Last Updated:
ಟಾಕ್ಸಿಕ್ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ನಿರ್ದೇಶಕ ವಿಘ್ನೇಶ್ ಶಿವನ್ ತಮ್ಮದೇ ಸಿನಿಮಾದ ಸೋಲನ್ನು ತಮಾಷೆಯಾಗಿ ಪ್ರಸ್ತಾಪಿಸಿ ಎಲ್ಲರ ಗಮನ ಸೆಳೆದಿದ್ದಾರೆ.
ಟಾಕ್ಸಿಕ್ (Toxic) ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ನಿರ್ದೇಶಕ ವಿಘ್ನೇಶ್ ಶಿವನ್ (Vignesh Shivan) ತಮ್ಮದೇ ಸಿನಿಮಾದ ಸೋಲನ್ನು ತಮಾಷೆಯಾಗಿ ಪ್ರಸ್ತಾಪಿಸಿ ಎಲ್ಲರ ಗಮನ ಸೆಳೆದಿದ್ದಾರೆ. ನಟಿ ಕಿಯಾರಾ ಅಡ್ವಾಣಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಹಿಂದೆ ತಾವು ಹೇಳಿದ್ದ ಕಥೆಯನ್ನು ಕಿಯಾರಾ ಒಪ್ಪಿಕೊಳ್ಳದೇ ಇದ್ದಿದ್ದೇ ಅವರಿಗೆ ಒಳ್ಳೆಯದಾಯಿತು ಎಂದು ಹಾಸ್ಯ ಮಾಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ.














