ಸೀತಾಮಾತೆಯ ಸ್ಮರಣೆ
ಆದರೆ, ಈ ಒಂದು ಪಾತ್ರವನ್ನ ಮಾಡೋದು ಅಷ್ಟು ಸುಲಭವೇನು ಅಲ್ಲ. ಹಾಗಂತ ಇದನ್ನ ನಾನು ಆಯ್ಕೆ ಮಾಡಿಕೊಂಡೆ ಅಂತಲೂ ಅಲ್ಲ. ಈ ಪಾತ್ರ ನನಗೆ ಆಶೀರ್ವಾದವಾಗಿಯೇ ಬಂದಿದೆ.
ದೇವರ ಪಾತ್ರ ಮಾಡೋದು ಅಂದ್ರೆ ಸುಮ್ನೆ ಅಲ್ಲ. ಹೀಗೆ ಮಾಡ್ತೀನಿ ಅಂತ ಕಾಗದ ಮೇಲೆ ಬರೆದು ಹೇಳೋಕು ಆಗೋದಿಲ್ಲ. ತಾಯಿ ಸೀತಾಮಾತೆಯ ಪಾತ್ರ ಮಾಡುವುಕ್ಕೆ ನಾನು ಎಷ್ಟು ಸಾಧ್ಯವೋ ಅಷ್ಟು ಮನಸ್ಸನ್ನ ಪರಿಶುದ್ಧ ಮಾಡಿಕೊಂಡಿದ್ದೇನೆ.
ರಾಕಿಂಗ್ ಸ್ಟಾರ್ ಯಶ್ ಈ ಚಿತ್ರದಲ್ಲಿ ರಾವಣನ ಪಾತ್ರ ಮಾಡುತ್ತಿದ್ದಾರೆ. ಹಾಗೆ ಈ ಚಿತ್ರಕ್ಕೆ ಇವರೂ ಕೂಡ ಒಬ್ಬ ನಿರ್ಮಾಪಕರೇ ಆಗಿದ್ದಾರೆ.
ಇವರ ಈ ಚಿತ್ರಕ್ಕೆ ಯಶ್ ಬಂದ್ಮೇಲೇನೆ ಸೀತೆಯ ಪಾತ್ರಕ್ಕೆ ಆಯ್ಕೆ ಆಯಿತು ಅನ್ನೋ ಮಾತುಗಳು ಇವೆ. ಸಾಯಿ ಪಲ್ಲವಿ ಅವರ ಕಣ್ಣುಗಳಿಗೆ ಸೋತು ಹೋದ ಯಶ್ ಈ ಬಗ್ಗೆನೂ ಇಲ್ಲಿ ಹೇಳಿರೋದು ಇದೆ.
ಈ ಒಂದು ಮಾತನ್ನ ಡೈರೆಕ್ಟರ್ ನಿತೇಶ್ ತಿವಾರಿ ಹೇಳಿಕೊಂಡಿದ್ದಾರೆ. ರಣಬೀರ್ ಕಪೂರ್ ಹಾಗೂ ಸಾಯಿ ಪಲ್ಲವಿ ಅವರ ಕಣ್ಣಲ್ಲಿ ಆ ಪ್ರಾಮಾಣಿಕತೆ ಕಂಡಿದ್ದೇನೆ.
ರಾಮ ಮತ್ತು ಸೀತೆಯ ಪಾತ್ರಕ್ಕೆ ಬೇಕಿರೋ ಆ ಪ್ರಾಮಾಣಿಕತೆ ಇವರ ಕಣ್ಣಲ್ಲಿ ಕಂಡಿದ್ದೇನೆ. ಇವರನ್ನ ನಾನು ಸಾಯಿ ಪಲ್ಲವಿ ಹಾಗೂ ರಣಬೀರ್ ಕಪೂರ್ ಅಂತ ನೋಡೋದೇ ಇಲ್ಲ. ಇವರನ್ನ ರಾಮ ಮತ್ತು ಸೀತೆಯಂತೆನೆ ನೋಡುತ್ತೇನೆ ಅಂತಲೇ ಡೈರೆಕ್ಟರ್ ನಿತೇಶ್ ತಿವಾರಿ ಹೇಳಿಕೊಂಡಿದ್ದಾರೆ.
ರಾಮಾಯಣ ಚಿತ್ರದ ಟ್ರೈಲರ್ ಇದೇ ತಿಂಗಳು ಜುಲೈ -24 ರಂದು ರಿಲೀಸ್ ಅಗುತ್ತಿದೆ. ವಿಶ್ವದಾದ್ಯಂತ ಈ ಒಂದು ಟ್ರೈಲರ್ ರಿಲೀಸ್ ಆಗುತ್ತಿದೆ.
ಸಾಯಿ ಪಲ್ಲವಿ ಹಿಂಗೆ ಹೇಳಿದ್ಯಾಕೆ?
ಈ ಟ್ರೈಲರ್ ಅಲ್ಲಿ ಏನೆಲ್ಲ ಇದೆ ಅನ್ನೋದು ಸದ್ಯ ಹುಟ್ಟಿಕೊಂಡಿರೋ ಕುತೂಹಲವೂ ಆಗಿದೆ. ಆದರೆ, ದೆಹಲಿಯಲ್ಲಿ ನಡೆದ ಚಿತ್ರದ ಪ್ರಥಮ ಸಂಕಲ್ಪ ಕಾರ್ಯಕ್ರಮದಲ್ಲಿ ಚಿತ್ರದ ಟ್ರೈಲರ್ ಕೂಡ ಪ್ರದರ್ಶನ ಆಗಿದೆ.
ಈ ಒಂದು ಟ್ರೈಲರ್ ಅಲ್ಲಿ ಯಶ್ ಅಬ್ಬರಿಸಿದ್ದಾರೆ. ರಾಮನ ಪಾತ್ರದಲ್ಲಿ ರಣಬೀರ್ ಕಪೂರ್ ಭಕ್ತಿಭಾವ ಮೂಡಿಸಿದ್ದಾರೆ. ಸಾಯಿ ಪಲ್ಲವಿ ಇಲ್ಲಿ ಕಣ್ಣಲ್ಲಿಯೇ ಎಲ್ಲ ಭಾವಗಳನ್ನ ವ್ಯಕ್ತಪಡಿಸಿದ್ದಾರೆ.
ರಾಮಾಯಣ ಚಿತ್ರದ ಟ್ರೈಲರ್ ಭಾರೀ ಭರವಸೆ ಮೂಡಿಸಿದೆ. ಇದಕ್ಕೆ ಬಳಕೆ ಮಾಡಿರೋ ತಾಂತ್ರಿಕತೆ ಮುಂದಿನ ದಿನಗಳಲ್ಲಿ ಭಾರತೀಯ ಚಿತ್ರರಂಗಕ್ಕೆ ಒಂದು ಸವಾಲಾಗುತ್ತದೆ ಅನ್ನುವ ಅಭಿಪ್ರಾಯಗಳು ಇವೆ.
ಈ ಚಿತ್ರದಲ್ಲಿ ಯಶ್ ರಾವಣನಾಗಿಯೇ ಅಬ್ಬರಿಸಿದ್ದಾರೆ. ಇಡೀ ಚಿತ್ರ ಟ್ರೈಲರ್ ರೀತಿನೇ ಮೂಡಿ ಬಂದರೆ, ಟಾಪ್ 10 ಗ್ಲೋಬಲ್ ಸಿನಿಮಾಗಳಲ್ಲಿ ರಾಮಾಯಣ ಇರುತ್ತದೆ ಅನ್ನುವ ಓಪಿನಿಯನ್ ಅನ್ನು ಈ ಟ್ರೈಲರ್ ಕೊಟ್ಟಿದೆ ನೋಡಿ.
ಚಿತ್ರಕ್ಕೆ ಬಳಕೆ ಮಾಡರೋ ಬಿಜಿಎಂ ಕೂಡ ಅದ್ಭುತವಾಗಿಯೇ ಇದೆ. ಟ್ರೈಲರ್ ಬಗೆಗಿನ ಈ ಎಲ್ಲ ಅಭಿಪ್ರಾಯವನ್ನ ಹಿರಿಯ ಸಿನಿಮಾ ಪತ್ರಕರ್ತ ಆರ್. ಕೇಶವಮೂರ್ತಿ ತಮ್ಮ ಫೇಸ್ ಬುಕ್ ಪೇಜ್ ಅಲ್ಲಿ ಬರೆದುಕೊಂಡಿದ್ದಾರೆ ಅಂತ ಹೇಳಬಹುದು.













