Last Updated:
ಕಾಂತಾರ ಚಾಪ್ಟರ್ ಒನ್‌ನ ‘ಮದನ ಮನ ಮೋಹಿನಿ’ ಹಾಡಿಗೆ ಕಿಶನ್ ಬಿಳಗಲಿ ಹೊಸ ಸ್ಪರ್ಶ ನೀಡಿದ್ದಾರೆ. ರುಕ್ಮಿಣಿ ವಸಂತ್ ಮತ್ತು ರಿಷಬ್ ಶೆಟ್ರ ರೋಮ್ಯಾಂಟಿಕ್ ಹಾಡಿಗೆ ಸಮುದ್ರತೀರದಲ್ಲಿ ಡ್ಯಾನ್ಸ್ ಮಾಡಿದ್ದಾರೆ.
ಕಾಂತಾರ ಚಾಪ್ಟರ್ ಒನ್ ಚಿತ್ರದಲ್ಲಿ (Kantara Chapter One Movie) ಒಂದು ಹಾಡಿದೆ. ಇದು ರುಕ್ಮಿಣಿ ವಸಂತ್ (Rukmini Vasanth) ಹಾಗೂ ರಿಷಬ್ ಶೆಟ್ರ (Rishab Shetty) ರೋಮ್ಯಾಂಟಿಕ್ ಹಾಡಾಗಿದೆ. ಮದನ ಮನ ಮೋಹನಿ ಅನ್ನುವ ಹಾಡು ಹೇಗಿದೆ ಅಂತ ಗೊತ್ತೇ ಇದೆ. ಆದರೆ, ಈ ಹಾಡಿಗೆ ಇನ್ನೊಂದು ಸ್ಪರ್ಶವೂ ಬಂದಿದೆ. ಇದನ್ನ ಕೊಟ್ಟವರು ಬೇರೆ ಯಾರೋ ಅಲ್ಲ. ಡ್ಯಾನ್ಸರ್ ಕಿಶನ್ ಬಿಳಗಲಿ (Kishen Bilagali) ಈ ಕೆಲಸ ಮಾಡಿದ್ದಾರೆ. ಈ ಹಾಡಿನ ಮೋಹಕತೆಯನ್ನ ಕಟ್ಟಿಕೊಡಲು ಸಮುದ್ರತೀರಕ್ಕೆ ಹೋಗಿದ್ದಾರೆ. ಬಿಳಿ ಬಣ್ಣದ ಕಾಸ್ಟೂಮ್ ತೊಟ್ಟು ಮೋಹಕವಾಗಿಯೇ ಕುಣಿದಿದ್ದಾರೆ. ಇದು ಈ ಹಾಡಿಗೆ ತುಂಬಾನೆ ಚೆನ್ನಾಗಿ ಸೆಟ್ ಆಗಿದೆ. ಇದರ ಕಂಪ್ಲೀಟ್ ವಿವರ ಇಲ್ಲಿದೆ ಓದಿ.
ಕಾಂತಾರ ಚಾಪ್ಟರ್ ಒನ್ ಚಿತ್ರದಲ್ಲಿ ಈ ಒಂದು ಗೀತೆ ಇದೆ. ಇದು ಅಷ್ಟೆ ಮೋಹಕವಾಗಿಯೇ ಇದೆ. ನಟಿ ರುಕ್ಮಿಣಿ ವಸಂತ್ ಇಲ್ಲಿ ಅಷ್ಟೆ ಚೆನ್ನಾಗಿಯೂ ಕಾಣಿಸಿದ್ದಾರೆ.
ಮದನ ಮನ ಮೋಹಿನಿ..
(ಚಿತ್ರ ಕೃಪೆ: ಕಿಶನ್ ಬಿಳಗಲಿ ಫೇಸ್ ಬುಕ್ ಪೇಜ್)
ರಿಷಬ್ ಶೆಟ್ರ ಇನ್ವಾಲ್ವ್‌ಮೆಂಟ್ ಕೂಡ ಚೆನ್ನಾಗಿದೆ. ಇವರ ಈ ಒಂದು ಗೀತೆ ಪ್ರಣಯದ ಹೊಸ ರೂಪದಂತೆನೂ ಕಾಣಿಸುತ್ತದೆ. ಆದರೆ, ಈ ಹಾಡಿಗೂ ಒಂದು ಹೊಸ ಸ್ಪರ್ಶ ಕೊಡುವ ಕೆಲಸವನ್ನ ಕಿಶನ್ ಬಿಳಗಲಿ ಮಾಡಿದ್ದಾರೆ.
ಮುಸಂಜೆಯ ಹೊತ್ತಲ್ಲಿಯೇ ಸಮುದ್ರತೀರದಲ್ಲಿ ಇದನ್ನ ಚಿತ್ರೀಕರಣ ಮಾಡಿದ್ದಾರೆ. ಅದಕ್ಕೇನೆ ಇದಕ್ಕೆ “Sunset love” ಅಂತ ಹೇಳಿದ್ದಾರೆ. ಇದು ಗೋಲ್ಡನ್ ಅವರ್ಸ್ ಟೈಮ್ ಅಲ್ಲಿ ತೆಗೆಯಲಾಗಿದೆ. ಹಾಗಾಗಿಯೇ ಇದು ಇನ್ನಷ್ಟು ಬ್ಯೂಟಿಫುಲ್ ಕೂಡ ಅನಿಸುತ್ತದೆ.
ಈ ಒಂದು ಹಾಡಿನ ವಿಡಿಯೋವನ್ನ ಕಿಶನ್ ಬಿಳಗಲಿ ತಮ್ಮ ಫೇಸ್ ಬುಕ್ ಪೇಜ್ ಅಲ್ಲಿ ಹಂಚಿಕೊಂಡಿದ್ದಾರೆ. ಇದನ್ನ ನೋಡಿದವರು ಮೆಚ್ಚಿಕೊಂಡಿದ್ದಾರೆ. ಅಪ್‌ಲೋಡ್ ಮಾಡಿದ 1 ಗಂಟೆಯಲ್ಲಿಯೇ 300 ಕ್ಕೂ ಹೆಚ್ಚು ಲೈಕ್ಸ್ ಬಂದಿವೆ.
ಕಿಶನ್ ಬಿಳಗಲಿ ಹೊಸ ಸ್ಪರ್ಶ
(ಚಿತ್ರ ಕೃಪೆ: ಕಿಶನ್ ಬಿಳಗಲಿ ಫೇಸ್ ಬುಕ್ ಪೇಜ್)
ಈ ಒಂದು ವಿಡಿಯೋ ತುಂಬಾನೆ ಚೆನ್ನಾಗಿದೆ. ಇದನ್ನ ನೋಡಿದ್ರೆ ರೋಮ್ಯಾಂಟಿಕ್ ಹಾಡನ್ನ ಹೀಗೂ ಚಿತ್ರೀಕರಿಸಬಹುದು ಅನ್ನುವ ಹೊಸ ಐಡಿಯಾನೂ ಹುಟ್ಟಿಕೊಳ್ಳುತ್ತದೆ. ಕಿಶನ್ ಬಿಳಗಲಿ ಆ ರೀತಿನೇ ಇದನ್ನ ಚಿತ್ರೀಕರಿಸಿದ್ದಾರೆ ಅಂತಲೂ ಹೇಳಬಹುದು.
ಕರಾವಳಿ ಚಿತ್ರದ ಮುದ್ದು ಗುಮ್ಮ ಹಾಡಿಗೂ ಕಿಶನ್ ಬಿಳಗಲಿ ಹೊಸ ಸ್ಪರ್ಶ ಕೊಟ್ಟಿದ್ದಾರೆ. ಯಕ್ಷಗಾನ ಹಾಗೂ ಭರತನಾಟ್ಯದ ಸುಂದರ ರೂಪ ಕೊಟ್ಟಿದ್ದಾರೆ.
ದೇವಸ್ಥಾನದ ಅಂಗಳದಲ್ಲಿಯೇ ಈ ಒಂದು ಹಾಡಿನ ಚಿತ್ರೀಕರಣ ಆಗಿದೆ. ಇಲ್ಲೊಂದು ಚೆಂದದ ಲವ್ ಸ್ಟೋರಿ ಕೂಡ ಇದೆ. ಇದನ್ನ ಅಷ್ಟೆ ನೀಟ್ ಆಗಿಯೇ ಹೇಳಿದ್ದಾರೆ.
ಯಕ್ಷಗಾನ ವೇಷದಲ್ಲಿ ಕಿಶನ್ ಬಿಳಗಲಿ ತುಂಬಾನೆ ಚೆನ್ನಾಗಿ ಕಾಣಿಸುತ್ತಾರೆ. ಚಂದನ ಕೂಡ ಭರತನಾಟ್ಯ ಕಲಾವಿದೆ ಆಗಿಯೇ ಕಾಣಿಸಿಕೊಂಡು ಎಲ್ಲರ ಗಮನ ಸೆಳೆಯುತ್ತಾರೆ ಅಂತಲೂ ಹೇಳಬಹುದು.
Bangalore [Bangalore],Bangalore,Karnataka
Jul 13, 2026 11:13 PM IST














