Item Song Actress: ಸ್ಯಾಂಡಲ್ವುಡ್ (Sandalwood) ಸಿನಿಮಾಗಳಲ್ಲಿ (Cinema) ಐಟಂ ಹಾಡುಗಳು (Item Songs) ಕೇವಲ ಕೆಲವು ನಿಮಿಷಗಳ ಡ್ಯಾನ್ಸ್ ಮಾತ್ರವಲ್ಲ, ಕೆಲವು ಸಂದರ್ಭಗಳಲ್ಲಿ, ಅವು ಇಡೀ ಚಿತ್ರಕ್ಕೇ ದೊಡ್ಡ ಹೈಪ್ ತಂದುಕೊಡುತ್ತದೆ. ಯಕ್ಕಾ ನಿನ್ ಮಗಳು, ಪಟಾಕಿ ಪೋರಿಯೋ, ಪಂಕಜ ಗಳಂತಹ ಹಾಡುಗಳು (Song) ಸಿನಿಮಾಗೆ (Film) ಬಿಡುಗಡೆಗೂ ಮುನ್ನವೇ ದೊಡ್ಡ ಮಟ್ಟದಲ್ಲಿ ಪ್ರಚಾರ ತಂದುಕೊಟ್ಟಿತು. ಕೇವಲ ಚಂದನವನದಲ್ಲಿ ಮಾತ್ರವಲ್ಲ, ಬೇರೆ ಚಿತ್ರರಂಗದಲ್ಲಿಯೂ, ‘ಮುನ್ನಿ ಬದ್ನಾಮ್ ಹುಯಿ’ಯಿಂದ ‘ಶೀಲಾ ಕಿ ಜವಾನಿ’ ವರೆಗೆ, ‘ಬೇಬಿ ಡಾಲ್’ನಿಂದ ‘ಊ ಅಂತವಾ’ ವರೆಗೆ ಬಿಡುಗಡೆಯಾದ ಅನೇಕ ಹಾಡುಗಳು ಬ್ಲಾಕ್ಬಸ್ಟರ್ ಆಗಿವೆ. ಈ ಹಾಡುಗಳಲ್ಲಿ ಕೆಲವು ಸಿನಿಮಾಗಿಂತಲೂ ದೊಡ್ಡ ಹಿಟ್ ಆಗಿವೆ. ಅದರಲ್ಲೂ, ಸ್ಟಾರ್ ನಾಯಕಿಯರು ಈ ಐಟಂ ಹಾಡುಗಳಲ್ಲಿ ಕಾಣಿಸಿಕೊಂಡು ಭಾರಿ ಮೊತ್ತದ ಸಂಭಾವನೆ ಪಡೆದಿದ್ದಾರೆ. ಹಾಗಾದ್ರೆ, ಐಟಂ ಸಾಂಗ್ಗೆ ಅತಿ ಹೆಚ್ಚು ಹಣ ಪಡೆದ ನಟಿ (Actress) ಯಾರು ಗೊತ್ತಾ?












