Vijayalakshmi: ನನ್ನ ಹೃದಯಕ್ಕೆ ಹತ್ತಿರ ‘ಕಂಬದ ಮ್ಯಾಲಿನ ಗೊಂಬಿಯೇ’ ಹಾಡು; ಕಾರಣ ಹೇಳಿಯೇ ಬಿಟ್ಟರು ವಿಜಯಲಕ್ಷ್ಮಿ! | | ACTPnews

ನನ್ನ ಹೃದಯಕ್ಕೆ ಹತ್ತಿರ 'ಕಂಬದ ಮ್ಯಾಲಿನ ಗೊಂಬಿಯೇ' ಹಾಡು; ಕಾರಣ ಹೇಳಿಯೇ ಬಿಟ್ಟರು ವಿಜಯಲಕ್ಷ್ಮಿ!


Last Updated:

ನಾಗಮಂಡಲ ಚಿತ್ರದ ಕಂಬದ ಮ್ಯಾಲಿನ ಗೊಂಬಿಯೇ ಹಾಡು ಚಿತ್ರದ ನಾಯಕಿ ವಿಜಯಲಕ್ಷ್ಮಿ ಅವರ ಹೃದಯಕ್ಕೆ ಹತ್ತಿರವಾಗಿದೆ. “ಒಬ್ಬಳೇ ನಾನಿಲ್ಲಿ ತಬ್ಬಿಬ್ಬುಗೊಂಡಿಹೆನ” ಅನ್ನುವ ಸಾಲಿನಂತೇನೆ ಜೀವನ ಇದೆ ಅನ್ನೋದನ್ನು ಹೇಳಿಕೊಂಡಿದ್ದಾರೆ. ಇನ್ನು ಸುಮಾರು ವಿಚಾರ ಹೇಳಿಕೊಂಡಿದ್ದಾರೆ. ಇದರ ಕಂಪ್ಲೀಟ್ ವಿವರ ಇಲ್ಲಿದೆ ಓದಿ.

ನನ್ನ ಹೃದಯಕ್ಕೆ ಹತ್ತಿರ 'ಕಂಬದ ಮ್ಯಾಲಿನ ಗೊಂಬಿಯೇ' ಹಾಡು; ಕಾರಣ ಹೇಳಿಯೇ ಬಿಟ್ಟರು ವಿಜಯಲಕ್ಷ್ಮಿ!
ನನ್ನ ಹೃದಯಕ್ಕೆ ಹತ್ತಿರ ‘ಕಂಬದ ಮ್ಯಾಲಿನ ಗೊಂಬಿಯೇ’ ಹಾಡು; ಕಾರಣ ಹೇಳಿಯೇ ಬಿಟ್ಟರು ವಿಜಯಲಕ್ಷ್ಮಿ!

ನಾಗಮಂಡಲ ಚಿತ್ರದಲ್ಲಿ (Nagamandala Movie) ಉತ್ತರ ಕರ್ನಾಕಟದ ಕತೆ ಇದೆ. ಶಂಕರ್ ನಾಗ್ (Shankar Nag) ಅವರು ಈ ಕತೆಯನ್ನ ಚಿತ್ರ ಮಾಡ್ಬೇಕು ಅಂತ ಕನಸು ಕಂಡಿದ್ದರು. ಆದರೆ, ಅವರು ಚಿಕ್ಕ ವಯಸ್ಸಿನಲ್ಲಿಯೇ ಹೋಗಿ ಬಿಟ್ಟರು. ಆದರೆ, ಗಿರೀಶ್ ಕಾರ್ನಾಡ್ ಅವರ ಈ ನಾಟಕವನ್ನ ರಂಭೂಮಿಯಲ್ಲಿ ಆಗಾಗ ಆಡ್ತಾನೆ ಇದ್ದರು. ಆದರೆ, ಮುಂದೆ ಡೈರೆಕ್ಟರ್ ಟಿ.ಎಸ್.ನಾಗಾಭರಣ ಅವರು ಇದನ್ನ ಸಿನಿಮಾ ಮಾಡಿದರು. ಈ ಮೂಲಕ ಶಂಕರ್ ನಾಗ್ ಅವರ ಕನಸು ನನಸು ಮಾಡಿದರು. ಪ್ರಕಾಶ್ ರಾಜ್ (Prakash Raj) ಹಾಗೂ ವಿಜಯಲಕ್ಷ್ಮಿ (Vijayalakshmi) ಈ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದರು. ಬಾಗಲಕೋಟೆಯ ವಾಡೆಯಲ್ಲಿಯೇ ಈ ಚಿತ್ರವನ್ನ ಚಿತ್ರೀಕರಿಸಲಾಗಿದೆ. ಈ ಚಿತ್ರದ ಕೆಲವು ಅನುಭವಗಳನ್ನ ಚಿತ್ರದ ನಾಯಕಿ ವಿಜಯಲಕ್ಷ್ಮಿ ಇದೀಗ ಹಂಚಿಕೊಂಡಿದ್ದಾರೆ. ಅದರ ವಿವರ ಇಲ್ಲಿದೆ ಓದಿ.

ನನ್ನ ಹೃದಯಕ್ಕೆ ಹತ್ತಿರದ ಹಾಡು..

ನಟಿ ವಿಜಯಲಕ್ಷ್ಮಿ ಆಡಿಷನ್ ಕೂಡ ವಿಶೇಷವಾಗಿಯೇ ಆಗಿದೆ. ಕಂಬದ ಮ್ಯಾಲಿನ ಗೊಂಬೆಯೇ ಹಾಡಿಗೇನೆ ವಿಜಯಲಕ್ಷ್ಮಿ ಅವರು ಆಡಿಷನ್ ಕೊಟ್ಟಿದ್ದಾರೆ. ಈ ಒಂದು ಹಾಡಿಗೆ ಏನೆಲ್ಲ ಮಾಡೋಕೆ ಆಗುತ್ತದೆಯೋ ಅದೆನ್ನಲ್ಲ ಮಾಡಿ ಅಂತಲೇ ಡೈರೆಕ್ಟರ್ ಟಿ.ಎಸ್.ನಾಗಾಭರಣ ಅವರು ಹೇಳಿದ್ದರು.
Kannada Heroine Vijayalakshmi Share Interesting Facts of Nagamandala Movie

ಕಂಬದ ಮ್ಯಾಲಿನ ಗೊಂಬಿಯೇ

ಅದನ್ನೆ ಮಾಡಿದ್ಮೇಲೆ ನಾಗಾಭರಣ ಅವರಿಗೆ ರಾಣಿ ಪಾತ್ರಕ್ಕೆ ಬೇಕಿರೋ ಮುಗ್ಧತೆನೂ ಸಿಕ್ಕಿದೆ. ಇಷ್ಟು ಮುಗ್ಧತೆ ಇದ್ದರೆ ಸಾಕು ಅಂತಲೂ ಟಿ.ಎಸ್.ನಾಗಾಭರಣ ಹೇಳಿಕೊಂಡಿದ್ದಾರೆ. ಹೀಗೆ ಚಿತ್ರದ ಆಡಿಷನ್ ನಡೆದಿದೆ.

ಕಂಬದ ಮ್ಯಾಲಿನ ಗೊಂಬಿಯೇ

ಚಿತ್ರದ ಈ ಹಾಡು ಸೂಪರ್ ಹಿಟ್ ಆಗಿದೆ. ಸಂಗೀತ ಕಟ್ಟಿ ಅವರು ಈ ಗೀತೆಯನ್ನ ಹಾಡಿದ್ದಾರೆ. ಸಿ.ಅಶ್ವಥ್ ಅವರ ಸಂಗೀತ ಕೊಟ್ಟಿದ್ದಾರೆ. ಗೋಪಾಲ್ ಯಾಜ್ಞಿಕ್ ಈ ಗೀತೆಯನ್ನ ಬರೆದಿದ್ದಾರೆ.

ಇದರಲ್ಲಿ ಬರುವ ಪ್ರತಿ ಸಾಲು ಉತ್ತರ ಕರ್ನಾಟಕದ ಸೊಗಡನ್ನ ಕಟ್ಟಿಕೊಡುತ್ತವೆ. ಹೆಣ್ಣಿನ ಮನಸ್ಸಿನ ಭಾವನೆಗಳನ್ನ ಕಟ್ಟಿಕೊಡುತ್ತವೆ. ಅದಕ್ಕೇನೆ ಈ ಹಾಡು ವಿಜಯಲಕ್ಷ್ಮಿ ಅವರ ಹೃದಯಕ್ಕೂ ತುಂಬಾನೆ ಹತ್ತಿರವಾಗಿದೆ. ಇದರಲ್ಲಿ ಬರುವ ಎರಡು ಸಾಲು ತುಂಬಾನೆ ಇಷ್ಟ ಆಗುತ್ತವೆ.

ಆ ಸಾಲುಗಳ ಇವೇ ನೋಡಿ.

ಒಬ್ಬಳೇ ನಾನಿಲ್ಲಿ ತಬ್ಬಿಬ್ಬುಗೊಂಡಿಹೆನ

ಮಬ್ಬು ಹರಿಯುವುದೇನ

ಹಬ್ಬವಾಗುವುದೇನ

ಈ ಸಾಲುಗಳು ವಿಜಯಲಕ್ಷ್ಮಿ ಅವರಿಗೆ ತುಂಬಾನೆ ಇಷ್ಟ ಆಗುತ್ತವೆ. ಕಾರಣ, ಇಂದಿಗೂ ತಾವು ಮದುವೆ ಆಗದೆ ಒಬ್ಬರೇ ಇರೋದನ್ನ ಹೇಳಿಕೊಳ್ಳುವ ವಿಜಯಲಕ್ಷ್ಮಿ, ಒಬ್ಬಳೆ ನಾನಿಲ್ಲಿ ತಬ್ಬಿಬ್ಬುಗೊಂಡಿಹೆನ ಮಬ್ಬು ಹರಿಯುವುದೇನ ಹಬ್ಬವಾಗುದೇನ ಅಂತಲೇ ಹೇಳಿಕೊಳ್ಳುತ್ತಾರೆ. ಈ ಹಾಡು ಅದಕ್ಕೇನೆ ನನ್ನ ಹೃದಯಕ್ಕೆ ಹತ್ತಿರವಾಗಿದೆ ಅಂತಲೂ ಹೇಳುತ್ತಾರೆ.

Kannada Heroine Vijayalakshmi Share Interesting Facts of Nagamandala Movie

ಒಬ್ಬಳೇ ನಾನಿಲ್ಲಿ ತಬ್ಬಿಬ್ಬುಗೊಂಡಿಹೆನ
ಹಸಿರು ಸಿರಿಯಲಿ…

ಈ ಚಿತ್ರದ ಹಸಿರು ಸಿರಿಯಲಿ ಹಾಡು ಕೂಡ ನಗೆ ಇಷ್ಟ ಆಗುತ್ತದೆ. ಚಿತ್ರದಲ್ಲಿ ಬರುವ ಎಲ್ಲ ಹಾಡುಗಳು ಇಷ್ಟ ಆಗುತ್ತವೆ. ಆದರೆ, ಪರ್ಸಲ್ ಫೇವರಿಟ್ ಅಂತ ಬಂದಾಗ ಅದು ಕಂಬದ ಮ್ಯಾಲಿನ ಗೊಂಬಿಯೇ ಹಾಡೇ ಆಗಿದೆ ಅಂತಲೇ ಹೇಳುತ್ತಾರೆ.

ಈ ಚಿತ್ರದಲ್ಲಿ ಪ್ರಕಾಶ್ ರಾಜ್ ಅವರು ಎರಡು ರೋಲ್ ಮಾಡಿದ್ದಾರೆ. ಗರಡಿ ಮನೆಯ ಪೈಲ್ವಾನ್ ಅಪ್ಪಣ್ಣನಾಗಿಯೂ ಕಾಣಿಸುತ್ತಾರೆ. ನಾಗಪ್ಪನಾಗಿಯೂ ಇಲ್ಲಿ ಅಭಿನಯಸಿದ್ದಾರೆ.

ಆದರೆ, ಇಲ್ಲಿ ನಾಗಪ್ಪನ ರೋಲ್ ಮಾಡುವಾಗ ಪ್ರಕಾಶ್ ರಾಜ್ ತುಂಬಾನೆ ಸ್ಪಾಫ್ಟ್ ಆಗಿರ್ತಾ ಇದ್ದರು. ಆ ಪಾತ್ರವೇ ನನಗೆ ಇಷ್ಟ ಅಂತಲೂ ವಿಜಯಲಕ್ಷ್ಮಿ ಆಗ ಹೇಳುತ್ತಿದ್ದರು.

ಶೃಂಗಾರ ದೃಶ್ಯಗಳು…

ಚಿತ್ರದಲ್ಲಿ ನಾಗಪ್ಪನ ಜೊತೆಗಿನ ಶೃಂಗಾರದ ದೃಶ್ಯಗಳು ಬರುತ್ತವೆ. ಆಗ ಈ ದೃಶ್ಯವನ್ನ ಮಾಡುವಾಗ ನಾಗಾಭರಣ ಅವರ ಪತ್ನಿ ನಾಗಿಣಿ ಭರಣ ಸಹಾಯ ಮಾಡ್ತಾ ಇದ್ದರು.

ಇಂತಹ ದೃಶ್ಯಗಳನ್ನ ತೆಗೆಯುವಾಗ ಎಲ್ರೂ ಹೊರಗೆ ಹೋಗ್ತಾ ಇದ್ದರು. ಡೈರೆಕ್ಟರ್, ಕ್ಯಾಮರಾಮನ್ ಹಾಗೂ ನಾಗಿಣಿ ಭರಣ ಇರ್ತಾ ಇದ್ದರು. ಕಡಿಮೆ ಜನರ ಸಮ್ಮುಖದಲ್ಲಿಯೇ ಚಿತ್ರದ ಇಂತಹ ದೃಶ್ಯಗಳನ್ನ ತೆಗೆದಿದ್ದೇವೆ ಅಂತಲೇ ವಿಜಯಲಕ್ಷ್ಮಿ ಅವರು ಹೇಳಿಕೊಂಡಿದ್ದಾರೆ. ಹಾಗೆ ಆರ್.ಜೆ.ರಾಜೇಶ್ ಅವರ Rajesh Reveals ಪಾಡ್‌ಕಾಸ್ಟ್ ಅಲ್ಲಿಯೇ ವಿಜಯಲಕ್ಷ್ಮಿ ಅವರು ಈ ಎಲ್ಲ ವಿಷಯಗಳನ್ನ ಹೇಳಿಕೊಂಡಿದ್ದಾರೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed