Last Updated:
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ 25 ಓವರ್ಗಳಲ್ಲಿ 194 ರನ್ಗಳಿಸಿ ಸರ್ವಪತನಗೊಂಡಿತ್ತು. 195 ರನ್ಗಳ ಗುರಿಯನ್ನ ಬೆನ್ನಟ್ಟಿದ ಭಾರತ ತಂಡ 22.5 ಓವರ್ಗಳಲ್ಲಿ ಗುರಿ ತಲುಪಿತು.
ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ODI ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ 7 ವಿಕೆಟ್ಗಳ ಸುಲಭ ಜಯ ಸಾಧಿಸಿದೆ. ಧರ್ಮಶಾಲಾದಲ್ಲಿ ನಡೆದ ಪಂದ್ಯ ಮಳೆಯಿಂದಾಗಿ ನಾಲ್ಕು ಗಂಟೆಗಳ ಕಾಲ ವಿಳಂಬವಾಯಿತು. ನಂತರ ಪಂದ್ಯವನ್ನು ಪ್ರತಿ ತಂಡಕ್ಕೆ 25 ಓವರ್ಗಳಿಗೆ ಇಳಿಸಿ ನಡೆಸಲಾಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ 25 ಓವರ್ಗಳಲ್ಲಿ 194 ರನ್ಗಳಿಸಿ ಸರ್ವಪತನಗೊಂಡಿತ್ತು. 195 ರನ್ಗಳ ಗುರಿಯನ್ನ ಬೆನ್ನಟ್ಟಿದ ಭಾರತ ತಂಡ 22.5 ಓವರ್ಗಳಲ್ಲಿ ಗುರಿ ತಲುಪಿತು. ನಾಯಕ ಗಿಲ್ ಅಜೇಯ 84 ಹಾಗೂ ಕನ್ನಡಿಗ ಕೆಎಲ್ ರಾಹುಲ್ ಅಜೇಯ 39 ರನ್ಗಳಿಸಿದರೆ, ಇಶಾನ್ ಕಿಶನ್ 34 ರನ್ಗಳಿಸಿ ಗೆಲುವಿನ ರೂವಾರಿಗಳಾದರು.
195 ರನ್ಗಳ ಗುರಿ ಬೆನ್ನಟ್ಟಿದ ಭಾರತ ತಂಡ ಸ್ಫೋಟಕ ಆರಂಭ ಪಡೆದುಕೊಂಡಿತು. 5.4 ಓವರ್ಗಳಲ್ಲಿ 46 ರನ್ಗಳಿಸಿ ರೋಹಿತ್ ಶರ್ಮಾ ರೂಪದಲ್ಲಿ ಮೊದಲ ವಿಕೆಟ್ ಕಳೆದುಕೊಂಡಿತು. 16 ಎಸೆತಗಳಲ್ಲಿ 16 ರನ್ಗಳಿಸಿದ ರೋಹಿತ್ ಶರ್ಮಾ ರನ್ಔಟ್ ಆದರು. ನಂತರ ಬಂದ ಇಶಾನ್ ಕಿಶನ್ 2ನೇ ವಿಕೆಟ್ ಜೊತೆಯಾಟದಲ್ಲಿ ಗಿಲ್ ಜೊತೆಗೂಡಿ 70 ರನ್ಗಳಿಸಿ ಚೇತರಿಕೆ ನೀಡಿದರು. ಇಶಾನ್ ಕಿಶನ್ ಕೇವಲ 22 ಎಸೆತಗಳಲ್ಲಿ 3 ಬೌಂಡರಿ, 1 ಸಿಕ್ಸರ್ ಸಹಿತ 34 ರನ್ಗಳಿಸಿ ರಶೀದ್ ಖಾನ್ ಬೌಲಿಂಗ್ನಲ್ಲಿ ಬೌಲ್ಡ್ ಆದರು. ನಂತರ ಬಂದ ಉಪನಾಯಕ ಶ್ರೇಯಸ್ ಅಯ್ಯರ್ 15 ಎಸೆತಗಳಲ್ಲಿ 12 ರನ್ಗಳಿಸಿ ಔಟ್ ಆದರು.
5ನೇ ಕ್ರಮಾಂಕದಲ್ಲಿ ಬಂದ ಕೆಎಲ್ ರಾಹುಲ್ ನಾಯಕ ಗಿಲ್ ಜೊತೆಗೂಡಿ 4ನೇ ವಿಕೆಟ್ಗೆ ಮುರಿಯದ 53 ರನ್ಗಳ ಜೊತೆಯಾಟ ಆಡಿದರು. ಅಬ್ಬರಿಸಿದ ರಾಹುಲ್ ಕೇವಲ19 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್ಗಳ ಸಹಿತ ಅಜೇಯ 39 ರನ್ಗಳಿಸಿದರು. ಶುಭ್ಮನ್ ಗಿಲ್ 66 ಎಸೆತಗಳಲ್ಲಿ 11 ಬೌಂಡರಿ, 2 ಸಿಕ್ಸರ್ ಸಹಿತ ಅಜೇಯ 84 ರನ್ಗಳಿಸಿ ಗೆಲುವಿನ ರೂವಾರಿಯಾದರು. ಅಫ್ಘಾನಿಸ್ತಾನ ಪರ ರಶೀದ್ ಖಾನ್ ಹಾಗೂ ಜಿಯಾವುರ್ ರೆಹ್ಮಾನ್ ಶರೀಫಿ ತಲಾ 1 ವಿಕೆಟ್ ಪಡೆದರು.
ಟಾಸ್ ಸೋತು ಇನ್ನಿಂಗ್ಸ್ ಆರಂಭಿಸಿದ ಅಫ್ಘಾನಿಸ್ತಾನದ ಆರಂಭ ಕಳಪೆಯಾಗಿತ್ತು. ಐದು ಓವರ್ ಗಳ ಪವರ್ ಪ್ಲೇನಲ್ಲಿ ಅಫ್ಘಾನಿಸ್ತಾನ 27 ರನ್ ಸೇರಿಸಿ ಮೂರು ವಿಕೆಟ್ ಕಳೆದುಕೊಂಡಿತು. ಎರಡನೇ ಓವರ್ ನಲ್ಲಿ ಗುರ್ನೂರ್ ಇಬ್ರಾಹಿಂ ಜದ್ರಾನ್ (1) ವಿಕೆಟ್ ಪಡೆದರೆ. ಮೂರನೇ ಓವರ್ನಲ್ಲಿ ಅರ್ಷದೀಪ್ ಸಿಂಗ್ ಸೆದಿಕುಲ್ಲಾ ಅಟಲ್ (0) ಮತ್ತು ಐದನೇ ಓವರ್ ನಲ್ಲಿ ರಹಮತ್ ಶಾ (4) ವಿಕೆಟ್ ಪಡೆದು ಆಘಾತನ ನೀಡಿದರು.
ಆದರೆ ನಂತರ ರಹಮಾನುಲ್ಲಾ ಗುರ್ಬಾಜ್ ತಂಡವನ್ನ ಏಕಾಂಗಿಯಾಗಿ ಮುನ್ನಡೆಸಿಕೊಂಡು ಹೋದರು. ಭಾರತದ ಅನಾನುಭವಿ ಬೌಲಿಂಗ್ ದಾಳಿಯನ್ನ ಧ್ವಂಸ ಮಾಡಿದ ಗುರ್ಬಾಜ್ ಕೇವಲ 48 ಎಸೆತಗಳಲ್ಲಿ ಶತಕ ಸಿಡಿಸಿದರು. ಒಟ್ಟಾರೆ 51 ಎಸೆತಗಳಲ್ಲಿ 8 ಬೌಂಡರಿ ಹಾಗೂ 8 ಸಿಕ್ಸರ್ ನೆರವಿನಿಂದ 102 ರನ್ಗಳಿಸಿದರು. ಗುರ್ಬಾಜ್ ನಾಲ್ಕನೇ ವಿಕೆಟ್ಗೆ ಹಶ್ಮತುಲ್ಲಾ ಶಾಹಿದಿ ಜೊತೆ 116 ರನ್ ಗಳ ಜೊತೆಯಾಟ ನೀಡಿದರು. 16ನೇ ಓವರ್ ನಲ್ಲಿ ನಿತೀಶ್ ಕುಮಾರ್ ರೆಡ್ಡಿ ಗುರ್ಬಾಜ್ ಬೌಲ್ಡ್ ಆದರು.
ಭಾರತದ ಪರ ಇಂದೇ ಮೊದಲ ಏಕದಿನ ಪಂದ್ಯವನ್ನಾಡಿದ ಗುರ್ನೂರ್ ಬ್ರಾರ್ 27ಕ್ಕೆ3 ಹಾಗೂ ಹರ್ಷ್ ದುಬೆ 47ಕ್ಕೆ3 ಮಿಂಚಿನ ಪ್ರದರ್ಶನ ನೀಡಿದರು. ಅರ್ಷದೀಪ್ ಸಿಂಗ್ 27ಕ್ಕೆ2 ಹಾಗೂ ನಿತೀಶ್ ಕುಮಾರ್ ರೆಡ್ಡಿ 31ಕ್ಕೆ2 ನಿರ್ಣಾಯಕ ವಿಕೆಟ್ ಪಡೆದು ಅಫ್ಘಾನ್ ತಂಡ 200ರ ಗಡಿ ದಾಟದಂತೆ ತಡೆದರು.
ಭಾರತ ಈ ಗೆಲುವಿನ ಮೂಲಕ 3 ಪಂದ್ಯಗಳ ಸರಣಿಯಲ್ಲಿ 1-0 ಯಲ್ಲಿ ಮುನ್ನಡೆ ಪಡೆದುಕೊಂಡಿದೆ. ಎರಡನೇ ಪಂದ್ಯ ಲಖನೌನ ಏಕಾನ ಮೈದಾನದಲ್ಲಿ ಬುಧವಾರ ನಡೆಯಲಿದೆ.
Jun 13, 2026 10:17 PM IST













