Last Updated:
ಗಂಭೀರ್-ಕೊಹ್ಲಿ ನಡುವೆ ಮುಸುಕಿನ ಗುದ್ದಾಟ ಮುಂದುವರಿದಿದೆ. ಇಂಗ್ಲೆಂಡ್ ಸರಣಿ ಮುನ್ನ ಇಬ್ಬರೂ ಮಾತನಾಡದಿರುವುದು ಅಭಿಮಾನಿಗಳಿಗೆ ಬಿಗ್ ಶಾಕ್ ಎದುರಾಗಿದೆ.
ಟೀಂ ಇಂಡಿಯಾ ಕೋಚ್ ಗೌತಮ್ ಗಂಭೀರ್ (Gautam Gambhir), ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (Virat Kohli) ನಡುವಿನ ಮುಸುಕಿನ ಗುದ್ದಾಟ ಮುಂದುವರೆದಿದೆಯಾ? ಎಂಬ ಪ್ರಶ್ನೆ ಎದುರಾದರೆ ಹೌದು ಅಂತಲೇ ನೆಟ್ಟಿಗರು ಹೇಳ್ತಿದ್ದಾರೆ. ಇಂಗ್ಲೆಂಡ್ ವಿರುದ್ಧದ (Eng vs Ind, 1st ODI) ಮೂರು ಏಕದಿನ ಪಂದ್ಯಗಳ ಸರಣಿ ಆರಂಭಕ್ಕೂ ಮುನ್ನ ಇಬ್ಬರೂ ಮುಖಕ್ಕೆ ಮುಖ ಕೊಟ್ಟು ಮಾತನಾಡಿಲ್ಲ ಎಂಬ ಸುದ್ದಿ ಭಾರೀ ಚರ್ಚೆಗೆ ಕಾರಣವಾಗಿದೆ. ಇದು ಟೀಂ ಇಂಡಿಯಾ ಅಭಿಮಾನಿಗಳಲ್ಲಿ (Viral Video) ಆತಂಕ, ಗೊಂದಲವನ್ನು ಉಂಟು ಮಾಡಿದೆ ಎಂದು ಹೇಳಬಹುದು.
ವಿರಾಟ್ ಕೊಹ್ಲಿ ಅವರ ಅಭ್ಯಾಸವನ್ನು ವಿಶೇಷವಾಗಿ ಗಮನಿಸಿದ ಗಂಭೀರ್, ಆ ಬಳಿಕ ಕೊಹ್ಲಿಯೊಂದಿಗೆ ನೇರವಾಗಿ ಮಾತನಾಡದೇ ಬ್ಯಾಟಿಂಗ್ ಕೋಚ್ ಸಿತಾಂಶು ಕೋಟಕ್ ಅವರಿಗೆ ಹೇಳಿ ಅವರೊಂದಿಗೆ ಮಾತನಾಡಿದ್ದು ಹಲವು ಪ್ರಶ್ನೆಗಳನ್ನು ಮುಂದಿಟ್ಟಿದೆ. ಈ ಸಂದರ್ಭದ ವಿಡಿಯೋ ಈಗ ಸಖತ್ ವೈರಲ್ ಆಗುತ್ತಿದೆ.
ವಿಡಿಯೋದಲ್ಲಿ ಗಂಭೀರ್ ಗಮನಿಸುತ್ತಿದ್ದರೆ, ಕೊಹ್ಲಿ ಅನಗತ್ಯ ಶಾರ್ಟ್ಸ್ ಆಡುವ ಪ್ರಯತ್ನದಲ್ಲಿ ಬೋಲ್ಡ್ ಆಗುವುದನ್ನು ಕಾಣಬಹುದು. ತರಬೇತಿ ಮುಗಿದ ಬಳಿಕ ಕೊಹ್ಲಿಯೊಂದಿಗೆ ಮಾತನಾಡದ ಗಂಭೀರ್, ಬ್ಯಾಟಿಂಗ್ ಕೋಚ್ ಅವರಿಗೆ ಕೇಳಿ ಮಾತನಾಡಿದ್ದಾರೆ. ಇದರೊಂದಿಗೆ ಕೊಹ್ಲಿ ಗಂಭೀರ್ ನಡುವಿನ ಮುನಿಸು ಇನ್ನು ಮುಂದುವರೆದಿದೆ ಎಂಬ ಸುದ್ದಿಗೆ ಇದು ಪುಷ್ಠಿ ನೀಡುತ್ತಿದೆ.
ತರಬೇತಿ ಸಮಯದಲ್ಲಿ ಗೌತಮ್ ಗಂಭೀರ್, ಪದೇ ಪದೇ ಕ್ಯಾಪ್ಟನ್ ಶುಭ್ ಮನ್ ಗಿಲ್, ರೋಹಿತ್ ಶರ್ಮಾ ಹಾಗೂ ಬ್ಯಾಟಿಂಗ್ ಕೋಚ್ ಅವರೊಂದಿಗೆ ಮಾತನಾಡಿಸಿದ್ದಾರೆ. ನೇರವಾಗಿ ಕೊಹ್ಲಿ ಅವರೊಂದಿಗೆ ಗಂಭೀರ್ ಮಾತನಾಡಿದ ಒಂದು ದೃಶ್ಯವೂ ಸಿಗೋದಿಲ್ಲ ಎಂದು ಎನ್ಡಿ ಟಿವಿ ವರದಿ ಮಾಡಿದೆ.
ಫೈನಲ್ ಪ್ರಾಕ್ಟೀಸ್ ಸೆಷನ್ ಸಂದರ್ಭದಲ್ಲಿ ತಂಡದ ಇತರ ಆಟಗಾರರೊಂದಿಗೆ ಮಾತನಾಡಿದ ಗಂಭೀರ್, ಕೊಹ್ಲಿಯೊಂದಿಗೆ ಮಾತ್ರ ಮಾತನಾಡದೆ ಇರೋದು ಚರ್ಚೆಗೆ ಕಾರಣವಾಗಿದೆ. ಕೊಹ್ಲಿ ಕೂಡ ಗಂಭೀರ್ ಅವರೊಂದಿಗೆ ಮಾತನಾಡಿದ ಪ್ರಯತ್ನ ಮಾಡಿಲ್ಲ. ಇದರೊಂದಿಗೆ ತಂಡದಲ್ಲಿರುವ ವಾತಾವರಣದ ಬಗ್ಗೆ ಹಲವು ಪ್ರಶ್ನೆಗಳು ಎದುರಾಗಿದೆ.
“Is Gautam Gambhir putting Virat Kohli under pressure? During yesterday’s practice session, Gambhir was standing right beside Virat Kohli’s net, closely watching him. Virat and Gambhir haven’t spoken for a long time. Virat played a couple of awkward shots and then got clean… pic.twitter.com/An7tZBFTMK
— ????????????????????????????⁴⁵ (@rushiii_12) July 14, 2026
ಈ ಹಿಂದೆ ಐಪಿಎಲ್ ಸಂದರ್ಭದಲ್ಲಿ ಹಲವು ಬಾರಿ ಇಬ್ಬರು ಜಗಳ ಮಾಡಿಕೊಂಡಿದ್ದರು. ಆದರೆ ಗಂಭೀರ್ ಟೀಂ ಇಂಡಿಯಾ ಹೆಡ್ ಕೋಚ್ ಆದ ಬಳಿಕ ಇಬ್ಬರು ವೃತ್ತಿಪರವಾಗಿ ಒಟ್ಟಿಗೆ ಸೇರಿ ಕೆಲಸ ಮಾಡಿದ್ದರು. ಆದರೆ ಏನಾಯ್ತು ಅಂತ ಗೊತ್ತಿಲ್ಲ, ಇಂಗ್ಲೆಂಡ್ ಏಕದಿನ ಸರಣಿಯ ಮುನ್ನ ಇಬ್ಬರೂ ಮಾತನಾಡುತ್ತಿಲ್ಲ ಅನ್ನೋ ಸುದ್ದಿಗಳು ಅಭಿಮಾನಿಗಳಿಗೆ ಗೊಂದಲವನ್ನು ಉಂಟು ಮಾಡಿದೆ. ಆದರೆ ಮುಂದಿನ ಸಮಯದಲ್ಲಿ ಈ ಸುದ್ದಿಗಳಿಗೆ ಬ್ರೇಕ್ ಹಾಕುವಂತೆ ಇಬ್ಬರು ನಡವಳಿಕೆ ಇರುತ್ತಾ? ಅಥವಾ ಇದಕ್ಕೆ ಇನ್ನಷ್ಟು ಪುಷ್ಠಿ ನೀಡುವಂತಹ ಘಟನೆಗಳು ವರದಿಯಾಗುತ್ತಾ ಅಂತ ಕಾದುನೋಡಬೇಕಿದೆ.














