ಗರಿಷ್ಠ ಮಟ್ಟ: 1633 ಅಡಿ
ಇಂದಿನ ನೀರಿನ ಮಟ್ಟ: 1602.88 ಅಡಿ
ಗರಿಷ್ಠ ಸಾಮರ್ಥ್ಯ: 105.788 ಟಿಎಂಸಿ
ಇಂದಿನ ಸಂಗ್ರಹಣೆ: ಕೇವಲ 25.101 ಟಿಎಂಸಿ
ಪ್ರಸ್ತುತ ಜಲಾಶಯಕ್ಕೆ ಕೇವಲ 4860 ಕ್ಯೂಸೆಕ್ ನೀರು ಒಳಹರಿವು ಬರುತ್ತಿದೆ. ಅದೇ ಸಮಯದಲ್ಲಿ, ನದಿ ಮತ್ತು ಕಾಲುವೆಗಳ ಮೂಲಕ ಒಟ್ಟು 656 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಒಳಹರಿವಿನ ಪ್ರಮಾಣ ಕಡಿಮೆ ಇರುವುದರಿಂದ ಜಲಾಶಯದಲ್ಲಿ ನೀರು ಭರ್ತಿಯಾಗಲು ಇನ್ನೂ ಮಳೆಯ ಮೊರೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ದಿನಾಂಕ: 15-07-2026, ಬೆಳಿಗ್ಗೆ 8:00 ಗಂಟೆಗೆ
ಗರಿಷ್ಠ ಮಟ್ಟ: 124.80 ಅಡಿ
ಇಂದಿನ ಮಟ್ಟ: 92.74 ಅಡಿ
ಗರಿಷ್ಠ ಸಾಮರ್ಥ್ಯ: 49.452 ಟಿಎಂಸಿ
ಇಂದಿನ ಸಾಮರ್ಥ್ಯ: 17.637 ಟಿಎಂಸಿ
ಬಳಕೆಗೆ ಲಭ್ಯವಿರುವ ಸಾಮರ್ಥ್ಯ (Live capacity): 9.258 ಟಿಎಂಸಿ
ಒಳಹರಿವು: 2204 ಕ್ಯೂಸೆಕ್ಗಳು
ಹೊರಹರಿವು: 625 ಕ್ಯೂಸೆಕ್ಗಳು (ಕಾಲುವೆ ಮತ್ತು ಕುಡಿಯುವ ನೀರು ಪೂರೈಕೆ ಸೇರಿದಂತೆ)
ದಿನಾಂಕ: 15-7-2026, ಬೆಳಿಗ್ಗೆ 8:00 ಗಂಟೆಗೆ
ಗರಿಷ್ಠ ಮಟ್ಟ: 2284.00 ಅಡಿ
ಇಂದಿನ ಮಟ್ಟ: 2270.70 ಅಡಿ (2281.31)
ಗರಿಷ್ಠ ಸಾಮರ್ಥ್ಯ: 19.52 ಟಿಎಂಸಿ
ಇಂದಿನ ಸಾಮರ್ಥ್ಯ: 12.02 ಟಿಎಂಸಿ (17.82)
ಬಳಕೆಗೆ ಲಭ್ಯವಿರುವ ಸಾಮರ್ಥ್ಯ (Live Cap): 2.21 ಟಿಎಂಸಿ (8.08)
ಒಳಹರಿವು: 2093 ಕ್ಯೂಸೆಕ್ (10158)
ಹೊರಹರಿವು: ನದಿ: 400 ಕ್ಯೂಸೆಕ್ (12000)
ಆಲಮಟ್ಟಿ ಡ್ಯಾಂಗೆ ಬರೋಬ್ಬರಿ 56,765 ಕ್ಯೂಸೆಕ್ ಭಾರಿ ಒಳಹರಿವು ದಾಖಲಾಗಿದ್ದು, ಈಗಾಗಲೇ 87.87 ಟಿಎಂಸಿ (ಶೇಕಡಾ 71) ನೀರು ತುಂಬಿದೆ. ಆದರೆ, ರೈತರ ಕಣ್ಣೀರು ಒರೆಸಬೇಕಿದ್ದ ತುಂಗಭದ್ರಾ ಡ್ಯಾಂನಲ್ಲಿ ಕೇವಲ 24.36 ಟಿಎಂಸಿ (ಶೇಕಡಾ 23) ನೀರು ಮಾತ್ರ ಇದ್ದು, 17,152 ಕ್ಯೂಸೆಕ್ ಒಳಹರಿವು ಇದೆ. ಮಲಪ್ರಭಾ ಡ್ಯಾಂನಲ್ಲಿ ಶೇಕಡಾ 32 ರಷ್ಟು (12.23 ಟಿಎಂಸಿ), ಹಿಡಕಲ್ (ಘಟಪ್ರಭಾ) ಡ್ಯಾಂನಲ್ಲಿ ಶೇಕಡಾ 38 ರಷ್ಟು (19.55 ಟಿಎಂಸಿ), ಹಾಗೂ ನಾರಾಯಣಪುರದಲ್ಲಿ ಶೇಕಡಾ 59 ರಷ್ಟು (19.63 ಟಿಎಂಸಿ) ನೀರು ಸಂಗ್ರಹವಾಗಿದೆ. ಕೃಷ್ಣಾ ಕೊಳ್ಳದಲ್ಲಿ ಒಟ್ಟಾರೆ 82,526 ಕ್ಯೂಸೆಕ್ ಒಳಹರಿವು ದಾಖಲಾಗಿದೆ.
ಕಳೆದ ವರ್ಷಗಳಿಗೆ ಹೋಲಿಸಿದರೆ, ಜುಲೈ ಮಧ್ಯಭಾಗದಲ್ಲಿ ಜಲಾಶಯವು ಉತ್ತಮ ಮಟ್ಟದಲ್ಲಿ ಇರಬೇಕಿತ್ತು. ಆದರೆ, ಮಳೆಗಾಲದ ಆರಂಭದಲ್ಲೂ ನೀರಿನ ಸಂಗ್ರಹಣೆ ನಿರೀಕ್ಷಿತ ಮಟ್ಟದಲ್ಲಿಲ್ಲದಿರುವುದು ರೈತರ ನಿದ್ದೆಗೆಡಿಸಿದೆ. ಬೆಳೆಗಳಿಗೆ ನೀರು ಹರಿಸುವ ವಿಚಾರದಲ್ಲಿ ಮುಂದಿನ ದಿನಗಳಲ್ಲಿ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಅನಿವಾರ್ಯತೆ ಎದುರಾಗಬಹುದು ಎಂದು ಅಂದಾಜಿಸಲಾಗಿದೆ.













