Last Updated:
ಮ್ಯಾಂಗೋ ಪಚ್ಚ ಚಿತ್ರದ ನಾಯಕನನ್ನ ಸುದೀಪ್ ಏನಂತಾ ಕರೀತಾರೆ? ಪ್ರಿಯಾ ಸುದೀಪ್ ಪ್ರೀತಿಯಿಂದ ಹೇಳೋದು ಏನು? ಈ ವಿವರ ಮುಂದೆ ಇದೆ ಓದಿ.
ಜೂನ್-5 ರಂದು ಮ್ಯಾಂಗೋ ಪಚ್ಚ ಚಿತ್ರ (Mango Pachcha Movie) ಬರ್ತಿದೆ. ಈ ಚಿತ್ರದ ನಾಯಕ ನಟ ಪಕ್ಕಾ ಕಿಚ್ಚ ಸುದೀಪ್ (Kichha Sudeepa) ತರವೇ ಇದ್ದಾರೆ. ಸುದೀಪ್ ರೀತಿ ಹೈಟ್ ಇದೆ. ಧ್ವನಿ ಕೂಡ ಸುದೀಪ್ ಹೋಲುತ್ತದೆ. ಅಷ್ಟೆ ಯಾಕೆ ಲುಕ್ ಆ್ಯಂಡ್ ಫೀಲ್ ಎರಡೂ ಹಾಗೆ ಇವೆ. ಇತ್ತೀಚಿಗೆ ಬಿಟ್ಟಿದ್ದ ಒಂದು ಹಾಡಿನಲ್ಲಿ ಈ ಚಿತ್ರದ ನಾಯಕ ಸುದೀಪ್ (Sudeepa) ಹಾಗೇನೆ ಸುಮಾರು ಕಡೆ ಕಂಡಿದ್ದಾರೆ. ಹಾಗೆ ಈಗ ವಿಷಯ ಏನಂದ್ರೆ, ಕಿಚ್ಚ ಸುದೀಪ್ ಮತ್ತು ಪ್ರಿಯಾ ಸುದೀಪ್ (Priya Sudeepa) ಈ ನವ ನಾಯಕನ ಬಗ್ಗೆ ಮನಸಾರೆ ಮಾತನಾಡಿದ್ದಾರೆ. ಅದರ ವಿವರ ಮುಂದೆ ಇದೆ ಓದಿ.
ನಮ್ಮ ಮಗ…
ಮ್ಯಾಂಗೋ ಪಚ್ಚ ಅನ್ನುವ ಈ ಚಿತ್ರದಲ್ಲಿ ಮೈಸೂರು ಹುಡುಗನ ಕಥೆ ಹೇಳಲಾಗುತ್ತಿದೆ. ಈ ಕಥೆಯಲ್ಲಿ ಸಂಚಿತ್‌ಗೆ ಕಾಜಲ್ ಕುಂದರ್ ಜೋಡಿ ಆಗಿದ್ದಾರೆ. ನವ ನಿರ್ದೇಶಕ ವಿವೇಕ್ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ. ಚರಣ್ ರಾಜ್ ಸಂಗೀತ ಕೊಟ್ಟಿದ್ದಾರೆ.
ಸಂಚಿತ್ ಸಂಜೀವ್ ಯಾರು? ಈ ಪ್ರಶ್ನೆಗೆ ಕಿಚ್ಚ ಸುದೀಪ್ ಉತ್ತರ ಕೊಟ್ಟಿದ್ದಾರೆ. ಸಂಚಿತ್ “My Boy” ಅಂತ ಸುದೀಪ್ ಹೇಳಿದ್ದಾರೆ. ಸುದೀಪ್ ಪತ್ನಿ ಪ್ರಿಯಾ ಸುದೀಪ್ ಏನ್ ಹೇಳಿದ್ದಾರೆ ಗೊತ್ತಾ?
ಹೌದು, ಸಂಚಿತ್ ಸಂಜೀವ್ ನಮ್ಮ ಮಗ ಅಂತ ಹೇಳಿದ್ದಾರೆ. ಈ ಮಾತು ಆದ್ಮೇಲೆ ಸುದೀಪ್ ಹೇಳ್ತಾರೆ. ಇನ್ಮುಂದೆ ಸಂಚಿತ್ ನಿಮ್ಮ ಮಗ ಅಂತ ಹೇಳ್ತಾರೆ.
ಸಂಚಿತ್ ಸಂಜೀವ್ ಯಾರು? ಕನಸುಗಳು ಏನೆಲ್ಲ ಇವೆ? ಚಿತ್ರ ತಂಡದ ಜೊತೆಗೆ ಹೇಗೆ ನಡೆದುಕೊಳ್ಳುತ್ತಾರೆ? ಈ ಎಲ್ಲ ವಿಚಾರಗಳು ಇದೀಗ ರಿವೀಲ್ ಆಗಿವೆ.
