Last Updated:
ಅಮೃತಾ ಪ್ರೇಮ್ ಮತ್ತು ಧೀರೇನ್ ರಾಮ್ಕುಮಾರ್ ಅಭಿನಯದ ಪಬ್ಬಾರ್ ಚಿತ್ರೀಕರಣ ಕಂಪ್ಲೀಟ್ ಆಗಿದೆ. ಈ ಚಿತ್ರ ಸದ್ಯದ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.
ಪಬ್ಬಾರ್ ಸಿನಿಮಾ (Pabbar Movie) ಕಂಪ್ಲೀಟ್ ಆಗಿದೆ. ಇದರ ಕತೆ ಪಬ್ಬಾರ್ (Pabbar) ಕಣಿವೆಯ ಹಿನ್ನೆಲೆಯಲ್ಲಿ ಸಾಗುತ್ತದೆ. ಹಿಮಾಚಲ ಪ್ರದೇಶದ ಈ ಕಣಿವೆಯ ಹೆಸರನ್ನೆ ಚಿತ್ರಕ್ಕೆ ಇಟ್ಟಿದ್ದಾರೆ. ಈ ಸಿನಿಮಾದಲ್ಲಿ ನೆನಪಿರಲಿ ಪ್ರೇಮ್ ಮಗಳು ಅಮೃತಾ ಪ್ರೇಮ್ ನಾಯಕಿ ಆಗಿದ್ದಾರೆ. ರಾಜ್ ಮೊಮ್ಮಗ ಧೀರೇನ್ ರಾಮ್ಕುಮಾರ್ (Dheeren Ramkumar) ನಾಯಕರಾಗಿದ್ದಾರೆ. ಶಿವರಾಜ್ ಕುಮಾರ್ (Shiva Rajkumar) ಅವರ ಗೀತಾ ಪಿಕ್ಚರ್ಸ್ ಈ ಚಿತ್ರ ನಿರ್ಮಿಸುತ್ತಿದೆ. ಈ ಚಿತ್ರದ ಇನ್ನಷ್ಟು ವಿವರ ಇಲ್ಲಿದೆ ಓದಿ.














