ಪೈಲೆಟ್ ಆಗೋ ಕನಸಿತ್ತು
(ಚಿತ್ರ ಕೃಪೆ: ಕೃಷಿ ತಾಪಂಡ ಇನ್ಸ್ಟಾಗ್ರಾಮ್)
ಕೃಷಿ ಅವರಿಗೆ ಒಬ್ಬ ಸಹೋದರ ಕೂಡ ಇದ್ದಾರೆ. ಅವರು ದೆಹಲಿಯಲ್ಲಿಯೇ ಹುಟ್ಟಿರೋದು. ಕೃಷಿ ಚಿಕ್ಕವರಿದ್ದಾಗ ಪಂಜಾಬ್ ಅಲ್ಲಿದ್ದರು. ಇಲ್ಲಿಯ ಅಂಬಾಲಾದಲ್ಲಿ ಹಿಂದಿ ಮೀಡಿಯಂ ಅಲ್ಲಿವ್ಯಾಸಂಗ ಕೂಡ ಮಾಡಿದ್ದಾರೆ.
ಕೃಷಿ ತಾಪಂಡ ಅವರಿಗೆ ಪೈಲೆಟ್ ಆಗುವ ಕನಸಿತ್ತು. ಅಪ್ಪನಂತೆ ಆರ್ಮಿ ಸೇರ್ಬೇಕು ಅನ್ನವು ದೊಡ್ಡ ಕನಸು ಇತ್ತು. ಆದರೆ, ಅದು ಆಗಲಿಲ್ಲ. ಬದಲಾಗಿ ಕೃಷಿ ತಾಪಂಡ ಬಣ್ಣದ ಲೋಕಕ್ಕೆ ಬಂದರು.
ಕೃಷಿ ತಾಪಂಡ ಅವರ ತಂದೆ ಮತ್ತು ತಾಯಿ ಮೈಸೂರಿನಲ್ಲಿ ಸೆಟಲ್ ಆಗಿದ್ದಾರೆ. ಕೃಷಿ ಸಹೋದರ ಬೆಂಗಳೂರಿನಲ್ಲಿಯೇ ಐಟಿ ಅಲ್ಲಿದ್ದಾರೆ. ಪತ್ನಿ ಜೊತೆಗೆ ಇಲ್ಲೆ ಸೆಟಲ್ ಆಗಿದ್ದಾರೆ. ಕೃಷಿ ಕೂಡ ಬೆಂಗಳೂರಿನಲ್ಲಿಯೇ ಇರೋದು.
ಕೃಷಿ ರಿಲೇಷನ್ನಿಂದ ಏನೇನೋ ಆಗಿದೆ. ಬಯಸಿದ ಪ್ರೀತಿ ಸಿಗದೇ ಒದ್ದಾಡಿದ್ದಾರೆ. ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ. ಜೀವನವೇ ಸಾಕು ಅನ್ನುವ ಹಂತಕ್ಕೆ ಬಂದಿದ್ದಾರೆ.
ನಾನೂ ಆರ್ಮಿಗೆ ಹೋಗ್ಬೇಕು
(ಚಿತ್ರ ಕೃಪೆ: ಕೃಷಿ ತಾಪಂಡ ಇನ್ಸ್ಟಾಗ್ರಾಮ್)
ಪ್ರೀತಿ ಬಯಸಿದೆ, ಅದು ಸಿಗಲಿಲ್ಲ. ಎಮೋಷನಲ್ ಕಂಫರ್ಟ್ ನಿರೀಕ್ಷೆ ಮಾಡಿದೆ, ಅದೂ ಸಿಗಲಿಲ್ಲ. ಆದರೆ, ನಮ್ಮ ಆ ರಿಲೇಷನ್ ಕೆಟ್ಟದಾಗಿಯೇ ಎಂಡ್ ಆಗಿದೆ. ಸಿನಿಮಾರಂಗವೇ ಬೇಡ ಅನ್ನುವ ಮಟ್ಟಿಗೆ ಇದೀಗ ಮನಸ್ಥಿತಿ ಆಗಿದೆ ಅಂತಲೇ ಕೃಷಿ ತಾಪಂಡ ಹೇಳಿಕೊಂಡಿದ್ದಾರೆ.
ರಿಲೇಷನ್ ಅಲ್ಲಿದ್ದಾಗ ನಾನು ಕಾರು ಕೇಳಿಯೇ ಇಲ್ಲ. ಆ ಕಾರು ಅನ್ನ ನಾನು ಒಂದೇ ಒಂದು ದಿನವೂ ಇಟ್ಟುಕೊಳ್ಳಲಿಲ್ಲ. ನನಗೆ ದುಡ್ಡಿನ ಕಂಫರ್ಟ್ ಸಿಕ್ಕಿದೆ. ಅದು ನನಗೆ ಬೇಕಿರಲಿಲ್ಲ.
ಒಂದು ಘಟನೆಯಿಂದ ಮನೆಯವರ ಜೊತೆಗೆ ಮಾತನಾಡೋಕೆ ಆಗುತ್ತಿಲ್ಲ. ಅಮ್ಮನ ಜೊತೆಗೆ ತುಂಬಾನೆ ಮಾತನಾಡುತ್ತಿದ್ದೆ. ಅವರ ಜೊತೆಗೆ ಬಾಂಡಿಂಗ್ ಚೆನ್ನಾಗಿತ್ತು.
ಆದರೆ, ಇದೀಗ ಅವರ ಜೊತೆಗೆ ಮಾತನಾಡೋಕೆ ಆಗ್ತಾನೇ ಇಲ್ಲ. ಮಾನಸಿಕವಾಗಿ ಕುಗ್ಗಿ ಹೋಗಿದ್ದೇನೆ. ಟ್ರೀಟ್ಮೆಂಟ್ ಕೂಡ ತೆಗೆದುಕೊಳ್ಳುತ್ತಿದ್ದೇನೆ. ಇಂತಹ ಸ್ಥಿತಿಯಲ್ಲಿಯೇ ನಾನು ಇದ್ದೇನೆ.
ನಾನು ತಾಪಂಡ ಹೆಸರಿಗೆ ಕಳಂಕ ತಂದೆ ಅನ್ನುವ ಬೇಸರವೂ ಇದೆ ಅಂತಲೇ ಕೃಷಿ ತಾಪಂಡ ಹೇಳಿಕೊಂಡಿದ್ದಾರೆ. ಆರ್.ಜೆ.ರಾಜೇಶ್ ಅವರ Rajesh Reveals ಪಾಡ್ಕಾಸ್ಟ್ ಅಲ್ಲಿಯೇ ಕೃಷಿ ತಾಪಂಡ ತಮ್ಮ ಮನಸಿನ ಮಾತುಗಳನ್ನ ಹೇಳಿಕೊಂಡಿದ್ದಾರೆ ಅಂತ ಹೇಳಬಹುದು.












