Prakash Raj: ಬಾಗೇಪಲ್ಲಿಯಲ್ಲಿ ಪ್ರಕಾಶ್ ರಾಜ್​​ಗೆ ನಿರ್ಬಂಧ! ರಸ್ತೆ ಮಧ್ಯೆಯೇ ನಟನನ್ನು ಅಧಿಕಾರಿಗಳು ತಡೆದಿದ್ದೇಕೆ? | | ACTPnews

ನಟ ಪ್ರಕಾಶ್ ರಾಜ್ಗೆ ನಿರ್ಬಂಧ


Last Updated:

ಡಿವೈಎಫ್ಐನ 13ನೇ ರಾಜ್ಯ ಸಮ್ಮೇಳನದಲ್ಲಿ ನಟ ಪ್ರಕಾಶ್ ರಾಜ್ ಭಾಗವಹಿಸಬೇಕಿತ್ತು. ಆದ್ರೆ, ರಸ್ತೆ ಮಧ್ಯೆಯೇ ಅಧಿಕಾರಿಗಳು ತಡೆದಿದ್ದಾರೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ನಟ ಪ್ರಕಾಶ್ ರಾಜ್ಗೆ ನಿರ್ಬಂಧ
ನಟ ಪ್ರಕಾಶ್ ರಾಜ್ಗೆ ನಿರ್ಬಂಧ

ಚಿಕ್ಕಬಳ್ಳಾಪುರ: ಬಾಗೇಪಲ್ಲಿಯಲ್ಲಿ ನಟ ಪ್ರಕಾಶ್ ರಾಜ್ (Prakash Raj) ಅವರಿಗೆ ನಿರ್ಬಂಧ ವಿಧಿಸಲಾಗಿದೆ. ಡಿವೈಎಫ್​​ಐ (DYFI) ರಾಜ್ಯ ಸಮ್ಮೇಳನದಲ್ಲಿ ಭಾಗವಹಿಸದಂತೆ ನಟ ಪ್ರಕಾಶ್​ ರಾಜ್​ಗೆ ನಿಷೇಧಿಸಲಾಗಿದೆ. ವೇದಿಕೆಗೆ ಹೋಗದಂತೆ ಅಧಿಕಾರಿಗಳು ರಸ್ತೆ ಮಧ್ಯೆ ತಡೆದಿದ್ದಾರೆ. ಬಳಿಕ ಪ್ರಕಾಶ್​ ರಾಜ್​, ಬೃಹತ್ ಜಾಥಾಗೆ ಚಾಲನೆ ನೀಡಿ ವಾಪಸ್ ತೆರಳಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದಲ್ಲಿ ಇಂದು ಏರ್ಪಡಿಸಿದ್ದ ಡಿವೈಎಫ್​ಐನ 13ನೇ ರಾಜ್ಯ ಸಮ್ಮೇಳನದಲ್ಲಿ ನಟ ಕಿಶೋರ್ ಹಾಗೂ ಪ್ರಕಾಶ್ ರಾಜ್ ಭಾಗವಹಿಸಬೇಕಿತ್ತು. ರಾಜ್ಯದ ನಾನಾ ಜಿಲ್ಲೆಗಳಿಂದ ಡಿವೈಎಫ್​ಐ ಪ್ರತಿನಿಧಿಗಳು ಆಗಮಿಸಿದ್ದರು. ಆದ್ರೆ, ರಾಜ್ಯ ಸಮ್ಮೇಳನದಲ್ಲಿ ಭಾಗವಹಿಸದಂತೆ ನಿರ್ಬಂಧ ಹೇರಲಾಗಿದೆ. ಪ್ರಕಾಶ್ ರಾಜ್ ಅವರನ್ನ ವೇದಿಕೆಗೆ ಬರದಂತೆ ತಡೆದಿದ್ದಕ್ಕೆ ಸಿಪಿಐ ಎಂ ಮುಖಂಡ ಎಂ.ಪಿ ಮುನಿವೆಂಕಟಪ್ಪ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

SIR ಪ್ರಕ್ರಿಯೆಯನ್ನು ತಕ್ಷಣವೇ ರದ್ದುಗೊಳಿಸಿ.

ಮತಹಕ್ಕು ಕಸಿಯುತ್ತಿರುವ ಎಸ್‌ಐಆರ್ (SIR) ಪ್ರಕ್ರಿಯೆಯನ್ನು ತಕ್ಷಣವೇ ರದ್ದುಗೊಳಿಸಿ ಎಂದು ನಟ ಪ್ರಕಾಶ್​ ರಾಜ್​ ಆಗ್ರಹಿಸಿದ್ದಾರೆ. ನಿನ್ನೆ ತುಮಕೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ, ನಟ ಪ್ರಕಾಶ್​ ರಾಜ್​, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ತಕ್ಷಣವೇ ಹುದ್ದೆಯಿಂದ ಪದಚ್ಯುತಿಗೊಳಿಸಿ. ​ಎಸ್‌ಐಆರ್ ಪ್ರಕ್ರಿಯೆಯೇ ತಪ್ಪು, ಪ್ರಸ್ತುತ ನಡೆಸಲಾಗಿರುವ ಎಸ್‌ಐಆರ್ ಪ್ರಕ್ರಿಯೆ ಎಲ್ಲರನ್ನೂ ಒಳಗೊಂಡಿಲ್ಲಾದು ತಪ್ಪು ಎಂದು ಟೀಕಿಸಿದ್ದರು.

ಗೊಂದಲ ಸೃಷ್ಟಿಸಿ ಮತ್ತೆ ಫಾರಂ ನಂ. 6 ತುಂಬಿ ಹೊಸ ಪಟ್ಟಿ ಮಾಡಿ ಎನ್ನುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಪ್ರಕಾಶ್​ ರಾಜ್​, ​ಚುನಾವಣೆ ಗೆಲ್ಲಲು ತಂತ್ರ, ದೆಹಲಿ, ಹರಿಯಾಣ, ಪಶ್ಚಿಮ ಬಂಗಾಳ ಮಾದರಿಯಲ್ಲೇ ಎಲ್ಲಾ ಕಡೆ ಗೆಲ್ಲಲು ಬಿಜೆಪಿ ಎಸ್‌ಐಆರ್ ಬಳಸುತ್ತಿದೆ ಎಂದು ಆರೋಪ ಮಾಡಿದರು. ​ಈ ಸಂಪೂರ್ಣ ಪ್ರಕ್ರಿಯೆಯ ಹಿಂದೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಇದ್ದಾರೆ. ಇಷ್ಟೆಲ್ಲ ಗೊಂದಲಕ್ಕೆ ನೇರ ಕಾರಣ ಸಿಇಸಿ ಜ್ಞಾನೇಶ್ ಕುಮಾರ್ ಎಂದು ಹೇಳಿದರು.

​ಎಸ್‌ಐಆರ್ ಹೋರಾಟಕ್ಕೆ ಹೊಸ ಸ್ವರೂಪ

ಸ್ಥಳೀಯ ಮಟ್ಟದಲ್ಲೇ ಸಮಸ್ಯೆಗಳ ವಿರುದ್ಧ ಧ್ವನಿ ಎತ್ತಲು ಸಾರ್ವಜನಿಕರಿಗೆ ಪ್ರಕಾಶ್​ ರಾಜ್​ ಕರೆ ಕೊಟ್ಟಿದ್ದು, ​ವೀಡಿಯೋ ಸಾಕ್ಷ್ಯ ಸಂಗ್ರಹಿಸಿ ಬೂತ್‌ಗಳ ಅನ್ಯಾಯ ಹಾಗೂ ಸಮಸ್ಯೆಗಳನ್ನು ಮೊಬೈಲ್‌ನಲ್ಲಿ ವಿಡಿಯೋ ಮಾಡಿ ಕಳುಹಿಸಲು ಮನವಿ ಮಾಡಿದರು. ಇದೇ ​ಸೆ.30ಕ್ಕೆ ತನಿಖಾ ವರದಿ ಬಿಡುಗಡೆ ಮಾಡಲಾಗುವುದು, ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ರಾಜ್ಯದ 100 ಬೂತ್‌ಗಳ ತನಿಖಾ ವರದಿಯನ್ನು, ಸಾಕ್ಷ್ಯಸಮೇತ ಜನರೆದುರು ಇಡಲಾಗುವುದು. ಸೆ. 30ರಂದು ಸಿಎಂ ಡಿ.ಕೆ. ಶಿವಕುಮಾರ್ ಅವರ ಮುಂದೆ ಸಾಕ್ಷ್ಯ ಮಂಡಿಸಿ, ಬಳಿಕ ಸಾಮಾಜಿಕ ತನಿಖೆಗೆ (ಸೋಷಿಯಲ್ ಆಡಿಟ್) ಒತ್ತಾಯ ಮಾಡುತ್ತೇವೆ.

ಮತ್ತೊಮ್ಮೆ ​ಅ. 1ರಂದು ದೆಹಲಿ, ಜಾರ್ಖಂಡ್, ಅಸ್ಸಾಂ ಸೇರಿದಂತೆ ವಿವಿಧ ರಾಜ್ಯಗಳ ತಂಡಗಳೊಂದಿಗೆ ದೆಹಲಿಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿ ​ಅ.3ರಂದು ಸಿಇಸಿ ವಿರುದ್ಧ ಎಫ್‌ಐಆರ್ ದಾಖಲಿಸಲು ನಿರ್ಧಾರ ಮಾಡುತ್ತೇವೆ. ವಕೀಲರ ತಂಡದ ಮೂಲಕ ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ FIR ದಾಖಲಿಸಲು ನಿರ್ಧರಿಸಿದ್ದೇವೆ ಎಂದು ತಿಳಿಸಿದ ಪ್ರಕಾಶ್​ ರಾಜ್​, ​ಅ. 15ಕ್ಕೆ ಜಂತರ್‌ಮಂಥರ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಲಿದ್ದೇವೆ, ದೆಹಲಿಯ ಜಂತರ್‌ಮಂಥರ್‌ನಲ್ಲಿ ವಿಪಕ್ಷ ಸಂಸದರು, ರೈತರು ಹಾಗೂ ದಲಿತ ಸಂಘಟನೆಗಳ ಒಕ್ಕೂಟದಿಂದ ಬೃಹತ್ ಹೋರಾಟ ಮಾಡಲಿದ್ದೇವೆ ಎಂದು ಮಾಹಿತಿ ನೀಡಿದ್ರು.

(ವರದಿ: ದತ್ತಾತ್ರೇಯ, ನ್ಯೂಸ್​18 ಕನ್ನಡ, ಚಿಕ್ಕಬಳ್ಳಾಪುರ)



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed