IND vs ENG: ಭಾರತೀಯ ಬೌಲರ್​ಗಳನ್ನ ಧೂಳೀಪಟ ಮಾಡಿದ ಇಂಗ್ಲಿಷ್ ಬ್ಯಾಟರ್ಸ್! ಲಾರ್ಡ್ಸ್​​​ನಲ್ಲಿ ವಿಶ್ವದಾಖಲೆ ಮೊತ್ತ ದಾಖಲಿಸಿದ ಇಂಗ್ಲೆಂಡ್ | ಕ್ರೀಡಾ ಸುದ್ದಿ | ACTPnews

ಬೆನ್ ಡಕೆಟ್


Last Updated:

ಸರಣಿ ನಿರ್ಣಾಯಕ ಪಂದ್ಯದಲ್ಲಿ ಅಮೋಘ ಬ್ಯಾಟಿಂಹ್ ಮಾಡಿದ ಇಂಗ್ಲೆಂಡ್ ತಂಡ 50 ಓವರತ್​ಗಳಲ್ಲಿ 3 ವಿಕೆಟ್ ಕಳೆದುಕೊಂಡು 387 ರನ್​ಗಳ ಬೃಹತ್ ಮೊತ್ತ ಕಲೆಹಾಕಿದೆ. ಈಗಾಗಲೇ ಟಿ20 ಸರಣಿ ಕಳೆದುಕೊಂಡಿರುವ ಟೀಮ್ ಇಂಡಿಯಾ ಏಕದಿನ ಸರಣಿ ಗೆದ್ದು ಗೌರವ ಉಳಿಸಿಕೊಳ್ಳುವುದಕ್ಕೆ ಈ ಪಂದ್ಯದಲ್ಲಿ 388 ರನ್​ಗಳ ಗುರಿಯನ್ನ ಯಶಸ್ವಿಯಾಗಿ ಬೆನ್ನಟ್ಟಬೇಕಿದೆ.

ಬೆನ್ ಡಕೆಟ್
ಬೆನ್ ಡಕೆಟ್

ಭಾನುವಾರ ಭಾರತ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡ ಅದ್ಭುತ ಬ್ಯಾಟಿಂಗ್ ಮಾಡಿ ಬೃಹತ್ ಮೊತ್ತ ದಾಖಲಿಸಿದೆ. ಸರಣಿ ನಿರ್ಣಾಯಕ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಭಾರತೀಯ ಬೌಲರ್​ಗಳನ್ನ ಇನ್ನಿಂಗ್ಸ್ ಪೂರ್ತಿ ಬೆಂಡೆತ್ತಿದ್ದರು. ಜೇಕಬ್ ಬೆಥೆಲ್ 91, ಬೆನ್ ಡಕೆಟ್ 141, ಜೋ ರೂಟ್ ಅಜೇಯ 73 ಹಾಗೂ  ಬಟ್ಲರ್​ ಅಜೇಯ 41 ರನ್​ಗಳ ನೆರವಿನಿಂದ ಅತಿಥೇಯ ತಂಡ 50 ಓವರತ್​ಗಳಲ್ಲಿ 3 ವಿಕೆಟ್ ಕಳೆದುಕೊಂಡು 387 ರನ್​ಗಳ ಬೃಹತ್ ಮೊತ್ತ ಕಲೆಹಾಕಿದೆ. ಈಗಾಗಲೇ ಟಿ20 ಸರಣಿ ಕಳೆದುಕೊಂಡಿರುವ ಟೀಮ್ ಇಂಡಿಯಾ ಏಕದಿನ ಸರಣಿ ಗೆದ್ದು ಗೌರವ ಉಳಿಸಿಕೊಳ್ಳುವುದಕ್ಕೆ ಈ ಪಂದ್ಯದಲ್ಲಿ 388 ರನ್​ಗಳ ಗುರಿಯನ್ನ ಯಶಸ್ವಿಯಾಗಿ ಬೆನ್ನಟ್ಟಬೇಕಿದೆ.

ಟಾಸ್​ ಗೆದ್ದ ಇಂಗ್ಲೆಂಡ್ ತಂಡಕ್ಕೆ ಆರಂಭಿಕ ಆಟಗಾರರಾದ ಜೇಕಬ್ ಬೆಥೆಲ್ ಮತ್ತು ಬೆನ್ ಡಕೆಟ್ ಅದ್ಭುತ ಆರಂಭ ದೊರೆಕಿಸಿಕೊಟ್ಟರು. ಈ ಜೋಡಿ ಮೊದಲ ವಿಕೆಟ್​ಗೆ 192 ರನ್​ಗಳ ಜೊತೆಯಾಟ ನೀಡಿದರು. ಬರೋಬ್ಬರಿ 30 ಓವರ್​ಗಳ ಭಾರತೀಯರನ್ನ ಕಾಡಿದ ಈ ಜೋಡಿ 31 ಓವರ್​​ನಲ್ಲಿ ಪ್ರಸಿದ್ಧ್ ಕೃಷ್ಣ ಬೌಲಿಂಗ್​ನಲ್ಲಿ ಬೇರ್ಪಟ್ಟಿತು. ಜೇಕಬ್ ಬೆಥೆಲ್ 93 ಎಸೆತಗಳಲ್ಲಿ 11 ಬೌಂಡರಿ, 2 ಸಿಕ್ಸರ್​​​​ಗಳ ಸಹಿತ 91 ರನ್​ಗಳಿಸಿ ವಿಕೆಟ್ ಒಪ್ಪಿಸಿದರು. ಕೇವಲ 9 ರನ್​ಗಳಿಂದ ಶತಕ ಮಿಸ್ ಮಾಡಿಕೊಂಡರು. ನಂತರ ಬಂದ ಜೋ ರೂಟ್ ಈ ಪಂದ್ಯದಲ್ಲೂ ತಮ್ಮ ಅದ್ಭುತ ಫಾರ್ಮ್​ ಮುಂದುವರಿಸಿದರು.

ಬೆನ್ ಡಕೆಟ್ ಜೊತೆಗೆ 2ನೇ ವಿಕೆಟ್ ಜೊತೆಯಾಟದಲ್ಲಿ 80 ಎಸೆತಗಳಲ್ಲಿ 101 ರನ್​​ಗಳ ಜೊತೆಯಾಟ ನಡೆಸಿದರು. ಸ್ಫೋಟಕ ಬ್ಯಾಟಿಂಗ್ ಮಾಡಿದ ಡಕೆಟ್ 135 ಎಸೆತಗಳಲ್ಲಿ 18 ಬೌಂಡರಿ, 1 ಸಿಕ್ಸರ್​ ಸಹಿತ 141 ರನ್​ಗಳಿಸಿ ಪ್ರಿನ್ಸ್ ಯಾದವ್​ಗೆ ವಿಕೆಟ್ ಒಪ್ಪಿಸಿದರು. ನಂತರ ಬಂದ ಹ್ಯಾರಿ ಬ್ರೂಕ್ 12 ಎಸೆತಗಳಲ್ಲಿ 14 ರನ್​ಗಳಿಸಿ ಪ್ರಸಿದ್ಧ್​ಗೆ ವಿಕೆಟ್ ಒಪ್ಪಿಸಿದರು. 5ನೇ ಕ್ರಮಾಂಕದಲ್ಲಿ ಬಂದ ಜೋಸ್ ಬಟ್ಲರ್ 4ನೇ ವಿಕೆಟ್ ಜೊತೆಯಾಟದಲ್ಲಿ 20 ಎಸೆತಗಳಲ್ಲಿ 63 ರನ್​ಗಳ ಜೊತೆಯಾಟ ನಡೆಸಿ 387 ರನ್​ಗಳ ಬೃಹತ್​​ ಮೊತ್ತಕ್ಕೆ ಕಾರಣರಾದರು.

ಟಿ20ಯಂತೆ ಬ್ಯಾಟಿಂಗ್​​ ಮಾಡಿದ ಬಟ್ಲರ್​​  ಕೇವಲ 13 ಎಸೆತಗಳಲ್ಲಿ 4  ಬೌಂಡರಿ, 3 ಸಿಕ್ಸರ್​​ಗಳ ಸಹಿತ ಅಜೇಯ 41 ರನ್​ಗಳಿಸಿದರೆ, ಜೋ ರೂಟ್ 48 ಎಸೆತಗಳಲ್ಲಿ 9 ಬೌಂಡರಿಗಳ ಸಹಿತ ಅಜೇಯ 74 ರನ್​ಗಳಿಸಿದರು. ರೂಟ್​ ಸತತ 3ನೇ ಇನ್ನಿಂಗ್ಸ್​​​ನಲ್ಲೂ ಅಜೇಯರಾಗಿ ಉಳಿದುಕೊಂಡರು.  ಈ ಜೋಡಿ ಕೊನೆಯ 3 ಓವರ್​ಗಳಲ್ಲಿ 62 ರನ್​ ಸೂರೆಗೈದರು.

ಭಾರತದ ಪರ ಪ್ರಸಿದ್ಧ್ ಕೃಷ್ಣ 10 ಓವರ್​ಗಳಲ್ಲಿ ರನ್​ ನೀಡಿ 69ಕ್ಕೆ 2 ವಿಕೆಟ್ ಪಡೆದರೆ,  ಪ್ರಿನ್ಸ್​ ಯಾದವ್​ 79ಕ್ಕೆ1 ವಿಕೆಟ್ ಪಡೆದರು.  ಅರ್ಷದೀಪ್ ಸಿಂಗ್ 72 ರನ್ ಹಾಗೂ   ಆದರೆ ಗುರ್ನೂರ್ ಬ್ರಾರ್ 10 ಓವರ್​​​ಗಳಲ್ಲಿ 97 ರನ್ ಬಿಟ್ಟುಕೊಟ್ಟು ದುಬಾರಿಯಾದರು.

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

IND vs ENG: ಭಾರತೀಯ ಬೌಲರ್​ಗಳನ್ನ ಧೂಳೀಪಟ ಮಾಡಿದ ಇಂಗ್ಲಿಷ್ ಬ್ಯಾಟರ್ಸ್! ಲಾರ್ಡ್ಸ್​​​ನಲ್ಲಿ ವಿಶ್ವದಾಖಲೆ ಮೊತ್ತ ದಾಖಲಿಸಿದ ಇಂಗ್ಲೆಂಡ್



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports