Last Updated:
ತಂಡವನ್ನ ಕಟ್ಟಲು ಟೀಮ್ ಮ್ಯಾನೇಜ್ಮೆಂಟ್ ನಿಲುವಿನ ಬಗ್ಗೆ ದಂತಕಥೆ ಮಾಜಿ ವೇಗದ ಬೌಲರ್ ಜಹೀರ್ ಖಾನ್ ತಮ್ಮ ಪ್ರಾಮಾಣಿಕ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಪ್ರಸ್ತುತ ಭವಿಷ್ಯದ ಯೋಜನೆಗಳು ಮತ್ತು ಹೊಸ ಆದ್ಯತೆಗಳ ಮೇಲೆ ಕೇಂದ್ರೀಕರಿಸುತ್ತಿರಬಹುದು, ಆದರೆ ಹಿರಿಯ ಆಟಗಾರರು ತಮ್ಮ ನಿಲುವು ಬಿಡಬಾರದು ಎಂದು ತಿಳಿಸಿದ್ದಾರೆ.
ಟೀಮ್ ಇಂಡಿಯಾ ಹಿರಿಯ ವೇಗದ ಬೌಲರ್ ಮೊಹಮ್ಮದ್ ಶಮಿ (Mohammed Shami) ಭಾರತ ತಂಡ ಮರಳುವ ಬಗ್ಗೆ ಇನ್ನೂ ಖಚಿತತೆ ಸಿಗುತ್ತಿಲ್ಲ. ನಿರಂತರ ಗಾಯದ ಸಮಸ್ಯೆಗಳು ಮತ್ತು ಜಸ್ಪ್ರೀತ್ ಬುಮ್ರಾ ಅವರ ಅಲಭ್ಯತೆ ಇದ್ದರೂ, ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ಮಾತ್ರ ಶಮಿಯನ್ನ ಮತ್ತೆ ತಂಡಕ್ಕೆ ಕರೆತರುವ ಪ್ರಯತ್ನವನ್ನ ಮಾಡುತ್ತಿಲ್ಲ. ದಕ್ಷಿಣ ಆಫ್ರಿಕಾದಲ್ಲಿ ನಡೆಯುವ 2027ರ ಏಕದಿನ ವಿಶ್ವಕಪ್ಗೆ ಭಾರತ ತಂಡ ಸಿದ್ಧತೆ ಪ್ರಾರಂಭಿಸಿದೆ. ಬಲಿಷ್ಠ ತಂಡವನ್ನ ಕಟ್ಟಲು ಹೊಸ ಪರ್ಯಾಯಗಳನ್ನು ಅನ್ವೇಷಿಸುತ್ತಿದೆಯಾದರೂ, ಈ ಪ್ರಕ್ರಿಯೆಯಲ್ಲಿ ಶಮಿ ಅವರ ಹೆಸರನ್ನ ಮಾತ್ರ ಪರಿಗಣನೆ ಮಾಡುತ್ತಿಲ್ಲ. ಹಾಗಾಗಿ ಮ್ಯಾನೇಜ್ಮೆಂಟ್ ಬಗ್ಗೆ ಕೆಲವು ಮಾಜಿ ಕ್ರಿಕೆಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.














