PM Modi: ನನ್ನನ್ನ, ನನ್ನ ತಾಯಿಯನ್ನ ನಿಂದಿಸಿದ ಯುವಕರನ್ನ ಕ್ಷಮಿಸುತ್ತೇನೆ: ಭಾವನಾತ್ಮಕ ವಿಡಿಯೋ ರಿಲೀಸ್ ಮಾಡಿದ ಪಿಎಂ ಮೋದಿ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಪ್ರಧಾನಿ ಮೋದಿ


Last Updated:

ಪ್ರಧಾನಿ ನರೇಂದ್ರ ಮೋದಿ ಅವರು ಸೋಷಿಯಲ್‌ ಮೀಡಿಯಾದಲ್ಲಿ 5ನೇ ವಿಡಿಯೋವನ್ನು ಪೋಸ್ಟ್​ ಮಾಡಿದ್ದಾರೆ.

ಪ್ರಧಾನಿ ಮೋದಿ
ಪ್ರಧಾನಿ ಮೋದಿ

ಹಾಯ್‌‌ ಫ್ರೆಂಡ್ಸ್‌ ಅಂತ ಮತ್ತೆ ಪ್ರಧಾನಿ ಮೋದಿ (Prime Minister Narendra Modi) ಅವರು ವಿಡಿಯೋ ರಿಲೀಸ್​ ಮಾಡಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ (Social Media) ಮೋದಿ ಅವರು ತಮ್ಮ 5ನೇ ವಿಡಿಯೋವನ್ನು ಪೋಸ್ಟ್​ ಮಾಡಿದ್ದಾರೆ. ಈ ವಿಡಿಯೋದಲ್ಲಿ ಪ್ರಧಾನಿ ಮೋದಿ ಅವರು ಪ್ರತಿಪಕ್ಷಗಳು, ವಿದ್ಯಾರ್ಥಿಗಳ ನಿಂದನೆ ಮಾತಿಗೆ ಉತ್ತರ ಕೊಟ್ಟಿದ್ದಾರೆ.

ಪ್ರಧಾನಿ ಮೋದಿ ಹೇಳಿದ್ದೇನು?

ಪ್ರಧಾನಿ ನರೇಂದ್ರ ಮೋದಿ ಮತ್ತೊಂದು ವಿಡಿಯೋ ಸಂದೇಶ ಕಳಿಸಿದ್ದಾರೆ. ಇಂದು ನನಗೆ ನಿಮ್ಮೊಂದಿಗೆ ಕೇವಲ ಮಾತನಾಡಬೇಕು ಎನಿಸುತ್ತಿದೆ. ಜಂತರ್ ಮಂತರ್‌ನಲ್ಲಿ ಏನಾಯಿತು ಎಂಬುದನ್ನು ಇಡೀ ದೇಶ ಮತ್ತು ಜಗತ್ತೇ ನೋಡಿದೆ. ದಾರಿ ತಪ್ಪಿದ ಕೆಲವು ಯುವಕರು ಅತ್ಯಂತ ನಿಂದನಾತ್ಮಕ ಭಾಷೆಯನ್ನು ಬಳಸಿದ್ದಾರೆ. ಆ ಪದಗಳು ಯಾವುದೇ ನಾಗರಿಕ ಸಮಾಜಕ್ಕೆ ಶೋಭೆ ತರುವುದಿಲ್ಲ. ಅವರು ನನ್ನನ್ನು ನಿಂದಿಸಿದರು, ಅಷ್ಟೇ ಅಲ್ಲದೆ ನನ್ನ ತಾಯಿಯನ್ನೂ ನಿಂದಿಸಿದರು. ಕಠಿಣ ಕ್ರಮಕ್ಕೆ ಒತ್ತಾಯಿಸುವ ಬದಲು, ಅವರಿಗೆ ತಿದ್ದಿಕೊಳ್ಳಲು ಒಂದು ಅವಕಾಶವನ್ನು ನೀಡಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಇದನ್ನೂ ಓದಿ: Narendra Modi: ಮತ್ತೆ ಬಂತು ಮೋದಿ ವಿಡಿಯೋ ಸಂದೇಶ! 4ನೇ ಬಾರಿ ಪ್ರಧಾನಿ ಹೇಳಿದ್ದೇನು ಗೊತ್ತಾ?

ಮುಂದುವರೆದು ಮಾತನಾಡಿರುವ ಪ್ರಧಾನಿ ಮೋದಿ, ‘ಅವರು ಯಾವ ರೀತಿಯ ಮಾನಸಿಕ ಸ್ಥಿತಿಯಲ್ಲಿದ್ದರೋ ನನಗೆ ಗೊತ್ತಿಲ್ಲ, ಆದರೆ ಇಂದು ನಾನು ಹೇಳಲು ಬಯಸುವುದೇನೆಂದರೆ ಬಾಲ್ಯದಲ್ಲಿ ಮತ್ತು ಯೌವನದಲ್ಲಿ ತಪ್ಪುಗಳು ಸಹಜವಾಗಿ ನಡೆಯುತ್ತವೆ. ಜೀವನದ ಆ ಹಂತದಲ್ಲಿ, ಜನರು ತಮ್ಮ ತಪ್ಪುಗಳಿಂದ ಕಲಿಯುವ ಅವಕಾಶವನ್ನೂ ಹೊಂದಿರುತ್ತಾರೆ. ಯುವಕರಾಗಿರುವುದರ ನಿಜವಾದ ಅರ್ಥವೇ ಅದು ಎಂದು ಹೇಳಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed