Icecream Clash: ಎರಡನೇ ಬಾರಿ ಐಸ್ಕ್ರೀಂ ಕೊಡಲು ನಿರಾಕರಣೆ, ರಣಾಂಗಣವಾದ ಮದುವೆ ಮನೆ! ಕುಸಿದುಬಿದ್ದ ವಧು! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

News18


Last Updated:

ಕೊಲ್ಲಂನ ಪಲ್ಲಿಮುಕ್ಕು ಎರವಿಪುರಂ ರಸ್ತೆಯಲ್ಲಿರುವ ಸಭಾಂಗಣದಲ್ಲಿ ನಿನ್ನೆ ರಾತ್ರಿ 8.30 ಕ್ಕೆ ಈ ಘಟನೆ ನಡೆದಿದ್ದು, ಎರಡನೇ ಬಾರಿಗೆ ಐಸ್‌ಕ್ರೀಂ ನೀಡದೇ ಇದ್ದುದ್ದಕ್ಕೆ ಜಗಳ ಶುರುವಾಗಿ ತಾರಕಕ್ಕೇರಿದೆ. ಈ ಗಲಾಟೆಯ ಸಮಯದಲ್ಲಿ ವಧು ಕುಸಿದು ಬಿದ್ದು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ ಘಟನೆಯೂ ನಡೆದಿದೆ.

News18
News18

ಮದುವೆ ಮನೆಯಲ್ಲಿ ಎರಡನೇ ಬಾರಿ ಐಸ್‌ಕ್ರೀಂ ಕೇಳಿದ್ದಕ್ಕೆ (Icecream Clash in Kerala) ಉಂಟಾದ ಜಗಳ ಅತಿರೇಕಕ್ಕೆ ತಿರುಗಿ ವಧುವೇ ತಲೆತಿರುಗಿ ಬಿದ್ದ ಅಸ್ವಸ್ಥರಾಗಿರುವ ಘಟನೆ ಕೇರಳದಲ್ಲಿ ನಡೆದಿದೆ.

ಮದುವೆಯ ನಂತರ ನಡೆದ ಆರತಕ್ಷತೆ ಸಮಾರಂಭದಲ್ಲಿ ಕಾರ್ಯಕ್ರಮಕ್ಕೆ ಬಂದಿದ್ದ ಅತಿಥಿಗಳಿಗೆ ಬಂದವರಿಗೆ ಐಸ್ ಕ್ರೀಮ್ ನೀಡದ ಘಟನೆಗೆ ಸಂಬಂಧಿಸಿದಂತೆ ಘರ್ಷಣೆಗಳು ನಡೆದು ಇಡೀ ಮದುವೆ ಮನೆಯೇ ರಣಾಂಗಣವಾಗಿ ಪರಿವರ್ತನೆಗೊಂಡ ಘಟನೆ ಕೇರಳದ ಕೊಲ್ಲಂನಲ್ಲಿ ನಡೆದಿದೆ.

ಆರತಕ್ಷತೆ ಸಮಾರಂಭದಲ್ಲಿ, ಹೆಚ್ಚಿನ ಐಸ್ ಕ್ರೀಮ್ ನೀಡದ ಕಾರಣ ಜನರ ಗುಂಪೊಂದು ಐಸ್ ಕ್ರೀಮ್ ಬಾಕ್ಸ್ ಅನ್ನೇ ತೆಗೆದುಕೊಂಡು ಹೋಗಲು ಪ್ರಯತ್ನಿಸಿದೆ. ಇದು ಉದ್ವಿಗ್ನ ಪರಿಸ್ಥಿತಿ ಮತ್ತು ಜಗಳಕ್ಕೆ ಕಾರಣವಾಯಿತು ಎಂದು ಹೇಳಲಾಗುತ್ತಿದೆ.

ಘರ್ಷಣೆಯಲ್ಲಿ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅಲ್ಲದೇ ಪಲ್ಲಿಮುಕ್ಕು-ಇರಾವಿಪುರಂ ರಸ್ತೆಯಲ್ಲಿ ಬಹಳ ಹೊತ್ತು ಸಂಚಾರ ಅಸ್ತವ್ಯಸ್ತವಾಗಿತ್ತು. ಆದರೆ, ಈ ಘರ್ಷಣೆ ಯುವಕರ ನಡುವಿನ ವಿವಾದವಾಗಿದ್ದು, ಒಬ್ಬ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಇರವಿಪುರಂ ಪೊಲೀಸರು ತಿಳಿಸಿದ್ದಾರೆ.

ಆದರೆ ಎರಡೂ ಕಡೆಯವರು ಯಾವುದೇ ದೂರುಗಳನ್ನು ನೀಡಿಲ್ಲ ಎಂದು ಹೇಳಿದ ನಂತರ ಅವರನ್ನು ಬಿಡುಗಡೆ ಮಾಡಲಾಗಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports