IND vs IRL: 155 ರನ್ ಚೇಸ್ ಮಾಡಲಾಗದೆ ಸೋತ ಟೀಮ್ ಇಂಡಿಯಾ! ವಿಶ್ವಚಾಂಪಿಯನ್ ಭಾರತದ ವಿರುದ್ಧ ಕ್ಲೀನ್ ಸ್ವೀಪ್ ಸಾಧಿಸಿ ಚರಿತ್ರೆ ಸೃಷ್ಟಿಸಿದ ಐರ್ಲೆಂಡ್ | ಕ್ರೀಡಾ ಸುದ್ದಿ | ACTPnews

ಭಾರತಕ್ಕೆ ಸರಣಿ ಸೋಲಿನ ಮುಖಭಂಗ


Last Updated:

20 ವರ್ಷಗಳಿಂದ ಭಾರತದ ಎದುರು ಒಂದೇ ಒಂದು ಪಂದ್ಯ ಗೆಲ್ಲದ ಐರ್ಲೆಂಡ್ ಇದೀಗ ಬ್ಯಾಕ್ ಟು ಬ್ಯಾಕ್ ಪಂದ್ಯ ಸೋತು ಸರಣಿಯಲ್ಲೇ ವೈಟ್ ವಾಶ್ ಮುಖಭಂಗ ಅನಿಭವಿಸಿದೆ.

ಭಾರತಕ್ಕೆ ಸರಣಿ ಸೋಲಿನ ಮುಖಭಂಗ
ಭಾರತಕ್ಕೆ ಸರಣಿ ಸೋಲಿನ ಮುಖಭಂಗ

ಭಾರತ ಮತ್ತು ಐರ್ಲೆಂಡ್ (India vs Ireland) ನಡುವಿನ ಎರಡನೇ ಟಿ20 ಪಂದ್ಯದಲ್ಲೂ ಭಾರತ ಹೀನಾಯ ಸೋಲು ಕಂಡಿದೆ. ಬೆಲ್ ಫಾಸ್ಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಿಮ್ ಇಂಡಿಯಾ ಐರ್ಲೆಂಡ್ ನೀಡಿದ್ದ ಕೇವಲ 155 ರನ್ ಗಳ ಗುರಿಯನ್ನ ಬೆನ್ನಟ್ಟಲಾಗದೇ 1 ರನ್​ ಅಂತರದಿಂದ ಸೋಲು ಕಂಡಿದೆ. ಈ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ ಐರ್ಲೆಂಡ್ ವಿರುದ್ಧ ಸರಣಿಯನ್ನ ಕಳೆದುಕೊಂಡಿದೆ. 20 ವರ್ಷಗಳಿಂದ ಭಾರತದ ಎದುರು ಒಂದೇ ಒಂದು ಪಂದ್ಯ ಗೆಲ್ಲದ ಐರ್ಲೆಂಡ್ ಇದೀಗ ಬ್ಯಾಕ್ ಟು ಬ್ಯಾಕ್ ಪಂದ್ಯ ಗೆದ್ದು ಸರಣಿಯನ್ನ ವೈಟ್ ವಾಶ್ ಸಾಧಿಸಿ ಚರಿತ್ರೆ ಸೃಷ್ಟಿಸಿದೆ.

ಕೆಟ್ಟ ಆರಂಭ

155 ರನ್​ಗಳ ಚೇಸ್ ಆರಂಭಿಸಿದ ಭಾರತ ತಂಡ ಕೆಟ್ಟ ಆರಂಭ ಪಡೆದುಕೊಂಡಿತು. ಆರಂಭಿಕ ಆಟಗಾರರಾದ ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಮೊದಲ ಓವರ್​​ನಲ್ಲಿಯೇ ಖಾತೆಗಳನ್ನು ತೆರೆಯದೇ ಗೋಲ್ಡನ್ ಡಕ್ ಆದರು. ನಂತರ ಬಂದ ನಾಯಕ ಶ್ರೇಯಸ್ ಅಯ್ಯರ್ (7 ಎಸೆತಗಳಲ್ಲಿ 10) ಕೂಡ ಹೆಚ್ಚು ಕಾಲ ಉಳಿಯಲಿಲ್ಲ. ಈ ಮೂವರೂ ಭಾರತೀಯ ಮೂಲದ ಜೈ ಮುಂಡ್ರಾ ಬೌಲಿಂಗ್​​ನಲ್ಲಿ ವಿಕೆಟ್ ಒಪ್ಪಿಸಿದರು. ಇನ್ನೂ 11 ಎಸೆತಗಳಲ್ಲಿ 12 ರನ್ ಗಳಿಸಿದ್ದ ಇಶಾನ್​ ಕಿಶನ್​ ರನ್​ ಔಟ್ ಆಗಿ ನಿರಾಶೆ ಮೂಡಿಸಿದರು.

ತಿಲಕ್ ವರ್ಮಾ ಆಟ ವ್ಯರ್ಥ

35ಕ್ಕೆ 4 ವಿಕೆಟ್ ಕಳೆದುಕೊಂಡಿದ್ದ ಭಾರತ ತಂಡ ಹೀನಾಯ ಸೋಲಿನ ಭೀತಿ ಎದುರಿಸಿತ್ತು. ಆದರೆ ತಿಲಕ್ ವರ್ಮಾ 5ನೇ ವಿಕೆಟ್ ಜೊತೆಯಾಟದಲ್ಲಿ ಅಕ್ಷರ್ ಪಟೇಲ್ (18 ಎಸೆತಗಳಲ್ಲಿ 14) ಅವರೊಂದಿಗೆ ಐದನೇ ವಿಕೆಟ್ ಗೆ 39 ರನ್ ಗಳ ಜೊತೆಯಾಟ ಹಂಚಿಕೊಂಡು ಚೇತರಿಕೆ ನೀಡಿದರು. ಅಕ್ಷರ್ ಪಟೇಲ್ ನಂತರ ತಿಲಕ್ ಅವರು ಶಿವಂ ದುಬೆ (16 ಎಸೆತಗಳಲ್ಲಿ 20) ಅವರೊಂದಿಗೆ ಆರನೇ ವಿಕೆಟ್ ಗೆ 35 ರನ್ ಗಳ ಜೊತೆಯಾಟ ಹಂಚಿಕೊಂಡರು ಮತ್ತು ಭಾರತವನ್ನು 100 ದಾಟಿಸಿದರು. 46 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ಸಹಿತ 55 ರನ್​ಗಳಿಸಿದ್ದ ತಿಲಕ್ 19ನೇ ಓವರ್ ನಲ್ಲಿ ಮ್ಯಾಥ್ಯೂ ಹೊಲ್ಲಾರ್ಡ್​ಗೆ ವಿಕೆಟ್ ಒಪ್ಪಿಸಿದರು. ಈ ವಿಕೆಟ್​ನೊಂದಿಗೆ ಭಾರತದ ಗೆಲುವಿನ ಆಸೆಯೂ ಕಮರಿತ್ತು.

ರೋಚಕ ಸೋಲು

ಇಂದೇ ಪದಾರ್ಪಣೆ ಮಾಡಿದ್ದ ಸೂರ್ಯಾಂಶ್ ಶೆಡ್ಗೆ (1) ಕೇವಲ 1 ರನ್​ಗಳಿಸಿ ಔಟ್ ಆದರು. ಆದರೆ ಹರ್ಷಿತ್ ರಾಣಾ 10 ಎಸೆತಗಳಲ್ಲಿ 21 ರನ್​​​​ ಸಿಡಿಸಿ ಪಂದ್ಯವನ್ನ ಗೆಲುವಿನ ಸನಿಹ ತಂದರಾದರೂ ಗಡಿ ದಾಟಿಸಲು ಸಾಧ್ಯವಾಗಲಿಲ್ಲ. ಕೊನೆಗೆ ಭಾರತ ತಂಡ ಕೇವಲ 1 ರನ್​​​​ನಿಂದ ಸೋಲೊಪ್ಪಿಕೊಂಡಿತು.

ಐರ್ಲೆಂಡ್ ಪರ ಜೈ ಮುಂಡ್ರಾ 32ಕ್ಕೆ3, ಮ್ಯಾಟ್ ಹಾಲಾರ್ಡ್ 26ಕ್ಕೆ3, ಮ್ಯಾಥ್ಯೂ ಹಂಪ್ರೇಸ್ 28ಕ್ಕೆ1, ಹ್ಯಾರಿ ಟೆಕ್ಟರ್ 40ಕ್ಕೆ1 ವಿಕೆಟ್ ಪಡೆದು ಗೆಲುವಿನ ರೂವಾರಿಯಾದರು.

ಹ್ಯಾರಿ ಟೆಕ್ಟರ್ ಮಿಂಚಿನ ಅರ್ಧಶತಕ

ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್ ಮಾಡಿದ್ದ ಐರ್ಲೆಂಡ್ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 154 ರನ್ ಗಳಿಸಿತ್ತು. ಐರ್ಲೆಂಡ್ ಪರ ಹ್ಯಾರಿ ಟೆಕ್ಟರ್ ಅತಿ ಹೆಚ್ಚು ರನ್ ಗಳಿಸಿದ್ದರು. 47 ಎಸೆತಗಳಲ್ಲಿ 5 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 53 ರನ್ ಗಳಿಸಿದ್ದರು. ಬೆಂಜಮಿನ್ ಕಾಲಿಟ್ಜ್​ 23 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್​​ಗಳ ಸಹಿತ 37 ರನ್​ ಸಿಡಿಸಿದರೆ, ಕೊನೆಯಲ್ಲಿ ಡಾಕ್ರೆಲ್ 14 ಎಸೆತಗಳಲ್ಲಿ 19 ರನ್​ ಸಿಡಿಸಿ ತಂಡದ ಮೊತ್ತವನ್ನ 150ರ ಗಡಿ ದಾಟಿಸಿದ್ದರು.

ಭಾರತದ ಪರ ಪದಾರ್ಪಣೆ ಆಟಗಾರ ಪ್ರಿನ್ಸ್ ಯಾದವ್ ಮೂರು ವಿಕೆಟ್ ಪಡೆದರೆ, ಅರ್ಷ್​ದೀಪ್ ಸಿಂಗ್ ಮತ್ತು ಶಿವಂ ದುಬೆ ತಲಾ ಎರಡು ವಿಕೆಟ್ ಪಡೆದರು. ಹರ್ಷಿತ್ ರಾಣಾ ಒಂದು ವಿಕೆಟ್ ಪಡೆದರು.

ಟಿ20 ಇತಿಹಾಸದಲ್ಲಿ 3ನೇ ಬಾರಿ ಭಾರತ ತಂಡ ವೈಟ್ ವಾಶ್​

ಭಾರತ ತಂಡ ಟಿ20 ಇತಿಹಾಸದಲ್ಲಿ 2 ಅಥವಾ ಅದಕ್ಕಿಂತ ಹೆಚ್ಚು ಪಂದ್ಯಗಳ ಸರಣಿಯಲ್ಲಿ 3ನೇ ಬಾರಿ ವೈಟ್ ವಾಶ್ ಆಗಿದೆ. 2019ರಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ 03, 2019ರಲ್ಲೇ ಆಸ್ಟ್ರೇಲಿಯಾ ವಿರುದ್ಧ 0-2 ಹಾಗೂ ಇದೀಗ ಐರ್ಲೆಂಡ್ 0-2ರಲ್ಲಿ ಟಿ20 ಸರಣಿಯಲ್ಲಿ ವೈಟ್ ವಾಶ್ ಮುಖಭಂಗ ಎದುರಿಸಿದೆ.

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

IND vs IRL: 155 ರನ್ ಚೇಸ್ ಮಾಡಲಾಗದೆ ಸೋತ ಟೀಮ್ ಇಂಡಿಯಾ! ವಿಶ್ವಚಾಂಪಿಯನ್ ಭಾರತದ ವಿರುದ್ಧ ಕ್ಲೀನ್ ಸ್ವೀಪ್ ಸಾಧಿಸಿ ಚರಿತ್ರೆ ಸೃಷ್ಟಿಸಿದ ಐರ್ಲೆಂಡ್



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed