Drishyam 3: ಹಿಂದಿ ದೃಶ್ಯಂನ ಕ್ಲೈಮ್ಯಾಕ್ಸ್​ಗೆ ಭಾರೀ ಮೆಚ್ಚುಗೆ! 100ಕ್ಕೂ ಹೆಚ್ಚು ಕನ್​ಕ್ಲೂಷನ್ಸ್ ರೆಡಿ ಮಾಡಿದ್ರಂತೆ ’ Drishyam 3 hundreds of conclusion was written | | ACTPnews

ದೃಶ್ಯಂ 3 (ಚಿತ್ರ ಕೃಪೆ: ಸ್ಟಾರ್ ಸ್ಟುಡಿಯೋ ಇನ್​ಸ್ಟಾಗ್ರಾಮ್)


Last Updated:

Drishyam 3: ಹಿಂದಿ ದೃಶ್ಯಂ 3 ಸಿನಿಮಾದ ಕ್ಲೈಮ್ಯಾಕ್ಸ್​ಗೆ ಭಾರೀ ಮೆಚ್ಚುಗೆ! ಆದರೆ ಅದರ ಹಿಂದಿನ ಕೆಲಸ ಹೇಗಿತ್ತು ಗೊತ್ತಾ? 100ಕ್ಕೂ ಹೆಚ್ಚು ಡ್ರಾಫ್ಟ್ ಕನ್​ಕ್ಲೂಷನ್, ಫೈನಲ್ ಮಾಡಿದ್ದು ಹೇಗೆ?

ದೃಶ್ಯಂ 3 (ಚಿತ್ರ ಕೃಪೆ: ಸ್ಟಾರ್ ಸ್ಟುಡಿಯೋ ಇನ್​ಸ್ಟಾಗ್ರಾಮ್)
ದೃಶ್ಯಂ 3 (ಚಿತ್ರ ಕೃಪೆ: ಸ್ಟಾರ್ ಸ್ಟುಡಿಯೋ ಇನ್​ಸ್ಟಾಗ್ರಾಮ್)

ಮಾಲಿವುಡ್​ನ ಪ್ರಸಿದ್ಧ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ದೃಶ್ಯಂ 3  (Drishyam 3) ರಿಲೀಸ್ ಆಗಿ ಬಹಳಷ್ಟು ಸಮಯದ ನಂತರ ಹಿಂದಿಯಲ್ಲಿ ದೃಶ್ಯಂ 3 ಬಿಡುಗಡೆಯಾಗಿದೆ. ಹಿಂದಿಯಲ್ಲಿ ಅಜಯ್ ದೇವಗನ್, ಶ್ರಿಯಾ ಶರಣ್ (Shriya Saran) ನಟಿಸಿರುವ ದೃಶ್ಯಂ 3 ಸಿನಿಮಾ ಭರ್ಜರಿಯಾಗಿ ಸದ್ದು ಮಾಡುತ್ತಿದೆ. ಮಲಯಾಳಂನಲ್ಲಿ (Mollywood) ಅಷ್ಟಾಗಿ ಮೆಚ್ಚುಗೆ ಪಡೆಯದಿದ್ದರೂ ಈಗ ಹಿಂದಿ ಸಿನಿಮಾ ಅದರ ಕ್ಲೈಮ್ಯಾಕ್ಸ್ ವಿಚಾರವಾಗಿ ಸಾಕಷ್ಟು ಮೆಚ್ಚುಗೆ ಗಳಿಸುತ್ತಿದೆ.

ಅಜಯ್ ದೇವಗನ್ ಅವರು ತಮ್ಮ ಐಕಾನಿಕ್ ವಿಜಯ್ ಸಾಲ್ಗಾಂವ್ಕರ್ ಪಾತ್ರದಲ್ಲಿ ವಾಪಸ್ ಬಂದಿದ್ದು ಮತ್ತೊಮ್ಮೆ ಸಸ್ಪೆನ್ಸ್ ಪ್ರಿಯರಿಗೆ ಸಖತ್ ಎಂಟರ್​ಟೈನ್ಮೆಂಟ್ ಕೊಟ್ಟಿದ್ದಾರೆ. ಎರಡು ಯಶಸ್ವಿ ಸಿನಿಮಾಗಳ ನಂತರ ದೃಶ್ಯಂ 3 ಬಂದಿದೆ. ಇದು ಕೂಡಾ ಅದರಂತೆಯೇ ಸಸ್ಪೆನ್ಸ್​ಫುಲ್ ಕಥೆಯಾಗಿ ತೆರೆಯ ಮೇಲೆ ಬಂದಿದೆ.

ವಿಮರ್ಶಾತ್ಮಕವಾಗಿ ಹಾಗೂ ವಾಣಿಜ್ಯವಾಗಿ ಸಿನಿಮಾ ಸಕ್ಸಸ್ ಆಗುತ್ತಿದೆ. ಈ ಸಿನಿಮಾ ರಿಲೀಸ್ ಆಗಿ 3 ದಿನದಲ್ಲಿ 270 ಕೋಟಿ ಗಳಿಸಿದೆ. ದ್ಯಶಂ 3 ಯ ಕಥೆ ಹಾಗೂ ಕ್ಲೈಮ್ಯಾಕ್ಸ್​ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಸಿನಿಮಾದ ಸ್ಕ್ರೀನ್ ರೈಟರ್ ಆಮಿಲ್ ಕೀಯನ್ ಖಾನ್ ಕೊನೆಯ ಚಾಪ್ಟರ್ ಮೇಲೆ ಹೇಗೆ ಕೆಲಸ ಮಾಡಿದ್ದರು ಎನ್ನುವುದನ್ನು ರಿವೀಲ್ ಮಾಡಿದ್ದಾರೆ.

ಫ್ರೀ ಪ್ರೆಸ್ ಜರ್ನಲ್ ಜೊತೆ ಮಾತನಾಡಿದ ಅವರು, ನನ್ನಲ್ಲಿ ಫೋಲ್ಡರ್ ಒಳಗಡೆ ಫೋಲ್ಡರ್​ ಇವೆ. ಡ್ರಾಫ್ಟ್ ಇವೆ, ನಂಬರ್, ಡೇಟ್ಸ್ ಇವೆ. ಫೈನಲ್, ಫೈನಲ್ 2, ಫೈಣಲ್ ಫೈನಲ್, ಫೈನಲ್ ಪ್ಲೀಸ್ ಗಾಡ್ ಹೀಗೆಲ್ಲ ಸೇವ್ ಮಾಡಿರೋ ಫೈಲ್ಸ್ ಇವೆ. ನನಗೆ ನಿಜಕ್ಕೂ ಲೆಕ್ಕ ಇಲ್ಲ. ಆದರೆ ಕನಿಷ್ಠ 100 ಡ್ರಾಪ್ಟ್ಸ್ ಬೇರೆ ಬೇರೆ ಫಾರ್ಮ್​ನಲ್ಲಿವೆ ಎಂದಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed