Last Updated:
ಭಾರತದ ಸುಪ್ರೀಂ ಕೋರ್ಟ್ ನಲ್ಲಿ 250 ಜೂನಿಯರ್ ಕೋರ್ಟ್ ಅಸಿಸ್ಟೆಂಟ್ ಹುದ್ದೆಗಳ ಭರ್ತಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಪದವೀಧರರು ಅರ್ಜಿ ಸಲ್ಲಿಸಬಹುದು.
ನವದೆಹಲಿ: ಭಾರತದ ಸರ್ವೋಚ್ಚ ನ್ಯಾಯಾಲಯದಲ್ಲಿ 250 ಜೂನಿಯರ್ ಕೋರ್ಟ್ ಅಸಿಸ್ಟೆಂಟ್ ಹುದ್ದೆಗಳ (Job) ಭರ್ತಿಗೆ ಅರ್ಜಿ (Appliation) ಆಹ್ವಾನಿಸಲಾಗಿದೆ.
ಕೇಂದ್ರ ಸರ್ಕಾರದ ಪ್ರತಿಷ್ಠಿತ ನ್ಯಾಯಾಂಗ ಸಂಸ್ಥೆಯಾದ ಭಾರತದ ಸರ್ವೋಚ್ಚ ನ್ಯಾಯಾಲಯದಲ್ಲಿ (Supreme Court of India) ಗೌರವಾನ್ವಿತ ವೃತ್ತಿಜೀವನವನ್ನು ಆರಂಭಿಸಲು ಕಾಯುತ್ತಿರುವ ಅರ್ಹ ಪದವೀಧರರಿಗೆ ಇದೊಂದು ಅತ್ಯುತ್ತಮ ಅವಕಾಶವಾಗಿದೆ. ಸುಪ್ರೀಂ ಕೋರ್ಟ್ ಒಟ್ಟು 250 ಜೂನಿಯರ್ ಕೋರ್ಟ್ ಅಸಿಸ್ಟೆಂಟ್ ಗ್ರೂಪ್-ಬಿ (ಗೆಜೆಟೆಡ್ ಅಲ್ಲದ) ಹುದ್ದೆಗಳ ಭರ್ತಿಗೆ ಆನ್‍ಲೈನ್ (Online) ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ನವದೆಹಲಿಯಲ್ಲಿ ಉದ್ಯೋಗ ಸ್ಥಳ ಹೊಂದಿರುವ ಈ ಹುದ್ದೆಗಳಿಗೆ ಆಕರ್ಷಕ ವೇತನ ಶ್ರೇಣಿ ಹಾಗೂ ಅತ್ಯುತ್ತಮ ಸೇವಾ ಸೌಲಭ್ಯಗಳು ಲಭ್ಯವಿವೆ.
ಅಭ್ಯರ್ಥಿಗಳನ್ನು ಬಹುಹಂತಗಳ ಪಾರದರ್ಶಕ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುತ್ತದೆ.
ಹಂತ 1: 100 ಅಂಕಗಳ ವಸ್ತುನಿಷ್ಠ ಮಾದರಿಯ ಲಿಖಿತ ಪರೀಕ್ಷೆ
ಹಂತ 2: 50 ಅಂಕಗಳ ಕಂಪ್ಯೂಟರ್ ಟೈಪಿಂಗ್ ವೇಗ ಪರೀಕ್ಷೆ (ಕನಿಷ್ಠ 25 ಅಂಕಗಳು ಕಡ್ಡಾಯ).
ಹಂತ 3: 100 ಅಂಕಗಳ ವಿವರಣಾತ್ಮಕ ಲಿಖಿತ ಪರೀಕ್ಷೆ (ಪ್ರಬಂಧ, ಸಂಕ್ಷಿಪ್ತ ಲೇಖನ ಇತ್ಯಾದಿ).
ಹಂತ 4 ಮತ್ತು 5: 25 ಅಂಕಗಳ ಸಂದರ್ಶನ ಹಾಗೂ ಮೂಲ ದಾಖಲಾತಿಗಳ ಪರಿಶೀಲನೆ.














