Last Updated:
Headscarf Row: ‘ಹಿಜಾಬ್ ಧರಿಸುವುದು ತನ್ನ ಧರ್ಮದ ಅತ್ಯಗತ್ಯ ಧಾರ್ಮಿಕ ಆಚರಣೆಯಾಗಿದ್ದು, ಅದನ್ನು ತನ್ನ ಉಡುಪಿನ ಭಾಗವಾಗಿ ಧರಿಸುವುದನ್ನು ತಡೆಯುವುದು ಸಂವಿಧಾನದ 14 ಮತ್ತು 19(1)(ಎ) ವಿಧಿಗಳ ಅಡಿಯಲ್ಲಿ ಖಾತರಿಪಡಿಸಲಾದ ತನ್ನ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ’ ಎಂದು ವಿದ್ಯಾರ್ಥಿನಿ ವಾದಿಸಿದ್ದಾರೆ.
ಪ್ರಯಾಗ್ರಾಜ್: ಶಾಲೆಯಲ್ಲಿ ಶಿರಸ್ತ್ರಾಣ ಅಥವಾ ಹಿಜಾಬ್ ಧರಿಸಲು (Hijab not essential to Islam) ಅವಕಾಶ ನೀಡುವಂತೆ ಶಾಲಾ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಸಲಾದ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ (Allahabad High court) ವಜಾಗೊಳಿಸಿದೆ.














