2002 ರ ನೈಜ ಘಟನೆ ಸಿನಿಮಾ
ಇಡೀ ಚಿತ್ರದ ತಿರುಳು ಏನು ಅನ್ನೋದು ಈ ಒಂದು ಟೀಸರ್ ಅಲ್ಲಿ ಗೊತ್ತಾಗುತ್ತದೆ. ಆದರೆ, ಮ್ಯಾಂಗೋ ಪಚ್ಚನ ಕತೆಯ ಸಂಕ್ಷಿಪ್ತ ಚಿತ್ರಣ ಟ್ರೈಲರ್ ಅಲ್ಲಿಯೆ ಸಿಗುತ್ತದೆ.
ಮ್ಯಾಂಗೋ ಪಚ್ಚ ಚಿತ್ರದಲ್ಲಿರೋ ಕತೆಗೆ ನೈಜ ಘಟನೆಗಳ ಆಧಾರ ಇದೆ. ಮೈಸೂರಿನಲ್ಲಿ 2002 ರಲ್ಲಿ ಏನೆಲ್ಲ ಆಗಿತ್ತು. ಊರು ಮತ್ತು ಟೈಮ್ ಹೇಗೆಲ್ಲ ಬದಲಾಗುತ್ತಿತ್ತು ಅನ್ನೋದು ಇದರಲ್ಲಿದೆ.
ಭಾವನಾ ರಾಮಣ್ಣ ಇಲ್ಲಿ ಪೊಲೀಸ್ ಆಫೀಸರ್ ಪಾತ್ರ ಮಾಡಿದ್ದಾರೆ. ಮೈಸೂರಿನಲ್ಲಿ ನಡೀತಿರೋ ಗಾಂಜಾ ದಂಧೆಯನ್ನ ಮಟ್ಟ ಹಾಕಲು ಮುಂದಾಗುತ್ತಾರೆ.
ಮುಂದೇನಾಗುತ್ತದೆ ಅನ್ನೋದು ಚಿತ್ರದಲ್ಲಿ ತಿಳಿಯುತ್ತದೆ. ಆದರೆ, ಸದ್ಯಕ್ಕೆ ಚಿತ್ರದ ಟ್ರೈಲರ್ ಅಲ್ಲಿ ಒಂದಷ್ಟು ವಿಷಯ ರಿವೀಲ್ ಆಗಿದೆ. ಈ ಮೂಲಕ ಸಿನಿಮಾದ ಬಗ್ಗೆ ಒಂದಷ್ಟು ಕುತೂಹಲ ಹುಟ್ಟಿಕೊಂಡಿದೆ.
ಸಂಚಿತ್ ಸಂಜೀವ್ ಹೊಸ ಭರವಸೆ ಮೂಡಿಸಿದ್ದಾರೆ. ಎಲ್ಲ ರೀತಿಯ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. ಆಕ್ರೋಶ, ಪ್ರೀತಿ, ಸ್ನೇಹ ಹೀಗೆ ಎಲ್ಲ ಭಾವಗಳಲ್ಲೂ ಸಂಚಿತ್ ಇನ್ವಾಲ್ವ್ ಆಗಿದ್ದಾರೆ. ಅಷ್ಟೆ ಗಮನ ಸೆಳೆಯುತ್ತಾರೆ.
ಸಂಚಿತ್ ಸಂಜೀವ್ ಹೊಸ ಭರವಸೆ
ಇಡೀ ಚಿತ್ರದಲ್ಲಿ ಹೇಗೆಲ್ಲ ಮಾಡಿದ್ದಾರೆ ಅನ್ನೋದು ಜೂನ್-5 ರಂದು ತಿಳಿಯುತ್ತದೆ. ಚಿತ್ರಕ್ಕೆ ಚರಣ್ ರಾಜ್ ಸಂಗೀತ ಕೊಟ್ಟಿದ್ದಾರೆ. ಶೇಖರ್ ಚಂದ್ರ ಹಾಗೂ ಸ್ವಾಮಿ ಈ ಚಿತ್ರಕ್ಕೆ ಕ್ಯಾಮರಾವರ್ಕ್ ಮಾಡಿದ್ದಾರೆ.
ಜೂನ್-5 ರಂದು ಮ್ಯಾಂಗೋ ಪಚ್ಚ ಚಿತ್ರ ರಿಲೀಸ್ ಆಗುತ್ತಿದೆ. ಈ ಚಿತ್ರ ರಿಲೀಸ್ ಆಗುವ ಸಮಯದಲ್ಲಿ ಯಾವುದೇ ದೊಡ್ಡ ಸಿನಿಮಾಗಳು ಬರ್ತಿಲ್ಲ. ಆದರೆ, ಮರಾಠಿಯಲ್ಲಿ ಸು ಫ್ರಮ್ ಸೋ ಚಿತ್ರದ ರೀಮೇಕ್ ತುಂಬಾಡ್ಚಿ ಮಂಜುಳಾ ರಿಲೀಸ್ ಆಗುತ್ತಿದೆ.
ಸುಪ್ರಿಯಾನ್ವಿ ಹಾಗೂ ಕೆಆರ್ಜಿ ಸಂಸ್ಥೆ ಜಂಟಿ ಆಗಿಯೇ ಈ ಚಿತ್ರ ನಿರ್ಮಿಸಿವೆ. ಚಿತ್ರದಲ್ಲಿ ಭಾವನಾ ರಾಮಣ್ಣ, ಸಂಚಿತ್ ಸಂಜೀವ್, ವಿಜಯ್ ರಾಘವೇಂದ್ರ ಅಳಿಯ ಜೈ, ಕಾಜಲ್ ಕುಂದರ್, ಮೈಯೂರ್ ಪಟೇಲ್, ಮ್ಯಾಕ್ಸ್ ಮಂಜು, ಹರಿಣಿ ಶ್ರೀಕಾಂತ್ ಸೇರಿ ಇನ್ನು ಅನೇಕರು ಅಭಿನಯಿಸಿದ್ದಾರೆ.
ಮ್ಯಾಂಗೋ ಪಚ್ಚ ಚಿತ್ರಕ್ಕೆ ಸುದೀಪ್ ನಿರೂಪಣೆ ಇದೆ. ತಮ್ಮ ಖಡಕ್ ಧ್ವನಿಯಲ್ಲಿ ಮ್ಯಾಂಗೋ ಪಚ್ಚನ ಕತೆಯನ್ನ ಸುದೀಪ್ ಇಲ್ಲಿ ಹೇಳುತ್ತಿದ್ದಾರೆ.
ಇನ್ನುಳಿದಂತೆ ಕನ್ನಡಕ್ಕೆ ಮತ್ತೊಬ್ಬ ನಾಯಕ ನಟನ ಆಗಮನ ಆಗುತ್ತಿದೆ ಅನ್ನುವ ಭರವಸೆಯನ್ನು ಸಂಚಿತ್ ಸಂಜೀವ್ ಮೂಡಿಸಿದ್ದಾರೆ. ಆದರೆ, ಕಿಚ್ಚನ ಪ್ರತಿಬಿಂಬ ಅನ್ನೋದು ಅಷ್ಟೆ ಸತ್ಯ ಅಂತ ಹೇಳಬಹುದು.












