AUS vs BAN: ವಿಶ್ವಚಾಂಪಿಯನ್ ಆಸ್ಟ್ರೇಲಿಯಾಗೆ ಬಿಗ್ ಶಾಕ್! ಬರೋಬ್ಬರಿ 21 ವರ್ಷಗಳ ಬಳಿಕ ಆಸೀಸ್​ ವಿರುದ್ಧ ಬಾಂಗ್ಲಾದೇಶಕ್ಕೆ ಐತಿಹಾಸಿಕ ಗೆಲುವು | ಕ್ರೀಡಾ ಸುದ್ದಿ | ACTPnews

ಆಸ್ಟ್ರೇಲಿಯಾ ವಿರುದ್ಧ ಬಾಂಗ್ಲಾದೇಶಕ್ಕೆ ಗೆಲುವು


Last Updated:

ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್‌ಗಳು ರನ್ ಚೇಸ್‌ನಲ್ಲಿ ದಯನೀಯವಾಗಿ ವಿಫಲರಾದರು. ಆಸ್ಟ್ರೇಲಿಯಾ ತಮಡ 42.2 ಓವರ್​​ಗಳಲ್ಲಿ 9 ವಿಕೆಟ್ ಕಳೆದುಕೊಂಡು 191 ರನ್​ಗಳಿಸಿತ್ತು. ಮಳೆ ಬಂದ ಕಾರಣ ಆಟವನ್ನ ಸ್ಥಗಿತಗೊಳಿಸಿತು. ಆಟ ಮುಂದುವರಿಯದ ಕಾರಣ ಡೆಕ್ವರ್ತ್ ನಿಯಮದನ್ವಯ ಬಾಂಗ್ಲಾ ವಿಜಯಿ ಎಂದು ಘೋಷಿಸಿಲಾಯಿತು.

ಆಸ್ಟ್ರೇಲಿಯಾ ವಿರುದ್ಧ ಬಾಂಗ್ಲಾದೇಶಕ್ಕೆ ಗೆಲುವು
ಆಸ್ಟ್ರೇಲಿಯಾ ವಿರುದ್ಧ ಬಾಂಗ್ಲಾದೇಶಕ್ಕೆ ಗೆಲುವು

ಅಂಡರ್‌ಡಾಗ್ ಬಾಂಗ್ಲಾದೇಶವು (Bangladesh vs Australia) ವಿಶ್ವ ಚಾಂಪಿಯನ್ (World Champion) ಆಸ್ಟ್ರೇಲಿಯಾಕ್ಕೆ ಅನಿರೀಕ್ಷಿತ ಆಘಾತ ನೀಡಿದೆ. ಮಂಗಳವಾರ ತವರಿನಲ್ಲಿ ನಡೆದ ಮೂರು ಪಂದ್ಯಗಳ ಏಕದಿನ ಸರಣಿಯ (ODI Series) ಮೊದಲ ಪಂದ್ಯದಲ್ಲಿ 86 ರನ್‌ಗಳಿಂದ (ಡಕ್‌ವರ್ತ್-ಲೂಯಿಸ್ ವಿಧಾನದ ಮೂಲಕ) ಅದ್ಭುತ ಗೆಲುವು ಸಾಧಿಸಿತು. ಈ ಮೂಲಕ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು. ಬಾಂಗ್ಲಾದೇಶ ಹಾಗೂ ಆಸ್ಟ್ರೇಲಿಯಾ ತಂಡಗಳು 36 ವರ್ಷಗಳಿಂದ ಮುಖಾಮುಖಿಯಾಗುತ್ತಿದ್ದು, ಇದು ಬಾಂಗ್ಲಾಗೆ ಕೇವಲ 2ನೇ ಗೆಲುವಾಗಿದೆ. ಬಾಂಗ್ಲಾದೇಶ 2005ರಲ್ಲಿ ಕಾರ್ಡಿಫ್‌ನಲ್ಲಿ ನಡೆದ ಪಂದ್ಯದಲ್ಲಿ ಮೊದಲ ಬಾರಿಗೆ ಆಸೀಸ್ ತಂಡವನ್ನು ದಿಗ್ಭ್ರಮೆಗೊಳಿಸಿತ್ತು.

ಮಿಂಚಿದ ಹೊಸೈನ್-ಶಾಂಟೋ

ಢಾಕಾದ ಶೇರ್-ಎ-ಬಾಂಗ್ಲಾ ಕ್ರೀಡಾಂಗಣದಲ್ಲಿ ನಡೆದ ಇಂದಿನ ಪಂದ್ಯದಲ್ಲಿ, ಟಾಸ್ ಸೋತ ನಂತರ ಬಾಂಗ್ಲಾದೇಶ ಮೊದಲು ಬ್ಯಾಟಿಂಗ್ ಮಾಡಿತು. ಆರಂಭಿಕ ಆಟಗಾರ ತಾಂಜಿದ್ ಹಸನ್ ತಮೀಮ್ 44 ಎಸೆತಗಳಲ್ಲಿ 7 ಬೌಂಡರಿ, 1 ಸಿಕ್ಸರ್ ಸಹಿತ 54 ರನ್​ ಮತ್ತು ನಜ್ಮುಲ್ ಹೊಸೈನ್ ಶಾಂಟೋ 86 ಎಸೆತಗಳಲ್ಲಿ 9 ಬೌಂಡರಿ 1 ಸಿಕ್ಸರ್​ ಸಹಿತ 67 ರನ್​ಗಳ ಅರ್ಧಶತಕಗಳೊಂದಿಗೆ ಮಿಂಚಿದರು. 2022ರ ಬಳಿಕ ಮೊದಲ ಏಕದಿನ ಪಂದ್ಯವನ್ನಾಡಿದ ಮೊಸದಿಕ್ ಹೊಸೈನ್ 70 ಎಸೆತಗಳಲ್ಲಿ 7 ಬೌಂಡರಿ, 3 ಸಿಕ್ಸರ್​​ಗಳ ಸಹಿತ ಅಜೇಯ 86 ರನ್​ಗಳಿಸಿ ಅಬ್ಬರಿಸಿದರು. ತೌಹಿದ್ ಹೃದಯೋಯ್ (31) ಮತ್ತು ತಸ್ಕಿನ್ ಅಹ್ಮದ್ (20) ಕೂಡ ಉತ್ತಮ ಕೊಡುಗೆ ನೀಡಿದರು. ಇವರೆಲ್ಲರ ಆಟದ ನೆರವಿನಿಂದ ಬಾಂಗ್ಲಾದೇಶ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 284 ರನ್ ಗಳಿಸಿತು.

ಆಸ್ಟ್ರೇಲಿಯಾ ವಿಫಲ

ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್‌ಗಳು ರನ್ ಚೇಸ್‌ನಲ್ಲಿ ದಯನೀಯವಾಗಿ ವಿಫಲರಾದರು. ಆಸ್ಟ್ರೇಲಿಯಾ ತಂಡ 42.2 ಓವರ್​​ಗಳಲ್ಲಿ 9 ವಿಕೆಟ್ ಕಳೆದುಕೊಂಡು 191 ರನ್​ಗಳಿಸಿತ್ತು. ಮಳೆ ಬಂದ ಕಾರಣ ಆಟವನ್ನ ಸ್ಥಗಿತಗೊಳಿಸಲಾಯಿತು. ಆಟ ಮುಂದುವರಿಯದ ಕಾರಣ ಡೆಕ್ವರ್ತ್ ನಿಯಮದನ್ವಯ ಬಾಂಗ್ಲಾ ವಿಜಯಿ ಎಂದು ಘೋಷಿಸಲಾಯಿತು.

ಬಾಂಗ್ಲಾದೇಶದ ವೇಗಿ ನಹಿದ್ ರಾಣಾ (10-1-41-4) 4 ವಿಕೆಟ್ ಪಡೆದು ಗೆಲುವಿನ ರೂವಾರಿಯಾದರು. ಬ್ಯಾಟಿಂಗ್‌ನಲ್ಲಿ ಮಿಂಚಿದ್ದ ಮೊಸದಿಕ್ ಹೊಸೈನ್, ಬೌಲಿಂಗ್​​ನಲ್ಲೂ ಮಿಂಚಿದರು 37ಕ್ಕೆ 2 ವಿಕೆಟ್ ಉಡಾಯಿಸಿದರು. ಮುಸ್ತಾಫಿಜುರ್ 24ಕ್ಕೆ 2 ಮತ್ತು ತಸ್ಕಿನ್ 28ಕ್ಕೆ 1 ಸಹ ಉತ್ತಮ ಪ್ರದರ್ಶನ ನೀಡಿದರು.

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

AUS vs BAN: ವಿಶ್ವಚಾಂಪಿಯನ್ ಆಸ್ಟ್ರೇಲಿಯಾಗೆ ಬಿಗ್ ಶಾಕ್! ಬರೋಬ್ಬರಿ 21 ವರ್ಷಗಳ ಬಳಿಕ ಆಸೀಸ್​ ವಿರುದ್ಧ ಬಾಂಗ್ಲಾದೇಶಕ್ಕೆ ಐತಿಹಾಸಿಕ ಗೆಲುವು



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed