ನಾನು ಒಂದು ಕತೆ ಮಾಡಿದ್ದೇನೆ. ಅದನ್ನ ನಿನಗೆ ಹೇಳ್ಬೇಕು. ಫುಲ್ ಸ್ಕ್ರಿಪ್ಟ್ ರೆಡಿ ಇದೆ. ಇದನ್ನ ನಿನಗೆ ಹೇಳ್ತೇಕು ಅಂತಲೇ ಹೇಳ್ತಾರೆ. ಆಗ ಆಮಿರ್ ಖಾನ್ ಅವರಗೆ ಡೌಟ್ ಬರುತ್ತದೆ.
ಆಮೀರ್ ಖಾನ್ ಹೇಳೋದೇನು
(ಚಿತ್ರ ಕೃಪೆ: ಸ್ಪಾಟಿಫೈ ಇಂಡಿಯಾ ವಿಡಿಯೋ)
ಆ ಕ್ರಿಕೆಟ್ ಕತೇನಾ ಅಂತಲೇ ಕೇಳ್ತಾರೆ. ಆಗ ಅಶುತೋಷ್ ಏನು ಹೇಳೋದಿಲ್ಲ. ಕತೆ ಹೇಳೋಕೆ ಬರ್ತೀದ್ದೀನಿ ಅಂತ ಮನೆಗೆ ಹೋಗ್ತಾರೆ. ಆಗ ಅಸಲಿ ವಿಷಯವನ್ನ ಅಶುತೋಷ್ ಹೇಳ್ತಾರೆ.
ಆಮೀರ್ ಖಾನ್ ಈ ಒಂದು ಪ್ರಶ್ನೆ ಕೇಳುತ್ತಾರೆ. ಮೂರು ತಿಂಗಳು ಈ ಒಂದು ಐಡಿಯಾ ಮೇಲೆ ಕೆಲಸ ಮಾಡಿದಿಯಾ? ಅಂತಲೆ ಕೇಳ್ತಾರೆ. ಕೊನೆಗೆ ಅಶುತೋಷ್ ಒತ್ತಾಯಕ್ಕೆ ಕತೆ ಕೇಳ್ತಾರೆ.
ಲಗಾನ್ ಬಂದು 25 ಆಗುತ್ತದೆ. ಜೂನ್-15,2001 ರಂದು ಈ ಚಿತ್ರ ರಿಲೀಸ್ ಆಗಿತ್ತು. ಈ ಲೆಕ್ಕದಂತೆ ಈ ಸಿನಿಮಾ 2026 ಜೂನ್-15 ಕ್ಕೆ 25 ವರ್ಷ ಕಂಪ್ಲೀಟ್ ಮಾಡುತ್ತದೆ.
ಹಾಗೆ ಈ ಚಿತ್ರದ ಮೇಕಿಂಗ್ ಹಿಂದೆ ಇನ್ನು ಸಾಕಷ್ಟು ಇಂಟ್ರಸ್ಟಿಂಗ್ ವಿಚಾರಗಳು ಇವೆ. ಅದರಲ್ಲಿ ಎ.ಆರ್.ರೆಹಮಾನ್ ಸಂಗೀತವೂ ಒಂದಾಗಿದೆ. ಇವರ ಸಂಗೀತದ ಮೋಡಿನೇ ಬೇರೆ ಇದೆ.
25 ವರ್ಷ ಕಂಪ್ಲಿಟ್
(ಚಿತ್ರ ಕೃಪೆ: ಸ್ಪಾಟಿಫೈ ಇಂಡಿಯಾ ವಿಡಿಯೋ)
ಎ.ಆರ್.ರೆಹಮಾನ್ ಸಂಗೀತದ ಬಗ್ಗೆ ಆಮೀರ್ ಖಾನ್ ಮಾತನಾಡಿದ್ದಾರೆ. ಇವರ ಮ್ಯೂಸಿಕ್ ಸಂಯೋಜನೆಯ ಸ್ಟೈಲ್ ಬೇರೆ ಇದೆ. ಅದೇನು ಅನ್ನೋದನ್ನ ಆಮೀರ್ ಖಾನ್ ಹೇಳಿಕೊಂಡಿದ್ದಾರೆ.
ಎ.ಆರ್.ರೆಹಮಾನ್ ತಮ್ಮ ಕಂಪೋಸಿಷನ್ ರೂಮ್ಗೆ ಹೋದ ಕೂಡಲೇ ಒಂದು ಕ್ಯಾಂಡಲ್ ಹಚ್ಚುತ್ತಾರೆ. ಆ ಮೇಲೆ ಕೀ ಬೋರ್ಡ್ ಮೇಲೆ ಕುಳಿತುಕೊಳ್ಳುತ್ತಾರೆ. ತಮ್ಮ ಮನದಲ್ಲಿ ಏನೆಲ್ಲ ಟ್ಯೂನ್ ಬರುತ್ತದೆಯೋ ಅದನ್ನೆಲ್ಲ ನುಡಿಸುತ್ತಾರೆ.
ಈ ಚಿತ್ರಕ್ಕೆ ಲಿರಿಕ್ಸ್ ಬರೆದ ಜಾವೇದ್ ಅಖ್ತರ್ ಅವರು ತಮ್ಮ ವಿಶೇಷ ಅನುಭವ ಹಂಚಿಕೊಂಡಿದ್ದಾರೆ. ಎ.ಆರ್.ರೆಹಮಾನ್ ಸಂಗೀತಕ್ಕೆ ಲಿರಿಕ್ಸ್ ಬರೆಯೋದು ಅಷ್ಟು ಸುಲಭವೇನೂ ಅಲ್ಲ. ಪ್ರತಿ ಲೈನ್ಗೂ ಬೇರೆ ಮೀಟರ್ ಇರುತ್ತದೆ ಅಂತಲೂ ಹೇಳಿಕೊಂಡಿದ್ದಾರೆ.
ಲಗಾನ್ ಚಿತ್ರ ಬಂದು 25 ವರ್ಷ ಆಗಿದೆ. ಈ ಹಿನ್ನೆಲೆಯಲ್ಲಿ Spotify India ಸಂದರ್ಶನದಲ್ಲಿಯೇ ಜಾವೇದ್ ಅಖ್ತರ್, ಅಶುತೋಷ್ ಗೋವಾರಿಕರ್, ಆಮೀರ್ ಖಾನ್,ಎ.ಆರ್.ರೆಹಮಾನ್ ತಮ್ಮ ಈ ಲಗಾನ್ ಬಗ್ಗೆ ಸಾಕಷ್ಟು ಇಂಟ್ರಸ್ಟಿಂಗ್ ವಿಷಯ ಹಂಚಿಕೊಂಡಿದ್ದಾರೆ ಅಂತ ಹೇಳಬಹುದು.













