Last Updated:
ವಿಮಾನವು ಹೆದ್ದಾರಿ ತಡೆಗೋಡೆಯ ವಿರುದ್ಧ ಪಕ್ಕಕ್ಕೆ ಬಿದ್ದಿರುವ ವಿಡಿಯೋಗಳು, ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತುರ್ತು ರಕ್ಷಣಾ ಸಮಯದಲ್ಲಿ ರಕ್ಷಣಾ ತಂಡದ ಸದಸ್ಯರು, ಸಾರ್ವಜನಿಕರು ವಿಮಾನದ ಕಡೆಗೆ ಧಾವಿಸಿ ಒಳಗೆ ಸಿಲುಕಿರುವ ಜನರನ್ನು ರಕ್ಷಿಸಲು ಪ್ರಯತ್ನಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಟೆಕ್ಸಾಸ್: ಸುಮಾರು 6 ಜನರನ್ನು ಹೊತ್ತೊಯ್ಯುತ್ತಿದ್ದ ಸಣ್ಣ ವಿಮಾನವೊಂದು (Plane Crash) ಪತನಗೊಂಡು ಹೆದ್ದಾರಿಗೆ ಬಿದ್ದ ಪರಿಣಾಮ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಉಳಿದ ಐದು ಮಂದಿ ಅಚ್ಚರಿಯ ರೀತಿಯಲ್ಲಿ ಬದುಕುಳಿದ ಘಟನೆ ಟೆಕ್ಸಾಸ್‌ನಲ್ಲಿ ನಡೆದಿದೆ.
ನಿನ್ನೆ ತಡರಾತ್ರಿ (ಸ್ಥಳೀಯ ಸಮಯ) ಅಮೆರಿಕಾದ ದಕ್ಷಿಣ ಟೆಕ್ಸಾಸ್‌ನಲ್ಲಿ ಈ ಭೀಕರ ದುರ್ಘಟನೆ ಸಂಭವಿಸಿದ್ದುದ, 6 ಜನರನ್ನು ಹೊತ್ತೊಯ್ಯುತ್ತಿದ್ದ ಸಣ್ಣ ವಿಮಾನ ಪತನಗೊಂಡು ಹೆದ್ದಾರಿಗೆ ಬಿದ್ದ ಪರಿಣಾಮ ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದರೆ, ಆರು ಮಂದಿಯನ್ನು ರಕ್ಷಿಸಲಾಗಿದೆ. ಪತನಗೊಂಡ ವಿಮಾನದಿಂದ ಬೆಂಕಿ ಕಾಣಿಸಿಕೊಂಡ ತಕ್ಷಣ ರಕ್ಷಣಾ ತಂಡ ಸ್ಥಳಕ್ಕೆ ಆಗಮಿಸಿ ಒಳಗೆ ಸಿಲುಕಿದ್ದವರನ್ನು ವಿಮಾನದ ಗಾಜು ಒಡೆದು ರಕ್ಷಿಸಿದರು ಎಂದು ಅಂತಾರಾಷ್ಟ್ರೀಯ ಮಾಧ್ಯಮ ಸಂಸ್ಥೆ ಎಪಿ ನ್ಯೂಸ್ ವರದಿ ಮಾಡಿದೆ.
ವಿಮಾನವು ಹೆದ್ದಾರಿ ತಡೆಗೋಡೆಯ ವಿರುದ್ಧ ಪಕ್ಕಕ್ಕೆ ಬಿದ್ದಿರುವ ವಿಡಿಯೋಗಳು, ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತುರ್ತು ರಕ್ಷಣಾ ಸಮಯದಲ್ಲಿ ರಕ್ಷಣಾ ತಂಡದ ಸದಸ್ಯರು, ಸಾರ್ವಜನಿಕರು ವಿಮಾನದ ಕಡೆಗೆ ಧಾವಿಸಿ ಒಳಗೆ ಸಿಲುಕಿರುವ ಜನರನ್ನು ರಕ್ಷಿಸುವ ಪ್ರಯತ್ನದಲ್ಲಿ ಕಾಕ್‌ಪಿಟ್ ಕಿಟಕಿಯನ್ನು ಒಡೆಯಲು ಪ್ರಯತ್ನಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
A small plane crash occurred on Loop 20 highway in Laredo, Texas.
Witnesses scrambled to smash the cockpit window as the aircraft caught fire.
Six people were onboard and one fatality has been reported. pic.twitter.com/BBDwZkhdZX
— GeoTechWar (@geotechwar) June 17, 2026
ವಿಮಾನಯಾನ ಟ್ರ್ಯಾಕಿಂಗ್ ಮತ್ತು ಡೇಟಾ ಕಂಪನಿಯಾದ ಫ್ಲಿಗ್ತ್‌ವೇರ್‌ನ ಮಾಹಿತಿಯ ಪ್ರಕಾರ, ಆ ವಿಮಾನವು ಸೆಸ್ನಾ ಸೈಟೇಶನ್ ಲ್ಯಾಟಿಟ್ಯೂಡ್ ಅವಳಿ ಜೆಟ್ ಆಗಿತ್ತು. ಇದು ಮೆಕ್ಸಿಕೋದ ಲಾಸ್ ಕ್ಯಾಬೋಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸಂಜೆ 6:19 ಕ್ಕೆ ಹೊರಟಿತು. ಸ್ಯಾನ್ ಆಂಟೋನಿಯೊದಿಂದ ನೈಋತ್ಯಕ್ಕೆ ಸುಮಾರು 140 ಮೈಲುಗಳು (225 ಕಿಲೋಮೀಟರ್) ದೂರದಲ್ಲಿರುವ ಲಾರೆಡೊ ತಲುಪಿದಾಗ ದುರಂತ ಸಂಭವಿಸಿದೆ. ಆದರೆ ಈ ಅಪಘಾತಕ್ಕೆ ಕಾರಣವೇನೆಂದು ಸ್ಪಷ್ಟವಾಗಿಲ್ಲ.
ಸದ್ಯ ಈ ವಿಮಾನ ದುರಂತಕ್ಕೆ ಕಾರಣ ಏನು ಅನ್ನೋದನ್ನು ಪತ್ತೆ ಹಚ್ಚಲು ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಮೃತಪಟ್ಟ ವ್ಯಕ್ತಿಯ ಮರಣೋತ್ತರ ಪರೀಕ್ಷೆ ನಡೆಸಿದ್ದು, ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
Jun 17, 2026 12:30 PM IST













