Last Updated:
ಕರಾವಳಿ ಚಿತ್ರದ ಡಬ್ಬಿಂಗ್ ವಿವಾದ ಮುಂದುವರೆದಿದೆ. ಆದರೆ, ಇತ್ತ ಕಡೆಗೆ ಡ್ಯಾನ್ಸರ್ ಕಿಶನ್ ಚಿತ್ರದ ಮುದ್ದು ಗುಮ್ಮ ಹಾಡಿಗೆ ನೃತ್ಯ ರೂಪ ಕೊಟ್ಟಿದ್ದಾರೆ. ಇದು ಅಷ್ಟೆ ಬ್ಯೂಟಿಫುಲ್ ಆಗಿದೆ. ಅದರ ವಿವರ ಇಲ್ಲಿದೆ ಓದಿ.
ಕಿಶನ್ ಬಿಳಗಲಿ (Kishen Bilagali) ಹಳೆ ಹಾಡಿಗೆ ಹೊಸ ರೂಪ ಕೊಡುವುದು ಗೊತ್ತೆ ಇದೆ. ಆದರೆ, ಇದೀಗ ಇನ್ನು ರಿಲೀಸ್ ಆಗದ ಕರಾವಳಿ ಚಿತ್ರದ ಮುದ್ದು ಗುಮ್ಮ ಹಾಡಿಗೆ (Muddu Gumma Song) ಹೊಸ ಸ್ಪರ್ಶವನ್ನೆ ಕೊಟ್ಟಿದ್ದಾರೆ. ನಟಿ ಚಂದನ ಮತ್ತು ಕಿಶನ್ ಇದಕ್ಕೆ ಯಕ್ಷಗಾನ ರೂಪವನ್ನೆ ಕೊಟ್ಟಿದ್ದಾರೆ. ಭರತ ನಾಟ್ಯ ಡ್ಯಾನ್ಸರ್ ಆಗಿ ನಟಿ ಚಂದನ (Chandana) ಇಲ್ಲಿ ಕಾಣಿಸಿಕೊಂಡಿದ್ದಾರೆ. ಯಕ್ಷಗಾನ ರೂಪದಲ್ಲಿಯೇ ಕಿಶನ್ ಬಿಳಗಲಿ (Kishen Bilagali) ಇಲ್ಲಿ ನೃತ್ಯ ಮಾಡಿದ್ದಾರೆ. ಇವರ ಈ ಹಾಡಿನ ಇನ್ನಷ್ಟು ವಿವರ ಇಲ್ಲಿದೆ ಓದಿ.
ಕಿಶನ್-ಚಂದನ್ ಯಕ್ಷಗಾನ ನೃತ್ಯ
ಮೊದಲು ಕೇಳಿದಾಗ ಈ ಹಾಡು ಏನು ಅನಿಸೋದಿಲ್ಲ. ಆದರೆ, ಹೋಗ್ತಾ ಹೋಗ್ತಾ ಇದು ಎಲ್ಲರ ಮನಸ್ಸಿಗೆ ಇಳಿಯುತ್ತದೆ. ಆ ರೀತಿಯ ಈ ಗೀತೆಗೆ ಕಿಶನ್ ಬಿಳಗಲಿ ಹಾಗೂ ನಟಿ ಚಂದನ ಹೊಸ ಸ್ಪರ್ಶ ಕೊಟ್ಟಿದ್ದಾರೆ.
ಮುದ್ದು ಗುಮ್ಮ ಹಾಡು ಪ್ರೇಮ ಗೀತೇನೆ ಆಗಿದೆ. ನಾಯಕ ಪ್ರಜ್ವಲ್ ಹಾಗೂ ನಾಯಕಿ ಸಂಪದ ಅವರ ಪ್ರೀತಿಯ ಗೀತೇನೆ ಇದಾಗಿದೆ.
ಆದರೆ, ಈ ಒಂದು ಪ್ರೀತಿಯ ಹಾಡಿಗೆ ಯಕ್ಷಗಾನ ಮತ್ತು ಭರತ ನಾಟ್ಯದ ರೂಪ ಕೊಟ್ಟಿದ್ದಾರೆ. ದೇವಸ್ಥಾನದಲ್ಲಿ ನಟಿ ಚಂದನ ಡ್ಯಾನ್ಸ್ ಮಾಡ್ತಾ ಇರ್ತಾರೆ. ಅಲ್ಲಿ ಪೂಜಾರಿ ಆಗಿರೋ ಕಿಶನ್ ಬಿಳಗಲಿ ಇದನ್ನ ನೋಡ್ತಾರೆ. ಮುಂದೆ ಯಕ್ಷಗಾನ ವೇಷಧರಿಸಿ ಚಂದನ ನೃತ್ಯಕ್ಕೆ ಸಾಥ್ ಕೊಡುತ್ತಾರೆ.
ಕರಾವಳಿ ಚಿತ್ರದ ಈ ಹಾಡಿಗೆ ಕಿಶನ್ ಹೊಸ ರೂಪವನ್ನೆ ಕೊಟ್ಟಿದ್ದಾರೆ. ಇದನ್ನ ಯಾರೇ ನೋಡಿದರೂ ಅಷ್ಟೇ ನೋಡಿ. ಇಷ್ಟ ಆಗುತ್ತದೆ. ಆ ರೀತಿನೇ ಈ ಒಂದು ಗೀತೆಯನ್ನ ಮಾಡಿದ್ದಾರೆ.
ಮುದ್ದು ಗುಮ್ಮ ಹಾಡಿಗೆ ಹೊಸ ಸ್ಪರ್ಶ
ಇದು ವಿಷ್ಯೂಲಿ ತುಂಬಾನೆ ಚೆನ್ನಾಗಿದೆ. ನೋಡಲು ಕುಳಿತರೆ ಆಯಿತು. ಪ್ಲೆಸೆಂಟ್ ಫೀಲ್ ಆಗುತ್ತದೆ. ಆ ರೀತಿಯ ಈ ಗೀತೆಯ ವಿಡಿಯೋವನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ಈ ಹಂಚಿಕೊಳ್ಳುವ ಕೆಲಸವನ್ನ ಸ್ವತಃ ಕಿಶನ್ ಬಿಳಗಲಿ ಮಾಡಿದ್ದಾರೆ.
ಕಿಶನ್ ಮತ್ತು ಚಂದನ ಅವರ ಈ ಒಂದು ವಿಡಿಯೋವನ್ನ ಇನ್‌ಸ್ಟಾಗ್ರಾಮ್‌ನ ತಮ್ಮ ಪೇಜ್ ಅಲ್ಲಿ ಹಂಚಿಕೊಂಡಿದ್ದಾರೆ. ಇದನ್ನ ನೋಡಿವ್ರು ಉತ್ತಮ ಮಾತುಗಳನ್ನೆ ಬರೆದಿದ್ದಾರೆ.
ಯಕ್ಷಗಾನ ನೃತ್ಯ ಕಣ್ಣ ಸೋಜಿಗ ಅಂತಲೂ ಕಾಂಪ್ಲಿಮೆಂಟ್ ಬಂದಿವೆ. So sweet cute ಅಂದವರೂ ಇದ್ದಾರೆ. ಇಲ್ಲಿ ಇನ್ನು ಒಂದು ವಿಚಾರವೂ ಇದೆ. ಅದು ಲವ್ ಸ್ಟೋರಿ. ಹೌದು, ಹಾಡಿನಲ್ಲಿಯೇ ನೃತ್ಯ ಕಲಾವಿದರ ಒಂದು ಚೆಂದದ ಲವ್ ಸ್ಟೋರಿನೂ ಇದೆ. ಇದು ಕೂಡ ಈ ಹಾಡಿಗೆ ಸೂಟೇಬಲ್ ಅನಿಸುತ್ತದೆ ಅಂತಲೇ ಹೇಳಬಹುದು.
Bangalore [Bangalore],Bangalore,Karnataka














