GT vs CSK,IPL 2026: ಸಿಎಸ್​ಕೆ ಬೌಲಿಂಗ್ ಪಡೆಯನ್ನ ಧೂಳೀಪಟ ಮಾಡಿದ ಜಿಟಿ ತ್ರಿಮೂರ್ತಿಗಳು! ಚೆನ್ನೈಗೆ 230 ರನ್​ಗಳ ಬೃಹತ್ ಗುರಿ | ಕ್ರೀಡಾ ಸುದ್ದಿ | ACTPnews

GT vs CSK,IPL 2026: ಸಿಎಸ್​ಕೆ ಬೌಲಿಂಗ್ ಪಡೆಯನ್ನ ಧೂಳೀಪಟ ಮಾಡಿದ ಜಿಟಿ ತ್ರಿಮೂರ್ತಿಗಳು! ಚೆನ್ನೈಗೆ 230 ರನ್​ಗಳ ಬೃಹತ್ ಗುರಿ | ಕ್ರೀಡಾ ಸುದ್ದಿ


ಶತಕದ ಆರಂಭ

ಟಾಸ್​ ಸೋತು ಬ್ಯಾಟಿಂಗ್ ಮಾಡಿದ ಗುಜರಾತ್ ಭರ್ಜರಿ ಆರಂಭ ಪಡೆದುಕೊಂಡಿತು. ಮೊದಲ ವಿಕೆಟ್ ಜೊತೆಯಾಟದಲ್ಲಿ 12.2 ಓವರ್‌ಗಳಲ್ಲಿ 125 ರನ್‌ಗಳ ಜೊತೆಯಾಟ ನೀಡಿದರು. ಆರಂಭದಿಂದ ಅಬ್ಬರಿಸಿದ ಗಿಲ್ 37 ಎಸೆತಗಳಲ್ಲಿ 7 ಬೌಂಡರಿ, 3 ಸಿಕ್ಸರ್‌ಗಳ ಸಹಿತ 64 ರನ್‌ಗಳಿಸಿ ಸ್ಪೆನ್ಸರ್ ಜಾನ್ಸನ್​ ಬೌಲಿಂಗ್​ನಲ್ಲಿ ದುಬೆಗೆ ಕ್ಯಾಚ್ ನೀಡಿ ಔಟ್ ಆದರು.

ಅಬ್ಬರಿಸಿದ ಬಟ್ಲರ್

ನಂತರ ಬಂದ ಜೋಸ್ ಬಟ್ಲರ್​ 2ನೇ ವಿಕೆಟ್​​ಗೆ ಸಾಯಿ ಸುದರ್ಶನ್ ಜೊತೆಗೂಡಿ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದರು. ಈ ಜೋಡಿ ಕೇವಲ 37 ಎಸೆತಗಳಲ್ಲಿ 82 ರನ್‌ಗಳಿಸಿತು. ಆರಂಭದಲ್ಲಿ ಪರದಾಡಿದ ಸುದರ್ಶನ್​ ನಂತರ ರಿದಮ್ ಕಂಡುಕೊಂಡು ಸ್ಫೋಟಕ ಬ್ಯಾಟಿಂಗ್ ಮಾಡಿದರು. ಒಟ್ಟಾರೆ 53 ಎಸೆತಗಳನ್ನಾಡಿದ ಅವರು 7 ಬೌಂಡರಿ, 4 ಸಿಕ್ಸರ್‌ಗಳ ಸಹಿತ 84 ರನ್‌ಗಳಿಸಿ ಕಾಂಬೋಜ್​​​ ಬೌಲಿಂಗ್​ನಲ್ಲಿ ಮ್ಯಾಥ್ಯೂ ಶಾರ್ಟ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.

ಜೋಸ್ ಬಟ್ಲರ್​ 27 ಎಸೆತಗಳಲ್ಲಿ 5 ಬೌಂಡರಿ, 4 ಸಿಕ್ಸರ್‌ಗಳ ಸಹಿತ ಅಜೇಯ 57 ರನ್‌ಗಳಿಸಿ ಮಿಂಚಿದರು. ವಾಷಿಂಗ್ಟನ್ ಸುಂದರ್ 3 ಎಸೆತಗಳಲ್ಲಿ ಅಜೇಯ 7 ರನ್‌ಗಳಿಸಿದರು.

ಸಿಎಸ್​​​​​​​ಕೆ ಪರ ಮುಕೇಶ್ ಚೌಧರಿ, ಅನ್ಶುಲ್ ಕಾಂಬೋಜ್ ಹಾಗೂ ಸ್ಪೆನ್ಸರ್ ಜಾನ್ಸನ್​ ತಲಾ 1 ವಿಕೆಟ್ ಪಡೆದರು.

ಸಿಎಸ್​ಕೆಗೆ ಮಾಡು ಇಲ್ಲವೆ ಮಡಿ ಪಂದ್ಯ

ಪ್ಲೇಆಫ್​ ರೇಸ್​​​​ನಲ್ಲಿ ಉಳಿಯಬೇಕಾದರೆ ಸಿಎಸ್​ಕೆ ಈ ಪಂದ್ಯದಲ್ಲಿ ಶತಾಯಗತಾಯ ಗೆಲ್ಲಲೇಬೇಕಿದೆ. ಚೆನ್ನೈ ಸೂಪರ್ ಕಿಂಗ್ಸ್ ತಂಡವು ಸತತ ಎರಡು ಪಂದ್ಯಗಳನ್ನು ಸೋಲುವ ಮೂಲಕ ನೇರ ಪ್ಲೇಆಫ್​ಗೆ ಪ್ರವೇಶಿಸುವ ಅವಕಾಶವನ್ನು ಕಳೆದುಕೊಂಡಿದೆ. ಈ ಪಂದ್ಯದಲ್ಲಿ ಚೆನ್ನೈ ಗೆದ್ದರೂ, ಅದು ಇತರ ತಂಡಗಳ ಫಲಿತಾಂಶವನ್ನು ಅವಲಂಬಿಸಿರುತ್ತದೆ. ಇದು ಎರಡೂ ತಂಡಗಳಿಗೆ ಕೊನೆಯ ಲೀಗ್ ಪಂದ್ಯವಾಗಿದೆ. ಚೆನ್ನೈ 13 ಪಂದ್ಯಗಳನ್ನು ಆಡಿದ್ದು, 6 ಪಂದ್ಯಗಳಲ್ಲಿ ಗೆದ್ದಿದೆ ಮತ್ತು ಏಳು ಸೋತಿದೆ.

ಗುಜರಾತ್​​ಗೆ ಅಗ್ರಸ್ಥಾನಕ್ಕೇರುವ ಅವಕಾಶ

ಜಿಟಿ ಈಗಾಗಲೇ ಪ್ಲೇಆಫ್​​ಗೆ ಅರ್ಹತೆ ಪಡೆದಿದೆ. ತನ್ನ ಕೊನೆಯ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗೆಲ್ಲುವ ಮೂಲಕ ಅಗ್ರ ಎರಡರಲ್ಲಿ ಸ್ಥಾನ ಪಡೆಯುವತ್ತ ಅವರ ಕಣ್ಣುಗಳು ನೆಟ್ಟಿವೆ. ಶುಭ್​ಮನ್ ಗಿಲ್ ನೇತೃತ್ವದ ಗುಜರಾತ್ ತಂಡವು 13 ಪಂದ್ಯಗಳನ್ನು ಆಡಿದ್ದು, ಅದರಲ್ಲಿ 8 ಪಂದ್ಯಗಳನ್ನು ಗೆದ್ದಿದೆ. ಗುಜರಾತ್ ಪ್ರಸ್ತುತ 16 ಅಂಕಗಳನ್ನು ಹೊಂದಿದ್ದು, ಪಾಯಿಂಟ್ಸ್ ಟೇಬಲ್ ನಲ್ಲಿ ಎರಡನೇ ಸ್ಥಾನದಲ್ಲಿದೆ. ಈ ಪಂದ್ಯದಲ್ಲಿ ದೊಡ್ಡ ಅಂತರದಿಂದ ಗೆದ್ದರೆ, ಆರ್​ಸಿಬಿ ಹಿಂದಿಕ್ಕಿ ಅಗ್ರಸ್ಥಾನಕ್ಕೇರುವ ಅವಕಾಶವೂ ಇದೆ.

ಪ್ಲೇಯಿಂಗ್ ಇಲೆವೆನ್​​

ಚೆನ್ನೈ ಸೂಪರ್ ಕಿಂಗ್ಸ್ (ಪ್ಲೇಯಿಂಗ್ XI): ಸಂಜು ಸ್ಯಾಮ್ಸನ್(ವಿಕೀ), ರುತುರಾಜ್ ಗಾಯಕ್ವಾಡ್(ನಾಯಕ), ಉರ್ವಿಲ್ ಪಟೇಲ್, ಡೆವಾಲ್ಡ್ ಬ್ರೆವಿಸ್, ಶಿವಂ ದುಬೆ, ಮ್ಯಾಥ್ಯೂ ಶಾರ್ಟ್, ಅನ್ಶುಲ್ ಕಾಂಬೋಜ್, ನೂರ್ ಅಹ್ಮದ್, ಸ್ಪೆನ್ಸರ್ ಜಾನ್ಸನ್, ಮುಖೇಶ್ ಚೌಧರಿ, ಗುರ್ಜಪ್ನೀತ್ ಸಿಂಗ್

ಗುಜರಾತ್ ಟೈಟನ್ಸ್ (ಪ್ಲೇಯಿಂಗ್ XI): ಸಾಯಿ ಸುದರ್ಶನ್, ಶುಭಮನ್ ಗಿಲ್ (ನಾಯಕ), ಜೋಸ್ ಬಟ್ಲರ್ (ವಿಕೀ), ನಿಶಾಂತ್ ಸಿಂಧು, ವಾಷಿಂಗ್ಟನ್ ಸುಂದರ್, ಜೇಸನ್ ಹೋಲ್ಡರ್, ರಶೀದ್ ಖಾನ್, ರಾಹುಲ್ ತೆವಾಟಿಯಾ, ಕಗಿಸೊ ರಬಾಡ, ಅರ್ಷದ್ ಖಾನ್



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports