IND vs AFG: 2ನೇ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್ ಇಳಿದ ಭಾರತ! ನಿತೀಶ್, ಕೃಷ್ಣ ಔಟ್, ಪ್ಲೇಯಿಂಗ್​​ ಇಲೆವೆನ್​​ನಲ್ಲಿ 3 ಬದಲಾವಣೆ | ಕ್ರೀಡಾ ಸುದ್ದಿ | ACTPnews

ಭಾರತ vs ಅಫ್ಘಾನಿಸ್ತಾನ


Last Updated:

 ಮೊದಲ ಪಂದ್ಯದಲ್ಲಿ ಗಾಯಗೊಂಡಿದ್ದ ರೋಹಿತ್ ಶರ್ಮಾ ಹಾಗೂ ಕಳಪೆ ಪ್ರದರ್ಶನ ತೋರಿದ್ದ ಪ್ರಸಿದ್ಧ್ ಕೃಷ್ಣ ಈ ಪಂದ್ಯದಿಂದ ಹೊರಬಿದ್ದಿದ್ದಾರೆ. ಅವರಿಬ್ಬರ ಬದಲಿಗೆ ಯಶಸ್ವಿ ಜೈಸ್ವಾಲ್ ಹಾಗೂ ಪ್ರಿನ್ಸ್ ಯಾದವ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ನಿತೀಶ್ ಕುಮಾರ್ ರೆಡ್ಡಿ ಬದಲಿಗೆ ಕುಲ್ದೀಪ್ ಯಾದವ್ ಆಡುತ್ತಿದ್ದಾರೆ.

ಭಾರತ vs ಅಫ್ಘಾನಿಸ್ತಾನ
ಭಾರತ vs ಅಫ್ಘಾನಿಸ್ತಾನ

ಭಾರತ ಮತ್ತು ಅಫ್ಘಾನಿಸ್ತಾನ ನಡುವೆ ಇಂದು ಎರಡನೇ ಏಕದಿನ ಪಂದ್ಯ ನಡೆಯುತ್ತಿದೆ. ಲಖನೌದ ಏಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಎರಡೂ ತಂಡಗಳು ಮುಖಾಮುಖಿಯಾಗಿವೆ. ಟಾಸ್​​ ಗೆದ್ದ ಅಫ್ಘಾನಿಸ್ತಾನ್ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಈಗಾಗಲೇ ಮೂರು ಪಂದ್ಯಗಳ ಸರಣಿಯಲ್ಲಿ ಭಾರತ ತಂಡ 1-0 ಮುನ್ನಡೆಯಲ್ಲಿದೆ. ಧರ್ಮಶಾಲಾದಲ್ಲಿ ನಡೆದ ಮೊದಲ ಏಕದಿನ ಪಂದ್ಯವನ್ನು ಭಾರತ 7 ವಿಕೆಟ್‌ಗಳಿಂದ ಗೆದ್ದಿತ್ತು. ಇದೀಗ ಶುಭಮನ್ ಗಿಲ್ ನೇತೃತ್ವದ ತಂಡವು ಬುಧವಾರದ ಪಂದ್ಯವನ್ನ ಗೆದ್ದು ಸರಣಿ ಗೆಲ್ಲುವ ಗುರಿಯನ್ನು ಹೊಂದಿದೆ.

ರೋಹಿತ್-ಪ್ರಸಿದ್ಧ್ ಔಟ್

ಮೊದಲ ಪಂದ್ಯದಲ್ಲಿ  ಕಳಪೆ ಪ್ರದರ್ಶನ ತೋರಿದ್ದ ಪ್ರಸಿದ್ಧ್ ಕೃಷ್ಣ ಜೊತೆಗೆ  ಬಳಲುತ್ತಿರುವ ನಿತೀಶ್ ಕುಮಾರ್, ಹರ್ಷ್ ದುಬೆ ಈ ಪಂದ್ಯದಿಂದ ಹೊರಬಿದ್ದಿದ್ದಾರೆ. ನಿತೀಶ್ ಕುಮಾರ್​ ರಡ್ಡಿ ಬದಲಿಗೆ ಯಶಸ್ವಿ ಜೈಸ್ವಾಲ್, ಪ್ರಸಿದ್ಧ್ ಬದಲಿಗೆ  ಪ್ರಿನ್ಸ್ ಯಾದವ್  ಹಾಗೂ ದುಬೆ  ಬದಲಿಗೆ ಕುಲದೀಪ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಭಾರತ ಮತ್ತೊಮ್ಮೆ ಗುರ್ನೂರ್ ಬ್ರಾರ್​ರಿಂದ ಮತ್ತೊಂದು ಉತ್ತಮ ಪ್ರದರ್ಶನವನ್ನು ನಿರೀಕ್ಷಿಸುತ್ತದೆ.   ಧರ್ಮಶಾಲಾದಲ್ಲಿ ನಡೆದ ಚೊಚ್ಚಲ ಪಂದ್ಯದಲ್ಲಿ  ಅವರು ಮೂರು ವಿಕೆಟ್‌ಗಳನ್ನು ಕಬಳಿಸಿದ್ದರು. ಮೊದಲ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿದ ಶ್ರೇಯಸ್ ಅಯ್ಯರ್ ಕಡೆಯಿಂದಲೂ ದೊಡ್ಡ ಇನ್ನಿಂಗ್ಸ್ ನಿರೀಕ್ಷಿಸಲಾಗುತ್ತಿದೆ.

ಪ್ಲೇಯಿಂಗ್ ಇಲೆವೆನ್

ಭಾರತದ ಪ್ಲೇಯಿಂಗ್ ಇಲೆವೆನ್ : ಯಶಸ್ವಿ ಜೈಸ್ವಾಲ್, ರೋಹಿತ್ ಶರ್ಮಾ, ಶುಭಮನ್ ಗಿಲ್ (ನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಗುರ್ನೂರ್ ಬ್ರಾರ್, ಅರ್ಶ್ದೀಪ್ ಸಿಂಗ್, ಪ್ರಿನ್ಸ್ ಯಾದವ್.

ಅಫ್ಘಾನಿಸ್ತಾನ ಪ್ಲೇಯಿಂಗ್ ಇಲೆವೆನ್: ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಇಬ್ರಾಹಿಂ ಝದ್ರಾನ್, ಸೇದಿಕುಲ್ಲಾ ಅಟಲ್, ರಹಮತ್ ಷಾ, ಹಶ್ಮತುಲ್ಲಾ ಶಾಹಿದಿ (ನಾಯಕ), ದರ್ವಿಶ್ ರಸೂಲಿ, ರಶೀದ್ ಖಾನ್, ನಂಗೇಯಾಲಿಯಾ ಖರೋಟಿ, ಎಎಮ್ ಗಜನ್ಫರ್, ಮೊಹಮ್ಮದ್ ಸಲೀಮ್ ಸಾಮಿ, ಬಿ ಸಲೀಮ್ ಸಫಿ



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports