Mango Pachha Movie: ಒಟಿಟಿಗೆ ಯಾವಾಗ ಬರುತ್ತೆ ಮ್ಯಾಂಗೋ ಪಚ್ಚ? ಎಲ್ಲಿ ಸ್ಟ್ರೀಮಿಂಗ್? | | ACTPnews

kichcha sudeepa nephew sanchith sanjeev mango pachcha movie ott latest updates


ಮ್ಯಾಂಗೋ ಪಚ್ಚ ಸಿನಿಮಾ

ಮ್ಯಾಂಗೋ ಪಚ್ಚ ಚಿತ್ರ ಜೂನ್-5 ರಂದು ತೆರೆ ಕಂಡಿದೆ. ಪ್ಯಾನ್ ಕರ್ನಾಟಕದಲ್ಲಿ ರಿಲೀಸ್ ಅಂತ ಸುದೀಪ್ ಹೇಳಿಯೂ ಆಗಿದೆ. ಕರ್ನಾಟಕದಲ್ಲಿ ಮಾತ್ರ ರಿಲೀಸ್ ಆಗಿರೋ ಈ ಚಿತ್ರಕ್ಕೆ ಒಳ್ಳೆ ಅಭಿಪ್ರಾಯವು ಬಂದಿವೆ.
ಎಲ್ಲಿ ಸ್ಟ್ರೀಮಿಂಗ್ ಗೊತ್ತಾ?

(ಚಿತ್ರ ಕೃಪೆ: ಸಂಚಿತ್ ಸಂಜೀವ್ ಇನ್‌ಸ್ಟಾಗ್ರಾಮ್)

ನಮ್ಮ ಚಿತ್ರ ಎರಡನೇ ವಾರಕ್ಕೆ ಕಾಲಿಟ್ಟಿದೆ ಅಂತ ಚಿತ್ರದ ನಾಯಕ ಸಂಚಿತ್ ಸಂಜೀವ್ ಹೇಳಿಕೊಂಡಿರೋದು ಇದೆ. ಆದರೆ, ಈ ಚಿತ್ರ ಇನ್ನು ಥಿಯೇಟರ್ ಅಲ್ಲಿರೋವಾಗ್ಲೆ ಒಟಿಟಿ ಮಾಹಿತಿ ಹೊರ ಬಿದ್ದಿದೆ.

ಜೀಯೋ ಹಾಟ್‌ಸ್ಟಾರ್

ಮ್ಯಾಂಗೋ ಪಚ್ಚ ಚಿತ್ರ ಒಟಿಟಿ ಹಕ್ಕನ್ನ ಜೀಯೋ ಹಾಟ್‌ಸ್ಟಾರ್ ಖರೀದಿಸಿದೆ. ಎಷ್ಟಕ್ಕೆ ಅನ್ನುವ ಪ್ರಶ್ನೆಗೆ ಸದ್ಯಕ್ಕೆ ಉತ್ತರ ಇಲ್ಲ. ಆದರೆ, ಜೀಯೋ ಹಾಟ್‌ಸ್ಟಾರ್ ಅಲ್ಲಿಯೇ ಈ ಚಿತ್ರ ಸ್ಟ್ರೀಮಿಂಗ್ ಆಗುತ್ತದೆ.

ಜೂನ್ ಇಲ್ಲವೆ ಜುಲೈ

ಮ್ಯಾಂಗೋ ಪಚ್ಚ ಚಿತ್ರದ ಸ್ಟ್ರೀಮಿಂಗ್ ಬಗ್ಗೆ ಸದ್ಯ ಇರೋ ಸುದ್ದಿ ಏನಂದ್ರೆ, ಈ ಚಿತ್ರ ಜೂನ್ ಕೊನೆಯಲ್ಲಿ ಇಲ್ಲವೆ ಜುಲೈ ಆರಂಭದಲ್ಲಿಯೇ ಜೀಯೋ ಹಾಟ್‌ಸ್ಟಾರ್‌ ಅಲ್ಲಿ ಪ್ರಸಾರ ಆಗುತ್ತದೆ ಅನ್ನುವ ನ್ಯೂಸ್ ಇದೆ.

ಆದರೆ, ಈ ಸ್ಟ್ರೀಮಿಂಗ್ ವಿಚಾರದ ಅಧಿಕೃತ ಮಾಹಿತಿ ಹೊರಬರಬೇಕಿದೆ. ಈ ಕುರಿತು ಜೀಯೋ ಹಾಟ್‌ಸ್ಟಾರ್ ಕನ್ನಡ ಎಲ್ಲೂ ಹೇಳಿಕೊಂಡಿಲ್ಲ. ಸಿನಿಮಾ ತಂಡವು ಇನ್ನು ಏನೂ ಹೇಳಿಲ್ಲ ಬಿಡಿ. ಆದರೂ ಈ ಚಿತ್ರ ಜೂನ್ ಕೊನೆ ಇಲ್ಲವೆ ಜುಲೈ ಅಲ್ಲಿ ಸ್ಟ್ರೀಮಿಂಗ್ ಅನ್ನುವ ನ್ಯೂಸ್ ಕೇಳಿ ಬರ್ತಾನೆ ಇದೆ.

kichcha sudeepa nephew sanchith sanjeev mango pachcha movie ott latest updates

ಜೂನ್ ಇಲ್ಲವೆ ಜುಲೈ

(ಚಿತ್ರ ಕೃಪೆ: ಸಂಚಿತ್ ಸಂಜೀವ್ ಇನ್‌ಸ್ಟಾಗ್ರಾಮ್)

ಮ್ಯಾಂಗೋ ಪಚ್ಚ ಸಿನಿಮಾ

ಮ್ಯಾಂಗೋ ಪಚ್ಚ ಚಿತ್ರದ ಮೂಲಕವೇ ಸಂಚಿತ್ ಸಂಜೀವ್ ಇಂಡಸ್ಟ್ರಿಗೆ ಕಾಲಿಟ್ಟಿದ್ದಾರೆ. ಸುದೀಪ್ ಅಳಿಯ ಅನ್ನೋ ಬಲ ಜೊತೆಗೆ ಇದ್ದೇ ಇದೆ.

ಆದರೆ, ಮ್ಯಾಂಗೋ ಪಚ್ಚ ನೋಡಿದವರು ಪಕ್ಕಾ ಜೂನಿಯರ್ ಕಿಚ್ಚ ಅಂತ ಹೇಳಿದ್ದಾರೆ. ಇನ್ನು ಬರಬೇಕಿರೋ ಜಿಮ್ಮಿ ಚಿತ್ರದ ಸಮಯದಲ್ಲಿಯೇ ಜಿಮ್ಮಿ ಚಿತ್ರದ ಒಂದು ಟೀಸರ್ ಅಷ್ಟೆ ಹೊರ ಬಂದಿತ್ತು. ಇದನ್ನ ನೋಡಿಯೇ ಅನೇಕರು ಜೂನಿಯರ್ ಕಿಚ್ಚ ಅಂತ ಹೇಳಿದ್ದರು. ಮ್ಯಾಂಗೋ ಪಚ್ಚ ಚಿತ್ರದಲ್ಲೂ ಜೂನಿಯರ್ ಕಿಚ್ಚನ ಅಬ್ಬರವನ್ನ ಕಾಣಬಹುದು.

ವಿವೇಕ್ ಮೊದಲ ಸಿನಿಮಾ

ಮ್ಯಾಂಗೋ ಪಚ್ಚ ಚಿತ್ರವನ್ನ ವಿವೇಕ್ ಡೈರೆಕ್ಷನ್ ಮಾಡಿದ್ದಾರೆ. ಇದು ಇವರ ಮೊದಲ ಚಿತ್ರವೇ ಆಗಿದೆ. 2001 ರಲ್ಲಿ ಮೈಸೂರಿನಲ್ಲಿ ಗಾಂಜಾ ದಂಧೆ ಹೇಗೆಲ್ಲ ನಡೀತಿತ್ತು ಅನ್ನೋದು ಈ ಚಿತ್ರದಲ್ಲಿದೆ.

ಆದರೆ, ಚಿತ್ರದಲ್ಲಿ ಇದನ್ನ ವೈಭವೀಕರಿಸಿಲ್ಲ. ಬದಲಾಗಿ ಈ ರೀತಿ ಮಾಡಿದರೆ ಏನ್ ಆಗುತ್ತದೆ ಅನ್ನೋದನ್ನ ತೋರಿಸಿದ್ದೇವೆ ಅಂತಲೇ ಚಿತ್ರ ತಂಡ ಹೇಳಿಕೊಂಡಿದೆ.

ಚರಣ್ ರಾಜ್ ಸಂಗೀತ

ಚಿತ್ರಕ್ಕೆ ಚರಣ್ ರಾಜ್ ಸಂಗೀತ ಕೊಟ್ಟಿದ್ದಾರೆ. ಇವರ ಸಂಗೀತದ ಹಾಡು ಗಮನ ಸೆಳೆದಿದ್ದವು. ಸಾನ್ವಿ ಸುದೀಪ್ ಈ ಚಿತ್ರದ ಅರಗಿಣಿಯೇ ಸಾಂಗ್ ಹಾಡಿದ್ದಾರೆ.

ಈ ಚಿತ್ರ ಜೂನ್-5 ರಂದು ರಿಲೀಸ್ ಆಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಇದು ಒಟಿಟಿಗೆ ಬರುತ್ತದೆ ಅನ್ನುವ ಸುದ್ದಿ ವೈರಲ್ ಆಗುತ್ತಿದೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed