Shiva Rajkumar: ಶಿವಣ್ಣನ ಸಾಲ್ಟ್ & ಪೆಪ್ಪರ್ ಲುಕ್! ಏಜ್‌ಗೆ ತಕ್ಕ ರೋಲ್ ನೋಡಿ! | | ACTPnews

ಶಿವಣ್ಣನ ಸಾಲ್ಟ್ ಆ್ಯಂಡ್ ಪೆಪ್ಪರ್ ಲುಕ್; ಏಜ್‌ಗೆ ತಕ್ಕನಾದ ರೋಲ್ ನೋಡಿ!


Last Updated:

ಬೇಲ್ ಚಿತ್ರದ ಶಿವಣ್ಣ ಲುಕ್ ಗಮನ ಸೆಳೆಯುತ್ತಿದೆ. ಚಿತ್ರದ ಈ ಲುಕ್‌ನ ಫೋಟೋಗಳು ಅಧಿಕೃತವಾಗಿ ಹೊರ ಬಂದಿವೆ. ಅದರ ಸುತ್ತ ಒಂದು ಸ್ಟೋರಿ ಇಲ್ಲಿದೆ ಓದಿ.

ಶಿವಣ್ಣನ ಸಾಲ್ಟ್ ಆ್ಯಂಡ್ ಪೆಪ್ಪರ್ ಲುಕ್; ಏಜ್‌ಗೆ ತಕ್ಕನಾದ ರೋಲ್ ನೋಡಿ!
ಶಿವಣ್ಣನ ಸಾಲ್ಟ್ ಆ್ಯಂಡ್ ಪೆಪ್ಪರ್ ಲುಕ್; ಏಜ್‌ಗೆ ತಕ್ಕನಾದ ರೋಲ್ ನೋಡಿ!

ಶಿವರಾಜ್ ಕುಮಾರ್ (Shiva Rajkumar) ಸಾಲ್ಟ್ ಆ್ಯಂಡ್‌ ಪೆಪ್ಪರ್ ಲುಕ್ (Salt and Pepper Look) ಸಖತ್ ಆಗಿದೆ. ಮೀಸೆ ಕೂಡ ಇದೆ. ಸ್ವಾಗ್ ಕಡಿಮೆ ಆಗಿಲ್ಲ. ಕಣ್ಣಲ್ಲಿಯ ಕಿಚ್ಚು ಇನ್ನು ಹಾಗೆ ಇದೆ. ವಯಸ್ಸಾದ ಹುಲಿಯ ಖದರ್ ಹೇಗೆ ಇರ್ತದೋ ಹಾಗಿದೆ ಈ ಲುಕ್. ಹೌದು, ಇದು ಬೇಲ್ ಚಿತ್ರದ (Bail Movie) ಲುಕ್ ಆಗಿದೆ. ಈ ಚಿತ್ರದ ಫಸ್ಟ್ ಟೀಸರ್ ರಿಲೀಸ್ ಆಗಿದೆ. ಇದರಲ್ಲಿ ಶಿವಣ್ಣ (Shivanna) ಸಖತ್ ಆಗಿಯೇ ಕಾಣಿಸುತ್ತಿದ್ದಾರೆ. ಇದೇ ಚಿತ್ರದ ಕೆಲವು ಫೋಟೋಗಳನ್ನ ಸಿನಿಮಾ ತಂಡವೇ ಅಧಿಕೃತವಾಗಿ ಹಂಚಿಕೊಂಡಿದೆ. ಇದರ ಕಂಪ್ಲೀಟ್ ವಿವರ ಇಲ್ಲಿದೆ ಓದಿ.

ಸಾಲ್ಟ್ ಆ್ಯಂಡ್ ಪೆಪ್ಪರ್ ಲುಕ್

ಶಿವಣ್ಣ ಸಖತ್ ಆಗಿಯೇ ಕಾಣಿಸುತ್ತಿದ್ದಾರೆ. ವಯಸ್ಸಾದ ಹುಲಿಯ ತರದ ಕಿಚ್ಚು ಕಣ್ಣಲ್ಲಿ ಕಾಣಿಸುತ್ತಿದೆ. ಸಾಲ್ಟ್ ಆ್ಯಂಡ್ ಪೆಪ್ಪರ್ ಲುಕ್ ಅಂತ ಸಸಖತ್ ಸೂಟ್ ಆಗಿದೆ.
shiva rajkumar bail movie salt and pepper look photo reveal

ಸಾಲ್ಟ್ ಆ್ಯಂಡ್ ಪೆಪ್ಪರ್ ಲುಕ್

ಕಾಸ್ಟೂಮ್ ಖದರ್ ಕೂಡ ಬೇರೆ ಇದೆ. ಯುವಕರಂತೆ ಇಲ್ಲಿ ಜಾಕೆಟ್ ಧರಿಸಿದ್ದಾರೆ. ಆಫೀಸರ್ ರೀತಿ ಕೋಟ್ ಕೂಡ ಹಾಕಿದ್ದಾರೆ. ಆದರೆ, ಈ ಪಾತ್ರ ನಿಜಕ್ಕೂ ಯಾವ ರೀತಿ ಇದೆ ಅನ್ನುವ ಕುತೂಹಲವನ್ನು ಈ ಫೋಟೋಗಳು ಹಾಗೂ ಟೀಸರ್ ಹುಟ್ಟುಹಾಕಿದೆ.

ಕಿಚ್ಚ ಮೆಚ್ಚಿದ ಬೇಲ್ ಟೀಸರ್

ಕಿಚ್ಚ ಸುದೀಪ್ ಈ ಚಿತ್ರದ ಟೀಸರ್ ಮೆಚ್ಚಿಕೊಂಡಿದ್ದಾರೆ. ಪ್ರತಿಯೊಂದನ್ನು ಸೂಕ್ಷ್ಮವಾಗಿ ಗಮನಿಸಿದ್ದಾರೆ. ಈ ಒಂದು ಟೀಸರ್ ಅಲ್ಲಿ ಶಿವಣ್ಣನ ಕುಳಿತಿರೋ ದೃಶ್ಯ ಬರುತ್ತದೆ.

ಇದನ್ನ ನೋಡಿದಾಗ ಸುದೀಪ್ ಅವರಿಗೆ ರಾಜಕುಮಾರ್ ಅವರನ್ನ ನೋಡಿದ ಹಾಗೆ ಆಗಿದೆ. ಅದನ್ನ ಶಿವರಾಜ್ ಕುಮಾರ್ ಅವರ ಎದುರು ಹೇಳಿಕೊಂಡಿದ್ದಾರೆ.

ಶಿವಣ್ಣ ಏನಂದ್ರು

ಈ ಒಂದು ಮಾತು ಕೇಳಿದ್ಮೇಲೆ ಶಿವಣ್ಣನ ಮೊಗದಲ್ಲಿ ಮಂದಹಾಸ ಮೂಡಿದೆ. ಅಷ್ಟೆ ಸಂಕೋಚವು ಕಾಣಿಸಿದೆ. ಸುದೀಪ್ ಅಷ್ಟೆ ಅಲ್ಲ, ಇತರರಿಗೂ ಈ ಚಿತ್ರದ ಟೀಸರ್ ಇಷ್ಟ ಆಗಿದೆ.

ಶಿವಣ್ಣ ಲುಕ್ ಮತ್ತು ಫೀಲ್ ಎರಡೂ ಇಷ್ಟ ಆಗಿವೆ. ಇದನ್ನ ತಮ್ಮದೇ ರೀತಿಯಲ್ಲಿಯೇ ಎಲ್ಲರೂ ಹೇಳಿಕೊಳ್ಳುತ್ತಿದ್ದಾರೆ. ಅಂದ್ಹಾಗೆ ಬೇಲ್ ಚಿತ್ರದ ಟೀಸರ್ ವಿಶೇಷ ಜಾಗದಲ್ಲಿ ರಿಲೀಸ್ ಆಗಿದೆ.

ಅಜನೀಶ್ ಕಾನ್ಸರ್ಟ್

ಅಜನೀಶ್ ಲೋಕನಾಥ್ ಮೇ-15 ರಂದು ಬೆಂಗಳೂರಿನಲ್ಲಿ ಲೈವ್ ಇನ್ ಕಾನ್ಸರ್ಟ್ ಮಾಡಿದ್ದಾರೆ. ಇದೇ ವೇದಿಕೆ ಮೇಲೆ ಬೇಲ್ ಚಿತ್ರದ ಟೀಸರ್ ರಿಲೀಸ್ ಆಗಿದೆ.

shiva rajkumar bail movie salt and pepper look photo reveal

ಧರ್ಮಶಾಲಾದಲ್ಲಿ ಶೂಟಿಂಗ್

ಇದನ್ನ ಸುದೀಪ್ ಇಲ್ಲಿ ನೋಡಿದ್ದಾರೆ. ಸೂಪರ್ ಸಿಂಬಲ್ ತೋರಿಸಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಹೀಗೆ ಹೇಳಿರೋ ಸುದೀಪ್ ಮಾತುಗಳು ಗಮನ ಸೆಳೆದಿವೆ.

ಸುದೀಪ್ ವಿಡಿಯೋ ವೈರಲ್

ಸುದೀಪ್ ಹೇಳಿರೋ ಮಾತುಗಳು ವಿಡಿಯೋ ವೈರಲ್ ಆಗಿದೆ. ಚಿತ್ರದ ಡೈರೆಕ್ಟರ್ ಪವರ್ ಒಡೆಯರ್ ಕೂಡ ಈ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ.

ಧರ್ಮಶಾಲಾದಲ್ಲಿ ಶೂಟಿಂಗ್

ಬೇಲ್ ಚಿತ್ರದ ಕೊನೆ ಹಂತದ ಚಿತ್ರೀಕರಣ ಹಿಮಾಚಲಪ್ರದೇಶದ ಧರ್ಮಶಾಲಾದಲ್ಲಿ ನಡೆದಿದೆ. ದಲೈ ಲಾಮಾ ಅವರನ್ನ ಸಾಯಿ ಕುಮಾರ್, ಜಯರಾಮ್, ಪವನ್ ಒಡೆಯರ್ ಮೀಟ್ ಆಗಿದ್ದಾರೆ.

ಆದರೆ, ಶಿವರಾಜ್ ಕುಮಾರ್ ಈ ಸಮಯದಲ್ಲಿ ಬೇರೆ ಕಡೆ ಇದ್ದರು. ಹಾಗಾಗಿಯೇ ಇವರು ದಲೈ ಲಾಮಾ ಅವರನ್ನ ಭೇಟಿ ಆಗಿಲ್ಲ. ಇನ್ನುಳಿದಂತೆ ಅಲ್ಲಿಂದ ಬಂದ್ಮೇಲೆ ಬೇಲ್ ಚಿತ್ರ ಫಸ್ಟ್ ಟೀಸರ್ ರಿಲೀಸ್ ಆಗಿದೆ. ಹೊಸ ಭರವಸೆ ಮೂಡಿಸಿದೆ. ವರಮಹಾಲಕ್ಷ್ಮಿ ಹಬ್ಬಕ್ಕೆ ಈ ಚಿತ್ರ ರಿಲೀಸ್ ಕೂಡ ಆಗುತ್ತಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports