Last Updated:
ಚಾಮರಾಜನಗರದ 12 ಕರಾಟೆ ಕ್ರೀಡಾಪಟುಗಳು ಚೆನ್ನೈನಲ್ಲಿ ನಡೆದ ವರ್ಲ್ಡ್ ಕರಾಟೆ ಮಾಸ್ಟರ್ಸ್ ಅಸೋಸಿಯೇಷನ್ನ ಗಿನ್ನಿಸ್ ವಿಶ್ವ ದಾಖಲೆ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ.
ಮೈಸೂರು: ಕರ್ನಾಟಕದ (Karnataka) ಹಿಂದುಳಿದ ಜಿಲ್ಲೆ ಎಂದೇ ಬಿಂಬಿತವಾಗಿರುವ ಚಾಮರಾಜನಗರದ (Chamarajanagara) ಕ್ರೀಡಾ ಲೋಕದಿಂದ ಈಗ ಇಡೀ ದೇಶವೇ ಹುಬ್ಬೇರಿಸುವಂತಹ ಹೆಮ್ಮೆಯ ಸುದ್ದಿಯೊಂದು ಹೊರಬಿದ್ದಿದೆ. ತಮಿಳುನಾಡಿನ (Tamilnadu) ರಾಜಧಾನಿ ಚೆನ್ನೈನಲ್ಲಿ ವರ್ಲ್ಡ್ ಕರಾಟೆ ಮಾಸ್ಟರ್ಸ್ ಅಸೋಸಿಯೇಷನ್ ವತಿಯಿಂದ ಆಯೋಜಿಸಲಾಗಿದ್ದ ಅತ್ಯಂತ ಪ್ರತಿಷ್ಠಿತ ‘ಕರಾಟೆ ಗಿನ್ನಿಸ್ ವಿಶ್ವ ದಾಖಲೆ’ ಕಾರ್ಯಕ್ರಮದಲ್ಲಿ, ಚಾಮರಾಜನಗರ ಜಿಲ್ಲೆಯ ಕೇವಲ 12 ಮಂದಿ ಕ್ರೀಡಾಪಟುಗಳು ದಿಢೀರ್ ಎಂಟ್ರಿ ಕೊಟ್ಟು ವಿಶ್ವ ದಾಖಲೆಯ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದಾರೆ. ಸಣ್ಣ ಪಟ್ಟಣದ ಈ ಸಾಧಕರು ಜಾಗತಿಕ ಮಟ್ಟದಲ್ಲಿ ಸೃಷ್ಟಿಸಿರುವ ಈ ಕರಾಟೆ ಕ್ರಾಂತಿ ಈಗ ಎಲ್ಲೆಡೆ ಸಖತ್ ವೈರಲ್ ಆಗಿದೆ.













