Ravi Mohan: ನನಗೆ ಬ್ಯಾಂಕ್ ಅಕೌಂಟ್ ಕೂಡಾ ಇಲ್ಲ ಎಂದ ರವಿ ಮೋಹನ್ ಹೇಳಿಕೆ ಬೆನ್ನಲ್ಲೇ ವೈರಲ್ ಆಗ್ತಿದೆ ಸ್ಟಾರ್ ನಟನ ಕಮೆಂಟ್ಸ್, ಜನ ಶಾಕ್ | Vikram Saying Ravi mohan | | ACTPnews

ರವಿ ಮೋಹನ್


Last Updated:

Ravi Mohan: ನನ್ನಲ್ಲಿ ದುಡ್ಡಿಲ್ಲ, ನನ್ನ ಬಳಿ ಅಕೌಂಟ್ ಕೂಡಾ ಇಲ್ಲ ಎಂದು ರವಿ ಮೋಹನ್ ಹೇಳಿದ್ದು ನಿಜವಾ? ನಟ ವಿಕ್ರಮ್ ಅವರ ಹಳೆಯ ವಿಡಿಯೋ ಈಗ ವೈರಲ್ ಆಗ್ತಿರೋದ್ಯಾಕೆ?

ರವಿ ಮೋಹನ್
ರವಿ ಮೋಹನ್

ಇತ್ತೀಚೆಗೆ ಪೊನ್ನಿಯಿನ್ ಸೆಲ್ವನ್ ನಟ ರವಿ ಮೋಹನ್  (Ravi Mohan) ಅವರು ಚೆನ್ನೈನಲ್ಲಿ (Chennai) ನಡೆಸಿದ ಸುದ್ದಿಗೋಷ್ಠಿ ಭಾರೀ ವೈರಲ್ ಆಯಿತು. ನಟ ತಮ್ಮ ವೈಯಕ್ತಿಕ ಜೀವನದ ಸಮಸ್ಯೆ, ಸವಾಲುಗಳ ಬಗ್ಗೆ ಮಾತನಾಡಿದರು. ಅವರ ಸುದ್ದಿಗೋಷ್ಠಿಯ ವಿಡಿಯೋ ತುಣುಕುಗಳು ವೈರಲ್ ಆದವು.

ತನ್ನ ಮಕ್ಕಳ 50 ಲಕ್ಷ ಸ್ಕೂಲ್ ಫೀಸ್ ನಾನೇ ಕಟ್ಟುತ್ತೇನೆ, ಆದರೆ ಅವರನ್ನು ನೋಡೋಕೂ ಬಿಡೋದಿಲ್ಲ. ನನಗೆ ಅಂತ ಒಂದು ಬ್ಯಾಂಕ್ ಅಕೌಂಟ್ ಕೂಡಾ ಇಲ್ಲ. ನಾನು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದೇನೆ ಎಂದು ಜಯಂ ಅವರಿ ಅವರು ಕಣ್ಣೀರಿಟ್ಟರು.

ಆರ್ಥಿಕವಾಗಿ ತನ್ನ ಬಳಿ ಏನೂ ಇಲ್ಲ. ಸ್ವಲ್ಪ ದುಡ್ಡು ತೆಗೆದುಕೊಂಡರೂ ಯಾಕೆ? ಏನು ಎಂದು ಪ್ರಶ್ನೆ ಮಾಡುತ್ತಿದ್ದರು ಎಂದು ರವಿ ಮೋಹನ್ ಹೇಳಿದ್ದಾರೆ. ಅವರ ವಿಡಿಯೋಗಳು ವೈರಲ್ ಆದವು.

ಅದರ ಬೆನ್ನಲ್ಲೇ ಈಗ ಹಳೆಯ ವಿಡಿಯೋ ಒಂದು ವೈರಲ್ ಆಗಿದೆ. ಬಿಹೈಂಡ್​ ದಿ ವುಡ್ಸ್​ ಅವಾರ್ಡ್ ಫಂಕ್ಷನ್ ಒಂದರಲ್ಲಿ ವಿಕ್ರಮ್ ಅವರು ರವಿ ಮೋಹನ್ ಬಗ್ಗೆ ಮತನಾಡುವ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇಲ್ಲಿ ವಿಕ್ರಮ್ ನನ್ನಲ್ಲಿ ಪರ್ಸ್ ಇರಲ್ಲ, ದುಡ್ಡಿರಲ್ಲ, ಅವನೂ ಕೂಡಾ ಹಾಗೆ, ಅವನು ಹೆಂಡತಿಯಲ್ಲಿ ದುಡ್ಡು ಕೇಳಿ ಕೊಡುತ್ತಾನೆ ಎಂದಿದ್ದು ವೈರಲ್ ಆಗಿದೆ. ಈ ಮೂಲಕ ರವಿ ಮೋಹನ್ ಮಾತನಾಡಿದ್ದು ನಿಜವೇ ಹಾಗಿದ್ದರೆ ಅಂತ ಚರ್ಚೆ ಮಾಡುತ್ತಿದ್ದಾರೆ.

ಶೋ ಮುಗಿಸಿ ಎಲ್ಲಾದರೂ ಹೋಗುತ್ತೀವಾ? ನಾವು ಮೂರು ಜನ ಹೋಗುತ್ತೇವೆ, ರವಿ ಅದಕ್ಕೆ ಬಿಲ್ ಕಟ್ಟುತ್ತಾರೆ. ಅವರ ಅಪ್ಪ ಹತ್ತಿರದಲ್ಲಿದ್ದಾರೆ. ಹಾಗಾಗಿ ಬೇಡ ಎನ್ನಬಹುದು. ಇಲ್ಲವೆಂದರೆ ಅವನೇ ನಾರ್ಮಲ್ ಆಗಿ ಖರ್ಚು ಮಾಡುತ್ತಾನೆ. ನಾರ್ಮಲ್ ಆಗಿ ನನ್ನ ಬಳಿ ಯಾವಾಗಲೂ ಪರ್ಸ್ ಇರುವುದಿಲ್ಲ. ಯಾವಾಗಾದರೂ ಪಾರ್ಟಿಗೆ ಹೋದಾಗ ಡ್ರಿಂಕ್ಸ್ ತಗೊಂಡಾಗ, ಬೇರೆ ಊರಲ್ಲಿದ್ದಾಗ 1000 ಕೊಡಿ ಅಂದರೆ ನಾನು ರವಿಯಲ್ಲಿ ಮಚ್ಚಾ ದುಡ್ಡಿದೆಯಾ, ನನ್ನಲ್ಲಿ ಇಲ್ಲ ಎಂದು ಕೇಳುತ್ತೇನೆ. ನನ್ನಲ್ಲಿ ಇಲ್ಲಣ್ಣ ಎಂದು ಅವನು ಹೇಳುತ್ತಾನೆ. ಅವನಲ್ಲೂ ಅದೇ ಕಥೆ. ಅವನು ಮತ್ತೆ ಹೆಂಡತಿಯಲ್ಲಿ ಹೋಗಿ ಕೇಳಿ ಕೊಡುತ್ತಾನೆ. ಸೋ ಹ್ಯಾಪಿ. ನೀವು ನಂಗೆ ಅವಾರ್ಡ್ ಕೊಡುವ ಹಾಗೆಯೇ ಅವರು ಕೊಡೋ 500 ರೂಪಾಯಿ ಇದೆಯಲ್ಲಾ.. ನಾವೆಲ್ಲಾ ಒಂದೇ ರೀತಿಯವರು ಎಂದಿದ್ದಾರೆ.

ನಟ ರವಿ ಮೋಹನ್ ವಿಕ್ರಂ ಬಗ್ಗೆ ಮಾತನಾಡೋಕೆ ಮೈಕ್ ತೆಗೆದುಕೊಳ್ಳುತ್ತಾರೆ. ಆಗ ವಿಕ್ರಂ ಮಧ್ಯೆ ಮಾತನಾಡಿ, ನಾನು ಆಗಾಗ ನಿನ್ನನ್ನು ಬೈದಿದ್ದನ್ನು ಬಿಟ್ಟು ಸ್ವಲ್ಪ ಒಳ್ಳೆಯದನ್ನು ಹೇಳು ಎಂದು ವಿಕ್ರಮ್ ಜಯಂ ರವಿಗೆ ರೇಗಿಸುತ್ತಾರೆ.

ಜನರು ಜೋರಾಗಿ ಚಪ್ಪಾಳೆ ತಟ್ಟುವಾಗ ನಾನೇನು ಮಾತನಾಡುವುದು? ಅವರೇ ಎಲ್ಲವನ್ನೂ ಮಾತನಾಡಿದರು. ನನಗೆ ಅಷ್ಟಾಗಿ ಏನು ಮಾತನಾಡೋಕೆ ತಿಳಿಯಲ್ಲ ಎಂದು ರವಿ ಮೋಹನ್ ಹೇಳಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ವಿಕ್ರಮ್ ಅವರು, ಅಪ್ಪ ಪಕ್ಕದಲ್ಲಿದ್ದಾರೆ ಅದಕ್ಕೆ ಅಲ್ವಾ ಎಂದು ಕೇಳಿದ್ದಾರೆ. ಇದಕ್ಕೆ ರವಿ ಮೋಹನ್ ಜೋರಾಗಿ ನಕ್ಕಿದ್ದಾರೆ.

ಎಲ್ಲರೂ ಇದು ತುಂಬಾ ಕಷ್ಟದ ಪಾತ್ರ ಹೇಗೆ ಮಾಡಿದಿರಿ ಎಂದು ಕೇಳಿದಾಗ, ಇದು ಕಷ್ಟವೇ ಇಲ್ಲ, ಇದಕ್ಕಾಗಿಯೇ ನಾನು ಬಂದಿದ್ದೇನೆ ಎಂದು ವಿಕ್ರಮ್ ಉತ್ತರಿಸಿದರು. ಮೊದಲೇ ಮರ್ಯಾದೆ ಇತ್ತು, ಆ ಘಟನೆಯಿಂದ ಇದು ಹೆಚ್ಚಾಯಿತು ಎಂದಿದ್ದಾರೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports