SRH vs RCB,IPL 2026: ಹೈದರಾಬಾದ್​ ವಿರುದ್ಧ ಆರ್​ಸಿಬಿಗೆ ಸೋಲಿನ ನಿರಾಶೆ! ಆದ್ರೂ ಐಪಿಎಲ್ ಇತಿಹಾಸದಲ್ಲಿ ಮೊದಲ ಬಾರಿಗೆ ಅಗ್ರಸ್ಥಾನ ಪಡೆದ ಬೆಂಗಳೂರು | ಕ್ರೀಡಾ ಸುದ್ದಿ | ACTPnews

ಆರ್​ಸಿಬಿ


Last Updated:

ತವರಿನ ಮೈದಾನದಲ್ಲಿ ಅಬ್ಬರದ ಬ್ಯಾಟಿಂಗ್ ಮಾಡಿದ್ದ ಸನ್​ರೈಸರ್ಸ್ ಹೈದರಾಬಾದ್​ ತಂಡ 20 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 255 ರನ್​​ಗಳ ಬೃಹತ್ ಮೊತ್ತ ದಾಖಲಿಸಿತು. 256 ರನ್​ಗಳ ಗುರಿಯನ್ನ ಬೆನ್ನಟ್ಟಿದ ಆರ್​ಸಿಬಿ 20 ಓವರ್​​​​​​​​​ಗಳಲ್ಲಿ 4 ವಿಕೆಟ್ ಕಳೆದುಕೊಂಡು 200 ರನ್​​​ಗಳಿಸಲಷ್ಟೇ ಶಕ್ತವಾಗಿ ಸೋಲು ಕಂಡಿತು.

ಆರ್​ಸಿಬಿ
ಆರ್​ಸಿಬಿ

ಐಪಿಎಲ್ 2026ರ 67ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 55 ರನ್​ಗಳ ಭರ್ಜರಿ ಜಯ ಸಾಧಿಸಿದೆ. ಆದರೆ ಈ ಗೆಲುವು ಅವರಿಗೆ ಅಂಕಪಟ್ಟಿಯಲ್ಲಿ ಅಗ್ರ 2 ಸ್ಥಾನ ತಂದುಕೊಡಲು ನೆರವಾಗಲಿಲ್ಲ. ಹೈದರಾಬಾದ್ 3ನೇ ಸ್ಥಾನದಲ್ಲೇ ತನ್ನ ಲೀಗ್ ಹಂತವನ್ನ ಪೂರ್ಣಗೊಳಿಸಿತು. ಇತ್ತ ಆರ್​ಸಿಬಿ ಸೋಲು ಕಂಡರೂ ತನ್ನ ಅಗ್ರಸ್ಥಾನವನ್ನ ಉಳಿಸಿಕೊಂಡು 19ನೇ ಆವೃತ್ತಿಯ ಲೀಗ್ ಹಂತವನ್ನ ಕೊನೆಗೊಳಿಸಿದೆ. ತವರಿನ ಮೈದಾನದಲ್ಲಿ ಅಬ್ಬರದ ಬ್ಯಾಟಿಂಗ್ ಮಾಡಿದ್ದ ಸನ್​ರೈಸರ್ಸ್ ಹೈದರಾಬಾದ್​ ತಂಡ 20 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 255 ರನ್​​ಗಳ ಬೃಹತ್ ಮೊತ್ತ ದಾಖಲಿಸಿತು. 256 ರನ್​ಗಳ ಗುರಿಯನ್ನ ಬೆನ್ನಟ್ಟಿದ ಆರ್​ಸಿಬಿ 20 ಓವರ್​​​​​​​​​ಗಳಲ್ಲಿ 4 ವಿಕೆಟ್ ಕಳೆದುಕೊಂಡು 200 ರನ್​​​ಗಳಿಸಲಷ್ಟೇ ಶಕ್ತವಾಗಿ ಸೋಲು ಕಂಡಿತು.

256 ರನ್​ಗಳ ಬೃಹತ್ ಗುರಿ ಬೆನ್ನಟ್ಟಿದ ಆರ್​ಸಿಬಿ ತಂಡ ಉತ್ತಮ ಆರಂಭ ಪಡೆದುಕೊಂಡಿತು. ಕೇವಲ 4.3 ಓವರ್​ಗಳಲ್ಲಿ 60 ರನ್​ಗಳ ಜೊತೆಯಾಟ ನಡೆಸಿತು. ಆರಂಭಿಕನಾಗಿ ಬಡ್ತಿ ಪಡೆದು ಆಡಿದ ವೆಂಕಟೇಶ್ ಅಯ್ಯರ್ ಸ್ಫೋಟಕ ಆಟವಾಡಿದರು. ಕೇವಲ 19 ಎಸೆತಗಳಲ್ಲಿ ತಲಾ 4 ಬೌಂಡರಿ, ಸಿಕ್ಸರ್​ಗಳ ಸಹಿತ 44 ರನ್​ಗಳಿಸಿ ಇಶಾನ್ ಮಾಲಿಂಗ ಬೌಲಿಂಗ್​​ನಲ್ಲಿ ಅಭಿಷೇಕ್ ಶರ್ಮಾಗೆ ಕ್ಯಾಚ್ ನೀಡಿ ಔಟ್ ಆದರು. ಅಯ್ಯರ್ ಬೆನ್ನಲ್ಲೇ ವಿರಾಟ್ ಕೊಹ್ಲಿ 15 ರನ್​ಗಳಿಸಿ ಸಕಿಬ್ ಹುಸೇನ್​​ ಬೌಲಿಂಗ್​​ನಲ್ಲಿ ಸ್ಮರಣ್​ಗೆ ಕ್ಯಾಚ್ ನೀಡಿ ಔಟ್ ಆದರು.

3ನೇ ಕ್ರಮಾಂಕದಲ್ಲಿ ಆಡಿದ ದೇವದತ್ ಪಡಿಕ್ಕಲ್ ಇಂದು ನಿರೀಕ್ಷಿತ ಪ್ರದರ್ಶನ ತೋರಲಿಲ್ಲ. 14 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ಸಹಿತ 21 ರನ್​ಗಳಿಸಿ ಮಾಲಿಂಗ ಬೌಲಿಂಗ್​ನಲ್ಲಿ ಅಭಿಷೇಕ್​ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.

ಪವರ್​ ಪ್ಲೇ ವೇಳೆ ಪಂದ್ಯವನ್ನ ಗೆಲ್ಲಬೇಕೆಂದು ಆಡುತ್ತಿದ್ದ ಆರ್​ಸಿಬಿ 3 ವಿಕೆಟ್ ಕಳೆದುಕೊಂಡ ನಂತರ ಕೇವಲ ಅಗ್ರಸ್ಥಾನ ಉಳಿಸಿಕೊಳ್ಳಲು ನಿರ್ಧರಿಸಿ ನಿಧಾನಗತಿಯ ಬ್ಯಾಟಿಂಗ್​ಗೆ ಮೊರೆ ಹೋಯಿತು. ನಾಯಕ ರಜತ್​ ಹಾಗೂ ಕೃನಾಲ್ ಪಾಂಡ್ಯ ಇಬ್ಬರು 166 ರನ್​​ಗಳ ಗಡಿ ದಾಟಿಸಲು ಸಿಂಗಲ್ ಡಬಲ್ಸ್​ಗಳಲ್ಲೇ ಆಡಿದರು. ಹಾಗೊಂದು, ಹೀಗೊಂದು ಬೌಂಡರಿ ಸಿಡಿಸುತ್ತಿದ್ದ ಈ ಜೋಡಿ 4ನೇ ವಿಕೆಟ್ ಜೊತೆಯಾಟದಲ್ಲಿ 84 ರನ್​ ಸೇರಿಸಿದರು.

ರಜತ್​ ಪಾಟೀದಾರ್ 39 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್ ಸಹಿತ 56 ರನ್​ಗಳಿಸಿ 19ನೇ ಓವರ್​​ನಲ್ಲಿ ಟ್ರಾವಿಸ್​ ಹೆಡ್ ಬೌಲಿಂಗ್​​ನಲ್ಲಿ ಸ್ಮರಣ್​ಗೆ ಕ್ಯಾಚ್ ನೀಡಿ ಪೆವಿಲಿಯನ್​ ಸೇರಿಕೊಂಡರು. ಕೃನಾಲ್ ಪಾಂಡ್ಯ ಎಸೆತಗಳಲ್ಲಿ ಬೌಂಡರಿಗಳ ಸಹಿತ ಅಜೇಯ 41ರನ್​ಗಳಿಸಿದರೆ, ಟಿಮ್ ಡೇವಿಡ್ ಅಜೇಯ 15 ರನ್​ಗಳಿಸಿದರು.

ಅಗ್ರಸ್ಥಾನವನ್ನ ಪಡೆಯುವ ಉದ್ದೇಶವೇ ಮುಖ್ಯವಾಗಿದ್ದರಿಂದ ಆರ್​ಸಿಬಿ ಯಾವುದೇ ಹಂತದಲ್ಲಿ ಗೆಲುವಿಗಾಗಿ ಪ್ರಯತ್ನಿಸದೇ 20 ಓವರ್​​​ ಪೂರ್ಣಗೊಳಿಸಿತು. ಕೊನೆಗೆ ಆರ್​ಸಿಬಿ 20 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 200  ರನ್​ಗಳಿಸಿತು.

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

SRH vs RCB,IPL 2026: ಹೈದರಾಬಾದ್​ ವಿರುದ್ಧ ಆರ್​ಸಿಬಿಗೆ ಸೋಲಿನ ನಿರಾಶೆ! ಆದ್ರೂ ಐಪಿಎಲ್ ಇತಿಹಾಸದಲ್ಲಿ ಮೊದಲ ಬಾರಿಗೆ ಅಗ್ರಸ್ಥಾನ ಪಡೆದ ಬೆಂಗಳೂರು



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports