Gilli Nata Movie: ಗಿಲ್ಲಿ ಅಭಿಮಾನಿಗಳಿಗೆ ಗುಡ್ ನ್ಯೂಸ್! ‘ಪಳಾರ್’ ಚಿತ್ರದ ಬಿಗ್ ಅಪ್ಡೇಟ್ ಔಟ್ | | ACTPnews

ಗಿಲ್ಲಿ ನಟನ 'ಪಳಾರ್' ಚಿತ್ರದ ಹೊಸ ನ್ಯೂಸ್; ಇಲ್ಲಿದೆ ಆ ಮಾಹಿತಿ!


Last Updated:

ಬಿಗ್ ಬಾಸ್ ವಿನ್ನರ್ ಗಿಲ್ಲಿ ನಟನ ಪಳಾರ್ ಚಿತ್ರದ ಹೊಸ ಮಾಹಿತಿ ಹೊರ ಬಂದಿದೆ. ಚಿತ್ರದ ಮೊದಲ ಹಂತದ ನ್ಯೂಸ್ ಇದಾಗಿದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.

ಗಿಲ್ಲಿ ನಟನ 'ಪಳಾರ್' ಚಿತ್ರದ ಹೊಸ ನ್ಯೂಸ್; ಇಲ್ಲಿದೆ ಆ ಮಾಹಿತಿ!
ಗಿಲ್ಲಿ ನಟನ ‘ಪಳಾರ್’ ಚಿತ್ರದ ಹೊಸ ನ್ಯೂಸ್; ಇಲ್ಲಿದೆ ಆ ಮಾಹಿತಿ!

ಪಳಾರ್ ಚಿತ್ರದ (Palar Movie) ಮೊದಲ ಹಂತದ ಶೂಟಿಂಗ್ ಕಂಪ್ಲೀಟ್ (First Schedule Complete) ಆಗಿದೆ. ಮುಹೂರ್ತ ಆಗಿ ಒಂದು ತಿಂಗಳೇ ಆಗಿದೆ. 30 ದಿನಗಳಲ್ಲಿ ಚಿತ್ರದ ಮೊದಲ ಹಂತದ ಶೂಟಿಂಗ್ ಮುಗಿದಿದೆ. ಬಿಗ್ ಬಾಸ್ ವಿನ್ನರ್ ಗಿಲ್ಲಿ (Gilli) ಈ ಚಿತ್ರದ ಮೂಲಕವೇ ಹೀರೋ ಆಗಿದ್ದಾರೆ. ಈ ಚಿತ್ರದ ನಾಯಕಿ ಯಾರು ಅನ್ನೋದು ಇನ್ನು ಹಾಗೆ ಇದೆ. ಆ ಕುತೂಹಲ ನಡುವೆ ಡೈರೆಕ್ಟರ್ ಚಂದ್ರಮೋಹನ್ (Chandra Mohan) ಇದೀಗ ತಮ್ಮ ಪಳಾರ್ ಚಿತ್ರದ ಮೊದಲ ಹಂತದ ಶುಟಿಂಗ್ ಮುಗಿಸಿದ್ದಾರೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.

ಗಿಲ್ಲಿ ಹೀರೋ ಆದ ಫಸ್ಟ್ ಸಿನಿಮಾ

ಪಳಾರ್ ಚಿತ್ರ ಜೂನ್-21 ರಂದು ಲಾಂಚ್ ಆಗಿದೆ. ಆ ದಿನ ಗಿಲ್ಲಿ ನಟನ ಜನ್ಮ ದಿನ ಇತ್ತು. ಈ ಹಿನ್ನೆಲೆಯಲ್ಲಿಯೇ ಚಿತ್ರ ತಂಡ ಒಂದು ಪ್ಲಾನ್ ಮಾಡಿತ್ತು.
bigg boss winner gilli nata palar movie latest shooting updates

ಇನ್ನು ಒಂದು ತಿಂಗಳೂ ಆಗಿಲ್ಲ

(ಚಿತ್ರ ಕೃಪೆ: ಗಿಲ್ಲಿ ನಟ ಇನ್‌ಸ್ಟಾಗ್ರಾಮ್)

ಜನ್ಮ ದಿನಕ್ಕೆ ಚಿತ್ರದ ಪೋಸ್ಟರ್ ಬಿಡ್ತು. ಈ ದಿನವೆ ಬಂಡೆ ಮಹಾಕಾಳಮ್ಮ ದೇವಸ್ಥಾನದಲ್ಲಿ ಮುಹೂರ್ತ ಕೂಡ ಆಯಿತು. ಇನ್ನೇನು ಚಿತ್ರದ ಶೂಟಿಂಗ್ ಶುರು ಮಾಡ್ತೀವಿ ಅಂತಲೇ ಹೇಳಿತ್ತು.

ಒಂದು ವಾರದಲ್ಲಿಯೇ ಶೂಟಿಂಗ್ ಶುರು

ಪಳಾರ್ ಚಿತ್ರದ ಮುಹೂರ್ತ ಆದ ಕೆಲವೇ ದಿನಗಳಲ್ಲಿ ಶೂಟಿಂಗ್ ಶುರು ಆಗಿದೆ. ಗಿಲ್ಲಿ ನಟನ ದೃಶ್ಯಗಳನ್ನೆ ತೆಗೆದಿದ್ದಾರೆ. ಮಂಡ್ಯ ಕಡೆಯ ಹಳ್ಳಿಗಳಲ್ಲಿಯೇ ಈ ಚಿತ್ರದ ಶೂಟಿಂಗ್ ಆಗಿದೆ.

ಇನ್ನು ಒಂದು ತಿಂಗಳೂ ಆಗಿಲ್ಲ

ಪಳಾರ್ ಚಿತ್ರದ ಶೂಟಿಂಗ್ ಶುರು ಆಗಿ ಇನ್ನು ಒಂದು ತಿಂಗಳೂ ಆಗಿಲ್ಲ. ಅಷ್ಟರಲ್ಲಿಯೇ ಚಿತ್ರದ ಮೊದಲ ಹಂತದ ಚಿತ್ರೀಕರಣ ಆಗಿದೆ.

ಡೈರೆಕ್ಟರ್ ಚಂದ್ರ ಮೋಹನ್ ಪಕ್ಕಾ ಪ್ಲಾನ್ ಮಾಡಿಯೇ ಈ ಚಿತ್ರ ಮಾಡುತ್ತಿದ್ದಾರೆ. ಶುರು ಮಾಡೋ ಮೊದಲೇ ಸ್ಕ್ರಿಪ್ಟ್ ಹಂತದಲ್ಲಿಯೇ ಎಲ್ಲ ಫೈನಲ್ ಮಾಡಿಕೊಂಡಂತೆ ಇದೆ. ಹಾಗಾಗಿಯೇ ಅಷ್ಟೆ ಸ್ಪೀಡ್ ಅಲ್ಲಿಯೇ ಈ ಚಿತ್ರದ ಕೆಲಸ ನಡೆಯುತ್ತಿದೆ.

bigg boss winner gilli nata palar movie latest shooting updates

ಶೂಟಿಂಗ್ ಅಪ್‌ಡೇಟ್ಸ್

(ಚಿತ್ರ ಕೃಪೆ: ಡೈರೆಕ್ಟರ್ ವಿಜಯ್ ಪ್ರಿಯಾ ಇನ್‌ಸ್ಟಾಗ್ರಾಮ್)

ಪಳಾರ್ ನಾಯಕಿ ಯಾರು

ಈ ಒಂದು ಪ್ರಶ್ನೆ ಇದ್ದೇ ಇದೆ. ಹೀರೋಯಿನ್ ಯಾರು ಅನ್ನುವ ಪ್ರಶ್ನೆಗೆ ಚಿತ್ರ ತಂಡ ಇನ್ನು ಏನು ಹೇಳಿಕೊಂಡಂತೆ ಇಲ್ವೇ ಇಲ್ಲ. ಅಷ್ಟರಲ್ಲಿಯೇ ಈ ಚಿತ್ರಕ್ಕೆ ಕಾವ್ಯ ಶೈವ ಈ ಚಿತ್ರದ ನಾಯಕಿ ಅನ್ನುವ ಸುದ್ದಿನೂ ಹರಿದಾಡಿತ್ತು.

ಇದಕ್ಕೆ ಪೂರಕ ಅನ್ನುವ ಹಾಗೆ ಒಂದು ಪೋಸ್ಟರ್ ಸೋಷಿಯಲ್ ಮಿಡಿಯಾದಲ್ಲೂ ಗಮನ ಸೆಳೆದಿತ್ತು. ಆದರೆ, ಅದು ಬಿಟ್ಟರೆ, ಈ ವಿಚಾರಕ್ಕೆ ಸಂಬಂಧಿಸಿದಂತೆ ಸದ್ಯ ಬೇರೆ ಏನೂ ಸುದ್ದಿ ಇಲ್ಲ ಬಿಡಿ.

ಶೂಟಿಂಗ್ ಅಪ್‌ಡೇಟ್ಸ್

ಚಿತ್ರದ ಮೊದಲ ಹಂತದ ಶೂಟಿಂಗ್ ಕಂಪ್ಲೀಟ್ ಆಗಿದೆ. ಈ ಒಂದು ವಿಷಯವನ್ನ ಹೇಳೋಕೆ ಒಂದು ಪೋಸ್ಟರ್ ಕೂಡ ರೆಡಿ ಆಗಿದೆ. ಅದನ್ನ ಡೈರೆಕ್ಟರ್ ವಿಜಯ್ ಪ್ರಿಯಾ ಹಂಚಿಕೊಂಡಿದ್ದಾರೆ. ಇನ್‌ಸ್ಟಾಗ್ರಾಮ್ ಅಲ್ಲಿಯೇ ಇದನ್ನ ಶೇರ್ ಮಾಡಿಕೊಂಡಿದ್ದಾರೆ.

ಮೊದಲ ಹಂತದ ಶೂಟಿಂಗ್ ಕಂಪ್ಲೀಟ್ ಆಗಿದೆ. ಸಾಕಷ್ಟು ನೆನಪುಗಳೂ ಇವೆ. ನಮ್ಮ ಕನಸು ನನಸಾಗಿಸುವಲ್ಲಿ ಮತ್ತೊಂದು ಹೆಜ್ಜೆಯ ಸನಿಹಕ್ಕೆ ಬಂದಿದ್ದೇವೆ ಅಂತಲೂ ಬರೆದುಕೊಂಡಿದ್ದಾರೆ. ಇನ್ನುಳಿದಂತೆ ಮೊದಲ ಹಂತದ ಚಿತ್ರೀಕರಣ ಬಹುಬೇಗನೆ ಮುಗಿಸಿದ್ದಾರೆ ಅಂತಲೇ ಹೇಳಬಹುದು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports