Lifestyle: ಬೇಸಿಗೆಯಲ್ಲಿ ಏಲಕ್ಕಿ ಹಾಲು ಕುಡಿಯುವುದರಿಂದ ಏನೆಲ್ಲಾ ಪ್ರಯೋಜನ? ಈ ವಿಚಾರ ಅಚ್ಚರಿ ಮೂಡಿಸೋದು ಪಕ್ಕಾ | ಕ್ರೀಡಾ ಸುದ್ದಿ | ACTPnews

ಏಲಕ್ಕಿ ಹಾಲು


Last Updated:

ಬೇಸಿಗೆಯಲ್ಲಿ ಜನರು ಅರಿಶಿನದ ಬದಲು ಏಲಕ್ಕಿ ಹಾಲು ಕುಡಿಯುತ್ತಾರೆ. ಏಲಕ್ಕಿ ಬೆರೆಸಿದ ಹಾಲನ್ನು ಕುಡಿಯುವುದರಿಂದ ಹಲವು ಪ್ರಯೋಜನಗಳಿವೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.

ಏಲಕ್ಕಿ ಹಾಲು
ಏಲಕ್ಕಿ ಹಾಲು

ಬೇಸಿಗೆಯ (Summer) ಬಿಸಿಲು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹವಾಮಾನದಲ್ಲಿನ (Weather) ಈ ಬದಲಾವಣೆ ಆರೋಗ್ಯದ (Health) ಮೇಲೆ ನೇರ ಪರಿಣಾಮ ಬೀರುತ್ತದೆ. ಬೇಸಿಗೆಯಲ್ಲಿ ಆಹಾರ ಸೇವನೆ ತುಂಬಾ ಕಡಿಮೆ. ಬದಲಾಗಿ, ಜನರು ಹೆಚ್ಚು ತಂಪು ಪಾನೀಯಗಳನ್ನು ಕುಡಿಯುತ್ತಾರೆ. ಇದು ಕೂಡ ಆರೋಗ್ಯದ ಮೇಲೆ ಹಲವು ರೀತಿಯಲ್ಲಿ ಪರಿಣಾಮವನ್ನು ಬೀರಬಹುದು. ಹೀಗಾಗಿ ಬೇಸಿಗೆಯಲ್ಲಿ ಜನರು ಅರಿಶಿನದ ಬದಲು ಏಲಕ್ಕಿ ಹಾಲು ಕುಡಿಯುತ್ತಾರೆ. ಏಲಕ್ಕಿ ಬೆರೆಸಿದ ಹಾಲನ್ನು ಕುಡಿಯುವುದರಿಂದ ಹಲವು ಪ್ರಯೋಜನಗಳಿವೆ. ಇದು ಬೇಸಿಗೆಯಲ್ಲಿ ದೇಹವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ.

ಹಾಲು ಮತ್ತು ಏಲಕ್ಕಿ ಎರಡೂ ಆಯುರ್ವೇದದಲ್ಲಿ ಪ್ರಮುಖ ಸ್ಥಾನವನ್ನು ಪಡೆದಿವೆ. ಹಾಲು ಹೆಚ್ಚಾಗಿ ಪ್ರೋಟೀನ್, ಕ್ಯಾಲ್ಸಿಯಂ, ಲ್ಯಾಕ್ಟೋಸ್ ಮತ್ತು ವಿಟಮಿನ್‌ಗಳನ್ನು ಹೊಂದಿದೆ. ಏಲಕ್ಕಿ ಕೂಡ ತನ್ನ ವಿಶಿಷ್ಟ ಸುವಾಸನೆ ಮತ್ತು ಔಷಧೀಯ ಗುಣಗಳಿಗಾಗಿ ಜಗತ್ಪ್ರಸಿದ್ಧವಾಗಿದೆ. ಹೀಗಾಗಿ ಹಾಲು ಮತ್ತು ಏಲಕ್ಕಿಯಲ್ಲಿ ಪ್ರೋಟೀನ್ ವಿಟಮಿನ್‌ಗಳು ಸಮೃದ್ಧವಾಗಿದೆ. ಬೇಸಿಗೆಯಲ್ಲಿ ಏಲಕ್ಕಿ ಹಾಲು ದೇಹವನ್ನು ತಂಪಾಗಿಸುತ್ತದೆ ಮತ್ತು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.

ಬಳಕೆ ಮಾಡುವುದು ಹೇಗೆ?

ಇಂಡಿಯನ್ ಟಿವಿ ವರದಿ ಪ್ರಕಾರ, ಏಲಕ್ಕಿ ಹಾಲನ್ನು ಪುಡಿಂಗ್‌ಗಳು, ಸೂಪ್‌ಗಳು, ಚಹಾ ಮತ್ತು ಕರಿಗಳಲ್ಲಿಯೂ ಬಳಸಬಹುದು. ಏಲಕ್ಕಿಯನ್ನು ಹಾಲಿನೊಂದಿಗೆ ಬೆರೆಸಿ ಕುಡಿಯುವುದು ಸುಲಭವಾದ ಮಾರ್ಗವಾಗಿದೆ. ಇದು ಅದರ ಪ್ರಯೋಜನಗಳನ್ನು ಮತ್ತಷ್ಟು ಹೆಚ್ಚಿಸುವುದರ ಜೊತೆಗೆ ನಿಮ್ಮನ್ನು ಆರೋಗ್ಯವಾಗಿಡುತ್ತದೆ. ಏಲಕ್ಕಿ ಹಾಲು ಕುಡಿಯುವುದರಿಂದಾಗುವ ಪ್ರಯೋಜನಗಳ ಬಗ್ಗೆ ಆಯುರ್ವೇದ ವೈದ್ಯ ಚಂಚಲ್ ಶರ್ಮಾ ಅವರು ಮಾಹಿತಿ ನೀಡಿದ್ದಾರೆ.

ಏಲಕ್ಕಿ ಹಾಲಿನ ಪ್ರಯೋಜನಗಳು

ಬಾಯಿ ಹುಣ್ಣುಗಳಿಗೆ ಪರಿಣಾಮಕಾರಿ: ಬಾಯಿ ಹುಣ್ಣುಗಳು ತೀವ್ರವಾದ ನೋವನ್ನು ಉಂಟುಮಾಡುತ್ತವೆ. ಆಹಾರ ತಿನ್ನುವುದನ್ನು ಕಷ್ಟಕರವಾಗಿಸುತ್ತದೆ. ಇಂತಹ ಸಂದರ್ಭಗಳಲ್ಲಿ ಏಲಕ್ಕಿ ಬಾಯಿ ಹುಣ್ಣುಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಏಕೆಂದರೆ ಏಲಕ್ಕಿ ಸೋಂಕುನಿವಾರಕವಾಗಿದೆ ಮತ್ತು ಆರೋಗ್ಯಕರ ಜೀರ್ಣಾಂಗ ವ್ಯವಸ್ಥೆಗೆ ಪ್ರಯೋಜನಕಾರಿಯಾಗಿದೆ.

ಅಧಿಕ ರಕ್ತದೊತ್ತಡ ತಡೆಗಟ್ಟುವುದು: ಸಿಸ್ಟೊಲಿಕ್ ಮತ್ತು ಡಯಾಸ್ಟೊಲಿಕ್ ರಕ್ತದೊತ್ತಡದ ಚಿಕಿತ್ಸೆಯಲ್ಲಿ ಏಲಕ್ಕಿ ಹಾಲಿನ ಪ್ರಯೋಜನಗಳನ್ನು ಕಾಣಬಹುದು. ಇದು ರಕ್ತದೊತ್ತಡವನ್ನು ಕಡಿಮೆ ಮಾಡಲು ಮತ್ತು ಅಪಧಮನಿಗಳ ಗೋಡೆಗಳನ್ನು ಸಡಿಲಗೊಳಿಸಲು ಸಹಾಯ ಮಾಡುತ್ತದೆ.

ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ: ಏಲಕ್ಕಿ ಹಾಲಿನಲ್ಲಿರುವ ನೈಸರ್ಗಿಕ ಖನಿಜಗಳು ಮತ್ತು ನಾರು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಇದು ಜೀರ್ಣಕ್ರಿಯೆಯನ್ನು ಇನ್ನಷ್ಟು ಪ್ರಯೋಜನಕಾರಿಯನ್ನಾಗಿ ಮಾಡುತ್ತದೆ.

