕು ಅನ್ನೋದನ್ನು ಪ್ರಜ್ವಲ್ ಹೇಳಿಕೊಂಡಿದ್ದಾರೆ. ಹಿರಿಯ ಪತ್ರಕರ್ತೆ ಶಾರದಾ ಅವರ ಜೊತೆಗೆ ನಡೆಸಿದ “ಸಿನಿಮಾ ಎಕ್ಸಪ್ರೆಸ್” ಸಂದರ್ಶನದಲ್ಲಿಯೇ ಈ ಎಲ್ಲ ವಿಷಯಗಳನ್ನ ಪ್ರಜ್ವಲ್ ಹಂಚಿಕೊಂಡಿದ್ದಾರೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed