Last Updated:
ನೆನಪಿರಲಿ ಪ್ರೇಮ್ ಅಭಿನಯದ ಕೆಂಪಾಂಬುಧಿ ಚಿತ್ರದ ಟೀಸರ್ ರಿಲೀಸ್ ಆಗಿದೆ. ಈ ಚಿತ್ರದಲ್ಲಿ ಪ್ರೇಮ್ ಅವರು ಕೆಂಪೇಗೌಡರಾಗಿಯೇ ಅಬ್ಬರಿಸಿದ್ದಾರೆ. ಈ ಚಿತ್ರ ಬೆಂಗಳೂರು ನಿರ್ಮಾತೃ ಕೆಂಪಗೌಡರ ಕತೆ ಹೇಳುತ್ತದೆ. ಈ ಸಿನಿಮಾದ ಇನ್ನಷ್ಟು ಅಧಿಕೃತ ಮಾಹಿತಿ ಇಲ್ಲಿದೆ ಓದಿ.
ಲವ್ಲಿ ಸ್ಟಾರ್ ನೆನಪಿರಲಿ ಪ್ರೇಮ್ (Nenapirali Prem) ಅವರು ನಾಡಪ್ರಭು ಕೆಂಪೇಗೌಡರ ಕತೆಯ (Nadaprabhu Kempegowda Story) ನಾಯಕರಾಗಿದ್ದಾರೆ. ಬೆಂಗಳೂರಿನ ನಿರ್ಮಾತೃ ಕೆಂಪೇಗೌಡರ ಕತೆಗೆ ಜೀವ ತುಂಬಿದ್ದಾರೆ. ತಾವೇ ಈ ಸಿನಿಮಾದಲ್ಲಿ ಕೆಂಪೇಗೌಡರಾಗಿಯೇ ಅಭಿನಯಿಸಿದ್ದಾರೆ. ರಮೇಶ್ ಬೇಗಾರ್ (Ramesh Begar) ಅವರು ಡೈರೆಕ್ಷನ್ ಮಾಡಿರೋ ಈ ಕತೆಗೆ ಕಾದಂಬರಿ ಆಧಾರವಿದೆ. ಜಾಣಗೆರೆ ವೆಂಕಟರಾಮಯ್ಯನವರು (Janagere Venkataramaiah) ಬರೆದ ಕಾದಂಬರಿನೇ ಈ ಚಿತ್ರಕ್ಕೆ ಆಧಾರವಾಗಿದೆ. ಈ ಚಿತ್ರದ ಮೊದಲ ಟೀಸರ್ ಕುತೂಹಲ ಮೂಡಿಸುವಂತೆ ಇದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.
ಕೆಂಪಾಂಬುಧಿ ಟೀಸರ್ ರಿಲೀಸ್
ಡೈರೆಕ್ಟರ್ ರಮೇಶ್ ಬೇಗಾರ್ ಅವರು ಈ ಚಿತ್ರದಲ್ಲಿ ಸುಮಾರು ವಿಚಾರಗಳನ್ನ ಹೇಳುತ್ತಿದ್ದಾರೆ. ಬದಲಾಗುತ್ತಿರೋ ಗಾರ್ಡನ್ ಸಿಟಿಯ ಕತೆಯನ್ನು ಇದರಲ್ಲಿ ತೋರಿಸುತ್ತಿದ್ದಾರೆ.
ಕೆಂಪಗೌಡಗರ ಬಗೆಗಿನ ಈ ಚಿತ್ರದಲ್ಲಿ ಕಾಲ್ಪನಿಕ ಕತೆ ಏನು ಇಲ್ಲ. ಈಗಾಗಲೇ ಹೇಳಿದಂತೆ ಜಾಣಗೆರೆ ವೆಂಕಟರಾಮಯ್ಯನವರ ಕಾದಂಬರಿಯನ್ನ ಇದು ಆಧರಿಸಿದೆ.
ಈ ಸಿನಿಮಾದಲ್ಲಿ ನೆನಪಿರಲಿ ಪ್ರೇಮ್ ಅವರು ಕಂಪೇಗೌಡರ ರೋಲ್ ಮಾಡಿದ್ದಾರೆ. ನಟಿ ಮೇಘನಾ ಗಾಂವ್ಕರ್, ನಾಗಶ್ರೀ ಬೇಗಾರ್,ರಾಜೇಶ್ ನಟರಂಗ, ಸುಧಾ ಬೆಳವಾಡಿ, ಸಂಯುಕ್ತಾ ಹೊರನಾಡು, ರಾಜೇಂದ್ರ ಕಾರಂತ್, ರಮೇಶ್ ಹಂಡಿತ್, ಬಿ.ಎಲ್. ರವಿಕುಮಾರ್, ನಟರಾಜ್ ರಾವ್ ಸೇರಿದಂತೆ ಇನ್ನು ಹಲವರು ಅಭಿನಯಿಸಿದ್ದಾರೆ.
ಈ ಚಿತ್ರಕ್ಕೆ ವೀರ್ ಸಮರ್ಥ್ ಸಂಗೀತ ಕೊಟ್ಟಿದ್ದಾರೆ. ಕರ್ಮಷಿಲ್ ಚಿತ್ರಗಳಿಗೆ ಸಂಗೀತ ಕೊಡುವ ವೀರ್ ಸಮರ್ಥ್ ನಾಡ ಪ್ರಭುಗಳ ಈ ಚಿತ್ರಕ್ಕೆ ಮ್ಯೂಸಿಕ್ ಮಾಡಿದ್ದಾರೆ.
ಕಾದಂಬರಿ ಆಧರಿಸಿದ ಸಿನಿಮಾ
ಶಶೀರ್ ಶೃಂಗೇರಿ ಈ ಸಿನಿಮಾದ ಕ್ಯಾಮರಾವರ್ಕ್ ಮಾಡಿದ್ದಾರೆ. ಅಭಿಷೇಕ್ ಹೆಬ್ಬಾರ್ ಕಲಾ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಟೀಸರ್ ಪ್ರಾಮಿಸಿಂಗ್ ಆಗಿದೆ. ನಾಡಪ್ರಭುಗಳ ಕತೆ ಅಂದ್ಮೇಲೆ ಬೆಂಗಳೂರನ್ನ ಹೇಗೆಲ್ಲ ಕಟ್ಟಿದ್ದಾರೆ ಅನ್ನುವುದನ್ನ ಇದು ಕೊಟ್ಟಿಕೊಡುತ್ತಿದೆ.
ಕೆಂಪೇಗೌಡರು ದೂರದೃಷ್ಟಿ ಅದ್ಭುತವಾಗಿಯೇ ಇತ್ತು. ಅದಕ್ಕೆನೇ ನೀರಿನ ಮೂಲಗಳಿಗಾಗಿಯೇ ಕೆರೆಕಟ್ಟೆಗಳನ್ನ ಕಟ್ಟಿದರು. ಪರಿಸರದ ಮಹತ್ವ ಇವರಿಗೆ ಆಗಲೇ ತಿಳಿದಿತ್ತು. ಹಾಗೆ ನಾಡಪ್ರಭು ಕೆಂಪೇಗೌಡರ ಚಿಂತನೆಗಳು ಇಂದಿಗೂ ಬೆಂಗಳೂರಿನ ಅಸ್ತಿತ್ವದ ಅವಿಭಾಜ್ಯ ಭಾಗವಾಗಿವೆ.
ಕೆಂಪಾಂಬುಧಿ ಚಿತ್ರವು ಗಾರ್ಡನ್ ಸಿಟಿಯ ಹಸಿರು ವೈಭವವನ್ನ ನೆನಪಿಸುವ ಕೆಲಸವನ್ನು ಮಾಡುತ್ತದೆ. ಪರಿಸರ ಸಂರಕ್ಷಣೆ ಹಾಗೂ ಬೆಂಗಳೂರು ನಗರವನ್ನ ಕಟ್ಟಿದ ಮೂಲ ಮೌಲ್ಯಗಳ ಕಡೆಗೆ ಸಮಾಜದ ಗಮನ ಸೆಳೆಯುವ ಕೆಲಸವನ್ನು ಈ ಚಿತ್ರ ಮಾಡಲಿದೆ.
ಸದ್ಯಕ್ಕೆ ಈ ಸಿನಿಮಾದ ಟೀಸರ್ ಮಾತ್ರ ರಿಲೀಸ್ ಆಗಿದೆ. ಒಂದು ಭವ್ಯ ಚಿತ್ರದಂತೆನೂ ಇದು ಕಾಣಿಸುತ್ತಿದೆ. ಒಳ್ಳೆ ಕಲಾವಿದರು, ಒಳ್ಳೆ ಟೆಕ್ನಿಷನ್‌ಗಳು ಈ ಚಿತ್ರಕ್ಕಾಗಿಯೇ ಕೆಲಸ ಮಾಡಿದ್ದಾರೆ.
ಇದು ಚಿತ್ರದ ಟೀಸರ್ ಅಲ್ಲಿಯೇ ಕಾಣಿಸುತ್ತಿದೆ. ಈ ಚಿತ್ರಕ್ಕೆ ಹೋಂಬಾಳೆ ಮ್ಯೂಸಿಕ್ ಸಹಯೋಗ ನೀಡಿದೆ. ಪ್ರಶಾಂತ್ ಪ್ರಕಾಶ್ ಫ್ಯಾಮಿಲಿ ಫೌಂಡೇಶನ್ ಈ ಚಿತ್ರವನ್ನ ಪ್ರಸ್ತುತ ಪಡಿಸುತ್ತಿದೆ ಅಂತ ಹೇಳಬಹುದು.
Bangalore [Bangalore],Bangalore,Karnataka