ಕೆಆರ್‌ಜಿ ಸಂಸ್ಥೆಯ ಕಾರ್ತಿಕ್ ಗೌಡ ಹಾಗೂ ಯೋಗಿ ಸಹ ಸಂಜಿತ್ ಬಗ್ಗೆ ಮಾತನಾಡಿದ್ದಾರೆ. ಸಂಚಿತ್ ಯಾವ ರೀತಿ ಇದ್ದಾರೆ. ಅವರ ನೇಚರ್ ಏನು ಅನ್ನೋದನ್ನ ಹೇಳಿಕೊಂಡಿದ್ದಾರೆ. ಮ್ಯಾಂಗೋ ಪಚ್ಚ ಚಿತ್ರವನ್ನ ಕಾರ್ತಿಕ್ ಅವರ ಕೆಆರ್‌ಜಿ ಹಾಗೂ ಸುದೀಪ್ ಅವರ ಸುಪ್ರಿಯಾನ್ವಿ ಸಂಸ್ಥೆ ಜಂಟಿ ಆಗಿಯೇ ನಿರ್ಮಿಸಿವೆ.
ಜೂನಿಯರ್ ಕಿಚ್ಚ
ಮ್ಯಾಂಗೋ ಪಚ್ಚ ಚಿತ್ರ ಜೂನ್-5 ರಂದು ರಿಲೀಸ್ ಆಗುತ್ತಿದೆ. ಈ ಮೂಲಕ ಕನ್ನಡಕ್ಕೆ ನವ ನಟ ಸಂಚಿತ್ ಸಂಜೀವ್ ಪಾದಾರ್ಪಣೆ ಮಾಡುತ್ತಿದ್ದಾರೆ.
ಸಂಚಿತ್ ಸಂಜೀವ್ ಪ್ರಾಮಿಸಿಂಗ್ ಆಗಿದ್ದಾರೆ. ಮೊದಲ ಅವಕಾಶದಲ್ಲಿ ಆ ಭರವಸೆ ಮೂಡಿಸಿದ್ದಾರೆ. ಚಿತ್ರದ ವಿಡಿಯೋಗಳು ಮತ್ತು ಫೋಟೋಗಳನ್ನ ನೋಡಿದಾಗ ಆ ಒಂದು ನಂಬಿಕೆ ಮೂಡುತ್ತದೆ.
ಮ್ಯಾಂಗೋ ಪಚ್ಚ ಚಿತ್ರದ ಎರಡು ಹಾಡು ರಿಲೀಸ್ ಆಗಿವೆ. ಹಸ್ರವ್ವ ಅನ್ನೋ ಹಾಡು ಮೊದಲು ರಿಲೀಸ್ ಆಗಿದೆ. ಇತ್ತೀಚಿಗೆ ಖಡಕ್ ಮಾಲ್ ಅನ್ನುವ ಇನ್ನೂ ಒಂದು ಗೀತೆ ಹೊರ ಬಂದಿದೆ.
ಈ ಹಾಡಿನಲ್ಲಿ ಆ ದಿನಗಳಲ್ಲಿ ಗಾಂಜಾ ಹೇಗೆ ಮಾರಾಟ ಮಾಡ್ತಾ ಇದ್ದರು. ಆ ದಂಧೆ ಹೇಗೆ ನಡೀತಾ ಇತ್ತು. ಯುವಕರು ಇದನ್ನ ಹೇಗೆಲ್ಲ ಖರೀದಿ ಮಾಡ್ತಾ ಇದ್ದರು ಅನ್ನೋದು ತಿಳಿಯುತ್ತದೆ.
ಈ ಚಿತ್ರದ ವಿಡಿಯೋಗಳು ಮತ್ತು ಫೋಟೋಗಳು ಇನ್ನೂ ಒಂದು ಸತ್ಯ ಹೇಳುತ್ತವೆ. ಹೌದು, ಸಂಚಿತ್ ಸಂಜೀವ ಪಕ್ಕಾ ಜೂನಿಯರ್ ಕಿಚ್ಚ ಸುದೀಪ್ ಅಂತಲೇ ಹೇಳ್ತಿವೆ.
ಸಿನಿಮಾ ತಂಡವು ಸಂಚಿತ್ ಅವರನ್ನ ಜೂನಿಯರ್ ಕಿಚ್ಚ ಅಂತಲೇ ಹೇಳುತ್ತದೆ. ಇನ್ನುಳಿದಂತೆ ಸಂಚಿತ್ ಅಭಿನಯದ ಮ್ಯಾಂಗೋ ಪಚ್ಚ ಸಿನಿಮಾ ರಿಲೀಸ್‌ಗೆ ರೆಡಿ ಆಗಿದೆ. ಜೂನ್-5 ರಂದು ಇದು ತೆರೆಗೂ ಬರ್ತಿದೆ.
Bangalore [Bangalore],Bangalore,Karnataka
May 18, 2026 11:14 AM IST