ಹೃದಯಕ್ಕೆ ಪ್ರಯೋಜನಕಾರಿ: ಏಲಕ್ಕಿ ಹಾಲಿನಲ್ಲಿ ಉತ್ತಮ ಪ್ರಮಾಣದ ಪೊಟ್ಯಾಸಿಯಮ್ ಇರುತ್ತದೆ. ಈ ಅಂಶಗಳು ಅಧಿಕ ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡಲು ಮತ್ತು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದರಿಂದಾಗಿ ಹೃದಯಾಘಾತ ಮತ್ತು ಪಾರ್ಶ್ವವಾಯು ಮುಂತಾದ ಹೃದಯ ಸಂಬಂಧಿತ ಕಾಯಿಲೆಗಳ ಅಪಾಯ ಮತ್ತು ಅವುಗಳ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ.

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ: ಏಲಕ್ಕಿ ಹಾಲಿನಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದನ್ನು ಕುಡಿಯುವುದರಿಂದ ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು. ಶೀತ ಮತ್ತು ಕೆಮ್ಮಿನಿಂದ ಹಿಡಿದು ಕ್ಯಾನ್ಸರ್ ಮತ್ತು ಕ್ಷಯರೋಗದವರೆಗೆ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ಜನರಿಗೆ ಏಲಕ್ಕಿ ಹಾಲು ಪ್ರಯೋಜನಕಾರಿ ಎಂದು ವರದಿಯಾಗಿದೆ.

ಏಲಕ್ಕಿ ಹಾಲು ತಯಾರಿಸುವ ಸರಿಯಾದ ವಿಧಾನ

ಏಲಕ್ಕಿ ಹಾಲು ನಿಮ್ಮ ದೇಹವನ್ನು ಒಳಗಿನಿಂದ ತಂಪಾಗಿಸುವ ತ್ವರಿತ ಮತ್ತು ಸುಲಭವಾದ ಪಾನೀಯವಾಗಿದೆ. ಇದು ಒಂದು ವರ್ಷಕ್ಕಿಂತ ಮೇಲ್ಪಟ್ಟ ಶಿಶುಗಳು, ಮಕ್ಕಳು, ವಯಸ್ಕರು ಮತ್ತು ಎಲ್ಲಾ ವಯಸ್ಸಿನ ಜನರಿಗೆ ಒಳ್ಳೆಯ ಪಾನೀಯವಾಗಿದೆ. ಆದರೆ ಇದನ್ನು ತಯಾರಿಸಲು ಸರಿಯಾದ ವಿಧಾನವನ್ನು ತಿಳಿದುಕೊಳ್ಳುವುದು ಮುಖ್ಯ.

ಮೊದಲು, 2 ದೊಡ್ಡ ಹಸಿರು ಏಲಕ್ಕಿಗಳನ್ನು ಚೆನ್ನಾಗಿ ಪುಡಿಮಾಡಿ. ಒಂದು ಪಾತ್ರೆಯಲ್ಲಿ 1 ಕಪ್ ಹಾಲನ್ನು ಕಾಯಿಸಿರಿ. ನಂತರ, ನುಣ್ಣಗೆ ಪುಡಿಮಾಡಿದ ಏಲಕ್ಕಿಯನ್ನು ಸೇರಿಸಿ. ಬಳಿಕ 3-4 ನಿಮಿಷಗಳ ಕಾಲ ಬೆರೆಸಿ. ಸಕ್ಕರೆ ಸೇರಿಸುವ ಮೊದಲು ಚೆನ್ನಾಗಿ ಮಿಶ್ರಣ ಮಾಡಿ. ಇದಕ್ಕೆ ನೀವು ಒಂದು ಚಮಚ ಬಾದಾಮಿ ಹಾಲು ಅಥವಾ ಚಾಯ್ ಮಸಾಲಾ ಪುಡಿಯನ್ನು ಕೂಡ ಸೇರಿಸಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed