Last Updated:
ಕರಾವಳಿ ಚಿತ್ರದ ಮತ್ತೊಂದು ಹಾಡು ರಿಲೀಸ್ ಆಗಿದೆ. ಇದು ಕಂಬಳದ ರೋಷಾಗ್ನಿಯನ್ನ ಕಟ್ಟಿಕೊಂಡುತ್ತದೆ. ಅದಕ್ಕೇನೆ ಇದನ್ನ Rage of Kambala ಅಂತಲೇ ಕರೆದಿದ್ದಾರೆ. ಕಾಂತಾರ ಖ್ಯಾತಿಯ ಪ್ರಮೋದ್ ಮರವಂತೆ ಇದನ್ನ ಬರೆದಿದ್ದಾರೆ. ಈ ಹಾಡಿನ ಇನ್ನಷ್ಟು ವಿವರ ಇಲ್ಲಿದೆ ಓದಿ.
ಕರಾವಳಿ ಸಿನಿಮಾದ (Karavali Movie) ಮತ್ತೊಂದು ಹಾಡು ರಿಲೀಸ್ (Song Release) ಆಗಿದೆ. ಇದರಲ್ಲಿ ಒಂದು ಪವರ್ ಇದೆ. ಕಂಬಳದ ಸುತ್ತ ಸಾಗುವ ಈ ಹಾಡಿನಲ್ಲಿ ರೋಷಾಗ್ನಿ ಇದೆ. ಆ ರೀತಿನೇ ಇದನ್ನ ಕಂಪೋಸ್ ಮಾಡಿದ್ದಾರೆ. ಕಾಂತಾರ ಚಿತ್ರಕ್ಕೆ (Kantara Movie) ಸಿಂಗಾರ ಸಿರಿಯೇ ಹಾಡು ಬರೆದ ಅದೇ ಪ್ರಮೋದ್ ಮರವಂತೆ (Pramod Maravanthe) ಈ ಒಂದು ಕಂಬಳದ ಹಾಡನ್ನ ಬರೆದಿದ್ದಾರೆ. ಆದರೆ, ಇದು ವಿಷ್ಯೂಲಿ ಬೇರೆ ಇದೆ. ಸಿನಿಮಾದಲ್ಲಿ ಈ ಹಾಡಿನ ಟ್ರ್ಯಾಕ್ ಇರುತ್ತದೆ. ಹಾಗೆ ವಿಷ್ಯೂಲ್ ಕೂಡ ಬೇರೆ ಇರುತ್ತದೆ. ಈ ವಿಶೇಷ ಹಾಡಿನ ಇನ್ನಷ್ಟು ವಿವರ ಇಲ್ಲಿದೆ ಓದಿ.
ಕರಾವಳಿ ಚಿತ್ರ ಕಂಬಳದ ಹಾಡು
(ಚಿತ್ರ ಕೃಪೆ: ರಾಜ್ ಬಿ ಶೆಟ್ಟಿ ಇನ್‌ಸ್ಟಾಗ್ರಾಮ್)
“Rage of Kambala Cover Video Song” ಬರ್ತಿದೆ ಅನ್ನೋ ವಿಚಾರವನ್ನ ರಾಜ್ ಬಿ ಶೆಟ್ರು ಜುಲೈ-14 ರಂದು ಹೇಳಿದ್ದರು. ಹಾಗೆ ಈ ಒಂದು ಹಾಡು ಜುಲೈ-15 ರಂದು ರಿಲೀಸ್ ಆಗಿದೆ. ಈ ಹಾಡನ್ನ ಕೇಳ್ತಾ ಹೋದ್ರೆ, ಒಂದು ವೈಬ್ರೇಷನ್ ಕ್ರಿಯೇಟ್ ಆಗುತ್ತದೆ. ಇದನ್ನ ರೋಷಾಗ್ನಿ ಅಂದ್ರು ತಪ್ಪಿಲ್ಲ ಬಿಡಿ. ಆ ರೀತಿನೇ ಈ ಒಂದು ಗೀತೆ ಇದೆ.
ಈ ಒಂದು ಗೀತೆಯನ್ನ ಯಾರು ಹಾಡಿದರು ಅಂತಲೇ ಕೇಳ್ಬೇಕು ಅನಿಸುತ್ತದೆ. ಇದನ್ನ ಕೇಳಿದಾಕ್ಷಣ ಈ ಪ್ರಶ್ನೆ ಮೊದಲು ಹುಟ್ಟುತ್ತದೆ. ಕಾರಣ, ಗಾಯಕನ ಧ್ವನಿ ಇಲ್ಲಿ ಹಾಗೆ ಕೇಳಿಸುತ್ತದೆ.
ಕರಾವಳಿ ಚಿತ್ರದ ಈ ಒಂದು ಹಾಡು ಕವರ್ ಸಾಂಗ್ ಆಗಿದೆ. ಸಿನಿಮಾದಲ್ಲಿ ಈ ಹಾಡಿನ ಟ್ರ್ಯಾಕ್ ಇರುತ್ತದೆ. ಆದರೆ, ಈಗೀನ ವಿಷ್ಯೂಲ್ ಏನು ಇರೋದಿಲ್ಲ. ಬದಲಾಗಿ ಸಿನಿಮಾದಲ್ಲಿ ಈ ಹಾಡಿಗೆ ವಿಷ್ಯೂಲ್ ಬೇರೇನೆ ಇರುತ್ತದೆ.
ಹಾಗೆ ಈ ಒಂದು ಕರಾವಳಿ ಚಿತ್ರ ತನ್ನದೇ ಆದ ರೀತಿಯಲ್ಲಿಯೇ ಸದ್ದು ಮಾಡಿದೆ. ಪ್ರಜ್ವಲ್ ದೇವರಾಜ್ ಡಬ್ಬಿಂಗ್ ವಿವಾದ ಭಾರೀ ಸೌಂಡ್ ಮಾಡಿದೆ. ಆದರೆ, ಇದರಿಂದ ಸಿನಿಮಾಗೆ ಅದೆಷ್ಟು ಹೆಲ್ಪ್ ಆಯಿತೋ ಏನೋ? ಕರಾವಳಿ ಸಿನಿಮಾ ಈ ವಿವಾದದಿಂದಲೂ ಗಮನ ಸೆಳೆದಿದೆ.
ಪ್ರಜ್ವಲ್ ದೇವರಾಜ್
(ಚಿತ್ರ ಕೃಪೆ: ಗುರುದತ್ತ ಗಾಣಿಗ ಇನ್‌ಸ್ಟಾಗ್ರಾಮ್)
ಈ ಕರಾವಳಿ ಚಿತ್ರದ ಎರಡು ಹಾಡು ಈಗಾಗಲೆ ರಿಲೀಸ್ ಆಗಿವೆ. ಒಂದು ಬಾ ಕರಾವಳಿಗೆ ಅನ್ನೋ ಹಾಡಾದ್ರೆ, ಮತ್ತೊಂದು ಮುದ್ದು ಗುಮ್ಮ ಅನ್ನೋದೆ ಆಗಿದೆ.
ಕರಾವಳಿ ಚಿತ್ರ ಜುಲೈ-24 ರಂದು ರಿಲೀಸ್ ಆಗುತ್ತಿದೆ. ಗುರುದತ್ತ ಗಾಣಿಗ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ. ನಿರ್ಮಾಪಕರಲ್ಲಿ ಇವರೂ ಕೂಡ ಒಬ್ಬರಾಗಿದ್ದಾರೆ. ಈ ಚಿತ್ರಕ್ಕೆ ಸಚಿನ್ ಬಸ್ರೂರು ಸಂಗೀತ ಕೊಟ್ಟಿದ್ದಾರೆ.
ಪ್ರಜ್ವಲ್ ದೇವರಾಜ್ ಈ ಚಿತ್ರದ ನಾಯಕರಾಗಿದ್ದಾರೆ. ರಾಜ್ ಬಿ ಶೆಟ್ಟಿ ಈ ಸಿನಿಮಾದಲ್ಲಿ ಪ್ರಮುಖ ಗೆಸ್ಟ್ ರೋಲ್ ಮಾಡಿದ್ದಾರೆ. ಸಂಪದ ಈ ಚಿತ್ರದ ನಾಯಕಿ ಆಗಿದ್ದಾರೆ. ಮಿತ್ರ, ಶ್ರೀಧರ್, ರಮೇಶ್ ಇಂದಿರಾ ಸೇರಿದಂತೆ ಇನ್ನು ಹಲವು ಕಲಾವಿದರು ಈ ಚಿತ್ರದಲ್ಲಿದ್ದಾರೆ ಅಂತ ಹೇಳಬಹುದು.
Bangalore [Bangalore],Bangalore,Karnataka














