NEET: ಕೊನೆಗೂ ಎಚ್ಚೆತ್ತುಕೊಂಡ NTA; ವಿದ್ಯಾರ್ಥಿಗಳ ಖಾತೆ ಸೇರಲಿದೆ ಅಂದಾಜು 360 ಕೋಟಿ! ಮರು ಪರೀಕ್ಷೆ ಬಗ್ಗೆ ಮಹತ್ವದ ಅಪ್ಡೇಟ್ | | ACTPnews

ನೀಟ್


Last Updated:

NEET UG 2026 ಮರುಪರೀಕ್ಷೆಗೆ ಹೊಸ ನೋಂದಣಿ ಬೇಡ, ಹಳೆಯ ಅರ್ಜಿ ಮಾನ್ಯ, ಪ್ರವೇಶ ಪತ್ರ ಮಾತ್ರ ಹೊಸದು, ಹೆಚ್ಚುವರಿ ಶುಲ್ಕ ಇಲ್ಲ, ಹಳೆಯ ಶುಲ್ಕ ರಿಫಂಡ್, ದಿನಾಂಕವನ್ನು NTA ನಂತರ ತಿಳಿಸಲಿದೆ

ನೀಟ್
ನೀಟ್

ಬೆಂಗಳೂರು: ಮೇ 3, 2026ರಂದು ನಡೆದ NEET UG 2026 ಪರೀಕ್ಷೆ (Exam) ರದ್ದುಗೊಂಡ ಬಳಿಕ ದೇಶಾದ್ಯಂತ ಪರೀಕ್ಷೆ ಕಟ್ಟಿದ್ದ 22.79 ಲಕ್ಷ ವೈದ್ಯಕೀಯ ಆಕಾಂಕ್ಷಿಗಳ (Medical Aspirants) ಎದೆ ಝಲ್ ಎಂದಿತ್ತು. “ಮತ್ತೆ ಹೊಸದಾಗಿ ಅರ್ಜಿ ತುಂಬಬೇಕಾ? ಮತ್ತೆ ಹಣ ಕಟ್ಟಬೇಕಾ?” ಎಂಬ ಪ್ರಶ್ನೆ (Question) ಎಲ್ಲರ ಮನಸಲ್ಲೂ ಮತ್ತೆ ವಿಷಾದಕ್ಕೆ ಕಾರಣವಾಗಿತ್ತು. ಆದರೆ ಮೇ 12, 2026ರಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ನೀಡಿದ ಅಧಿಕೃತ ಪ್ರಕಟಣೆ ಆ ಎಲ್ಲ ಆತಂಕಗಳನ್ನು ಒಂದೇ ಏಟಿಗೆ ದೂರ ಮಾಡಿದೆ.

ಮಹತ್ವದ ತೀರ್ಮಾನ; ಅದೊಂದೇ ಬದಲಾವಣೆ

NTA neet.nta.nic.in ಮತ್ತು nta.ac.in ವೆಬ್‌ಸೈಟ್‌ಗಳಲ್ಲಿ ಅಧಿಕೃತ ಪ್ರೆಸ್ ನೋಟ್ ಮತ್ತು ಸಾರ್ವಜನಿಕ ಸೂಚನೆ ಹೊರಡಿಸಿ ಸ್ಪಷ್ಟಪಡಿಸಿದೆ. NEET 2026 ಮರು-ಪರೀಕ್ಷೆಗೆ ಹೊಸ ನೋಂದಣಿ ಅಗತ್ಯವೇ ಇಲ್ಲ. ಫೆಬ್ರವರಿ 8, 2026ರಂದು ಆರಂಭವಾಗಿ ಮಾರ್ಚ್ 11, 2026ರಂದು ಮುಕ್ತಾಯವಾದ ನೋಂದಣಿ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳು ಸಲ್ಲಿಸಿದ ಎಲ್ಲ ವಿವರಗಳು, ಅರ್ಜಿ ಮಾಹಿತಿ, ಪರೀಕ್ಷಾ ಕೇಂದ್ರ ಆಯ್ಕೆ, ವೈಯಕ್ತಿಕ ದಾಖಲೆಗಳು ಮರು-ಪರೀಕ್ಷೆಗೂ ಯಥಾವತ್ತಾಗಿ ಮಾನ್ಯವಿರುತ್ತವೆ. ಇಷ್ಟರ ನಡುವೆ ಪರೀಕ್ಷಾ ಪ್ರವೇಶ ಪತ್ರ ಮಾತ್ರ ಹೊಸದಾಗಿ ಕೊಡಲಾಗುತ್ತದೆ ಅಷ್ಟೇ!

ಸ್ವಂತ ಖರ್ಚಿನಲ್ಲಿ ಪರೀಕ್ಷೆ ನಡೆಸಲು ಮುಂದಾದ NTA

ಈ ನಿರ್ಧಾರ ಕೇವಲ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಮಾತ್ರವಲ್ಲ ಮೇ 2026ರಲ್ಲಿ ನೋಂದಾಯಿಸಿ ಈ ಕಾರಣಕ್ಕೆ ಪರೀಕ್ಷೆ ಬರೆಯಲಾಗದ ಎಲ್ಲ ವಿದ್ಯಾರ್ಥಿಗಳಿಗೂ ಅನ್ವಯಿಸುತ್ತದೆ. ಹೆಚ್ಚುವರಿ ಶುಲ್ಕ ಸಂಪೂರ್ಣ ಶೂನ್ಯ ಎಂದು ಇಲಾಖೆ ಘೋಷಿಸಿದ್ದು ಮರು-ಪರೀಕ್ಷೆಯನ್ನು NTA ತನ್ನ ಸ್ವಂತ ಖರ್ಚಿನಲ್ಲಿ ನಡೆಸಲಿದೆ.

ರಿಫಂಡ್‌ ಖಂಡಿತ, ಆದರೆ ದಿನಾಂಕ ನಿಗದಿಯಾಗಿಲ್ಲ

ಮತ್ತೊಂದು ಮಹತ್ವದ ಸಂಗತಿ ಏನೆಂದರೆ ಈಗಾಗಲೇ ರದ್ದಾದ ಮೇ 3ರ ಪರೀಕ್ಷೆಗೆ ವಿದ್ಯಾರ್ಥಿಗಳು ಪಾವತಿಸಿದ ನೋಂದಣಿ ಶುಲ್ಕ ಮರುಪಾವತಿ ಆಗಲಿದೆ. ಆದರೆ ರಿಫಂಡ್‌ನ ನಿಖರ ದಿನಾಂಕ ಮತ್ತು ಪ್ರಕ್ರಿಯೆಯ ವಿವರಗಳನ್ನು NTA ಮುಂದಿನ ದಿನಗಳಲ್ಲಿ ಪ್ರಕಟಿಸಲಿದೆ ಎಂದು ತಿಳಿಸಿದೆ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಒಂದು ಕಟ್ಟುನಿಟ್ಟಿನ ಎಚ್ಚರಿಕೆ ಯಾವುದೇ ಕೋಚಿಂಗ್ ಸಂಸ್ಥೆ ಅಥವಾ ಮೂರನೇ ವ್ಯಕ್ತಿ “ಮರು-ನೋಂದಣಿ ಮಾಡಿಸಿಕೊಡುತ್ತೇವೆ” ಎಂದು ಹಣ ಕೇಳಿದರೆ ಅದು ಸಂಪೂರ್ಣ ಮೋಸ.
360 ಕೋಟಿ ವಾಪಾಸ್‌ ಮಾಡಲು ಸಜ್ಜಾದ ಇಲಾಖೆ

ಇಡೀ ಪ್ರಕ್ರಿಯೆ ಉಚಿತ ಮತ್ತು ಅಧಿಕೃತ. ಇದು ವಿದ್ಯಾರ್ಥಿಗಳ ನೆಮ್ಮದಿಗೆ ಕಾರಣವಾಗಿದೆ. ಏಕೆಂದರೆ 1000-1700 ರೂಪಾಯಿವರೆಗೆ ಅಂದಾಜು 360 ಕೋಟಿ ರೂಪಾಯಿಯವರೆಗೆ ಪರೀಕ್ಷಾ ಶುಲ್ಕವಾಗಿ NTA ಗೆ ಜಮೆಯಾಗಿತ್ತು, ಈಗ ಮತ್ತೊಂದು ಪರೀಕ್ಷೆಗೆ ಮತ್ತದೇ ನೋಂದಣಿ ಗುದ್ದಾಟ ನಡೆಯಲಿದೆಯೇ? ಅಷ್ಟೇ ಹಣ ತುಂಬಬೇಕೆ ಎಂಬ ಆಕಾಂಕ್ಷಿಗಳ ತಳಮಳಕ್ಕೆ ಇಲಾಖೆ ತಿಲಾಂಜಲಿ ಇಟ್ಟಿದೆ.

ಇದೆಲ್ಲಾ ವಿಷಯ ಗಮನದಲ್ಲಿರಲಿ

ಇದನ್ನೂ ಓದಿ: BDA Site: ಬೆಂಗಳೂರಿನ ಹೃದಯ ಭಾಗದಲ್ಲಿ ಸೈಟ್‌ ಹರಾಜು; ಇನ್ನೂ 9 ದಿನದ ಅವಕಾಶ, ನಿಮ್ಮ ಕನಸಿನ ಜಾಗದ ಬೆಲೆ ಗೊತ್ತಾ?

NTA ವಿದ್ಯಾರ್ಥಿಗಳು ಮತ್ತು ಪೋಷಕರನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಡುತ್ತಿರುವ ಅಪ್ರಮಾಣಿತ ವದಂತಿಗಳನ್ನು ನಂಬಬಾರದೆಂದು ವಿಶೇಷವಾಗಿ ಎಚ್ಚರಿಸಿದೆ. ಮರು-ಪರೀಕ್ಷೆಯ ದಿನಾಂಕ, ಹಾಲ್ ಟಿಕೆಟ್ ಬಿಡುಗಡೆ ಸೇರಿದಂತೆ ಎಲ್ಲ ಮಾಹಿತಿಯನ್ನು ಕೇವಲ neet.nta.nic.in ಮತ್ತು nta.ac.in ವೆಬ್‌ಸೈಟ್‌ಗಳಿಂದ ಮಾತ್ರ ಪಡೆಯಬೇಕು. SMS ಅಲರ್ಟ್‌ಗಾಗಿ ನೋಂದಾಯಿತ ಮೊಬೈಲ್ ನಂಬರ್ ಚಾಲ್ತಿಯಲ್ಲಿಡಬೇಕು. ಹೆಚ್ಚಿನ ಮಾಹಿತಿಗೆ neet-ug@nta.ac.in ಇಮೇಲ್ ಅಥವಾ 011-40759000 ಸಂಖ್ಯೆಗೆ ಕರೆ ಮಾಡಬಹುದು. ಪರೀಕ್ಷೆಯ ಪಠ್ಯಕ್ರಮ ಮತ್ತು ಮಾದರಿ ಬದಲಾಗಿಲ್ಲವಾದ್ದರಿಂದ ವಿದ್ಯಾರ್ಥಿಗಳು ಗೊಂದಲಕ್ಕೊಳಗಾಗದೆ ತಯಾರಿ ಮುಂದುವರಿಸಬೇಕೆಂದು NTA ಸ್ಪಷ್ಟಪಡಿಸಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports