Kamal Haasan: ಪ್ರಧಾನಿ ಮೋದಿಯ ಮನವಿಗೆ ಕಮಲ್ ಹಾಸನ್ ಸಾಥ್! ಹೇಳಿದ್ದೇನು ಗೊತ್ತಾ? | | ACTPnews

ಇಂಧನ ಉಳಿಸಿ, ದೇಶ ಬಲಪಡಿಸಿ; ಪ್ರತಿ ಹನಿಯೂ ಬಡ ಭಾರತೀಯನನ್ನ ಉಳಿಸುತ್ತದೆ; ಕಮಲ್ ಹಾಸನ್!


Last Updated:

ರಾಜ್ಯ ಮತ್ತು ಕೇಂದ್ರ ಸರ್ಕಾರ ಬಸ್, ಮೆಟ್ರೋ, ರೈಲ್ವೆ ಪ್ರಯಾಣ ದರ ಕಡಿಮೆ ಮಾಡಬೇಕಿದೆ. ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ನಂತಹ ರಾಜ್ಯ ತೆರಿಗೆ ಕಡಿಮೆ ಮಾಡಬೇಕಿದೆ. ಇದರಿಂದ ಸದ್ಯದ ಪರಿಸ್ಥಿತಿಯಲ್ಲಿ ಇಂಧನ ಉಳಿತಾಯ ಆಗುತ್ತದೆ ಅಂತ ಕಮಲ್ ಹಾಸನ್ ಹೇಳಿದ್ದಾರೆ. ಇವರ ಮಾತುಗಳ ಕಂಪ್ಲೀಟ್ ವಿವರ ಇಲ್ಲಿದೆ ಓದಿ.

ಇಂಧನ ಉಳಿಸಿ, ದೇಶ ಬಲಪಡಿಸಿ; ಪ್ರತಿ ಹನಿಯೂ ಬಡ ಭಾರತೀಯನನ್ನ ಉಳಿಸುತ್ತದೆ; ಕಮಲ್ ಹಾಸನ್!
ಇಂಧನ ಉಳಿಸಿ, ದೇಶ ಬಲಪಡಿಸಿ; ಪ್ರತಿ ಹನಿಯೂ ಬಡ ಭಾರತೀಯನನ್ನ ಉಳಿಸುತ್ತದೆ; ಕಮಲ್ ಹಾಸನ್!

ಕಲಾದೇವಿ ಪುತ್ರ ಕಮಲ್ ಹಾಸನ್ (Kamal Haasan) ಒಂದು ಮನವಿ ಮಾಡಿದ್ದಾರೆ. ಇರಾನ್ ಯುದ್ಧ ಸನ್ನಿವೇಶ ಇದೆ. ಈ ಹಿನ್ನೆಲೆಯಲ್ಲಿ ಜನರಿಗೆ ಮನವಿ ಮಾಡಿಕೊಂಡಿದ್ದಾರೆ. ನಮ್ಮ ಹಿರಿಯರು ಯುದ್ಧದ ಸನ್ನಿವೇಷದಲ್ಲಿ ಯೋಧರಿಗಾಗಿಯೇ ಚಿನ್ನಕೊಟ್ಟಿದ್ದಾರೆ. ಲಾಲ್ ಬಹದ್ದೂರ್ ಶಾಸ್ತ್ರಿಯವರು (Lal Bahadur Shastri) ಇದ್ದ ಸಮಯದಲ್ಲಿ ಒಂದು ವಾರದಲ್ಲಿ ಒಂದು ಊಟ ಬಿಟ್ಟಿದ್ದಾರೆ. ಆದರೆ, ನಮಗೆ ಇಷ್ಟೊಂದು ತ್ಯಾಗ ಮಾಡುವ ಅಗತ್ಯ ಇಲ್ಲ. ಆದರೆ, ಸದ್ಯದ ಇರಾನ್ ಯುದ್ಧದ (Iran War) ಹಿನ್ನೆಲೆಯಲ್ಲಿ ಇಂಧನ ಉಳಿಸುವ ಅಗತ್ಯ ಇದೆ ಅಂತಲೇ ಕಮಲ್ ಹಾಸನ್ ಹೇಳಿದ್ದಾರೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರ ಮನವಿಗೂ ಧ್ವನಿಗೂಡಿಸಿದ್ದಾರೆ. ಇವರ ಮಾತುಗಳ ಕಂಪ್ಲೀಟ್ ವಿವರ ಇಲ್ಲಿದೆ ಓದಿ.

ಸರ್ಕಾರಗಳು 2 ಕೆಲಸ ಮಾಡ್ಬೇಕಿದೆ..

ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಎರಡು ಕೆಲಸ ಮಾಡಬೇಕಿದೆ. ಮೊದಲನೇಯದ್ದು; ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ವ್ಯಾಟ್ ನಂತಹ ರಾಜ್ಯ ತೆರಿಗೆ ಅನ್ನ ಕಡಿಮೆ ಮಾಡಬೇಕಿದೆ.

Kamal Haasan supports PM Modi appeal Share Video on social media

ಸರ್ಕಾರಗಳು 2 ಕೆಲಸ ಮಾಡ್ಬೇಕಿದೆ..

ಎರಡನೇಯದ್ದು; ಬಸ್ ಪ್ರಯಾಣ ದರ, ರೈಲು ಟಿಕೆಟ್ ದರ, ಮೆಟ್ರೋ ಪ್ರಯಾಣ ದರವನ್ನು ಕಡಿಮೆ ಮಾಡಬೇಕಿದೆ. ಇದರಿಂದ ಜನರು ವೈಯಕ್ತಿಕ ವಾಹನಗಳ ಬಳಕೆ ಕಡಿಮೆ ಮಾಡ್ತಾರೆ. ಹೀಗೆ ಇಂಧನ ಉಳಿತಾಯವೂ ಆಗುತ್ತದೆ ಅಂತಲೇ ಕಮಲ್ ಹಾಸನ್ ಅಭಿಪ್ರಾಯ ಪಟ್ಟಿದ್ದಾರೆ.

ಚೀನಾ ಯುದ್ಧದ ಸಮಯ…

ಈ ಹಿಂದೆ 1962 ರಲ್ಲಿ ಚೀನಾ ಯುದ್ಧ ನಡೆದಿತ್ತು. ಗಡಿಯಲ್ಲಿ ನಮ್ಮ ಸೈನಿಕರು ಹೋರಾಡುತ್ತಿದ್ದರು. ಅವರ ಬೆಂಬಲಕ್ಕೆ ಇಡೀ ದೇಶ ನಿಂತಿತ್ತು. ತಮ್ಮ ಮನೆಗಳಲ್ಲಿಯ ಚಿನ್ನವನ್ನ ನಮ್ಮ ಹಿರಿಯರು ದಾನ ಮಾಡಿದ್ದರು.

1965 ರಲ್ಲಿ ಆಹಾರ ಧಾನ್ಯಗಳ ಕೊರತೆ ಆಗಿತ್ತು. ಆಗ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಮನವಿ ಮಾಡಿದ್ದರು. ವಾರಕ್ಕೆ ಒಂದು ಊಟವನ್ನ ಬಿಡಬೇಕು ಅಂತ ಹೇಳಿದ್ದರು.

ಇಂಧನ ಉಳಿಸೋ ಅಗತ್ಯ

ಆದರೆ, ನಮಗೆ ನಮ್ಮ ಹಿರಿಯರು ಮಾಡಿರೋ ತ್ಯಾಗದಷ್ಟು ಮಾಡಬೇಕಿಲ್ಲ. ಬದಲಾಗಿ ಇಂಧನ ಉಳಿಸೋ ಕೆಲಸ ಮಾಡಬೇಕಿದೆ. ಇದರಲ್ಲಿ ನಾಗರಿಕರು ಮಾತ್ರ ಇದನ್ನ ಮಾಡಿದರೆ ಸಾಲದು, ಸರ್ಕಾರಗಳು ಇದಕ್ಕೆ ಮುಂದಾಗಬೇಕಿದೆ.

Kamal Haasan supports PM Modi appeal Share Video on social media

ಚೀನಾ ಯುದ್ಧದ ಸಮಯ…

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಎಲ್ಲ ರಾಜ್ಯ ಸರ್ಕಾರದ ಜೊತೆಗೆ ಸಭೆ ಮಾಡಬೇಕಿದೆ. ಈ ಮೂಲಕ ಶ್ರೀಸಾಮಾನ್ಯರನ್ನ ರಕ್ಷಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿ ಕೆಲಸ ಮಾಡಬೇಕಿದೆ ಅಂತಲೂ ಕಮಲ್ ಹಾಸನ್ ಹೇಳಿದ್ದಾರೆ.

ಇಂಧನ ಉಳಿತಾಯ…

ಇಂಧನ ಉಳಿತಾಯ ಅಗತ್ಯ ಇದೆ. ಇಂದು ಇಂಧನ ಘಟಗಳನ್ನ ಉಳಿಸಿದರೆ, ಇದು ನಾಳೆಯ ಭಾರತವನ್ನ ಬಲಪಡಿಸುತ್ತದೆ. ಪ್ರತಿ ಹನಿಯೂ ಹಣದುಬ್ಬರದಿಂದ ಬಡ ಭಾರತೀಯನನ್ನ ರಕ್ಷಿಸುತ್ತದೆ.

ಆದರೆ, ಈ ಒಂದು ಸ್ಥಿತಿಯನ್ನ ಒಗ್ಗಟ್ಟಿನಿಂದ ಎದುರಿಸಿದೆ ಸಾಕು, ಭಾರತ ಇನ್ನಷ್ಟು ಬಲಗೊಳ್ಳುತ್ತದೆ ಅಂತಲೇ ಕಮಲ್ ಹಾಸನ್ ಹೇಳಿಕೊಂಡಿದ್ದಾರೆ.

ವಿಡಿಯೋ ವೈರಲ್

ಕಮಲ್ ಹಾಸನ್ ಈ ಎಲ್ಲ ಮಾತುಗಳ ಒಂದು ವಿಡಿಯೋ ಮಾಡಿದ್ದಾರೆ. ಅದನ್ನ ಸೋಷಿಯಲ್ ಮೀಡಿಯಾದ ತಮ್ಮ ಪೇಜ್ ಅಲ್ಲೂ ಹಂಚಿಕೊಂಡಿದ್ದಾರೆ.

ಈ ಮೂಲಕ ಇಡೀ ದೇಶದ ಜನತೆಗೆ ಕೇಳಿಕೊಂಡಿದ್ದಾರೆ. ಆದಷ್ಟು ಇಂಧನ ಉಳಿಸಿ ಭಾರತವನ್ನ ಬಲಪಡಿಸಿ ಅಂತಲೇ ಮನವಿ ಮಾಡಿದ್ದಾರೆ. ಈ ಒಂದು ವಿಡಿಯೋ ನೋಡಿದವರು ಕಾಮೆಂಟ್ ಬಾಕ್ಸ್ ಅಲ್ಲಿ ಕಾಂಪ್ಲಿಮೆಂಟ್ ಅನ್ನೆ ಹಾಕಿದ್ದಾರೆ ಅಂತಲೇ ಹೇಳಬಹುದು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports