GBA: ಈ QR ಸ್ಕ್ಯಾನ್ ಮಾಡಿ ,ಮನೆ ಬಾಗಿಲಿಗೇ ಬರುತ್ತೆ ತ್ಯಾಜ್ಯ ವಾಹನ; ನಿಮಗೆ ಬೇಡವಾದ ವಸ್ತುಗಳ ಉಚಿತ ವಿಲೇವಾರಿ, ಇಂದೇ ಬುಕ್‌ ಮಾಡಿ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

GBA


Last Updated:

ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತ DCLUTTER ಆ್ಯಪ್ ಮೂಲಕ ಭಾನುವಾರ ಮನೆ ಬಾಗಿಲಿಗೇ ಹಳೆಯ ಮಂಚ, ಸೋಫಾ, ಫ್ರಿಡ್ಜ್ ಮುಂತಾದ ಬೃಹತ್ ತ್ಯಾಜ್ಯ ಉಚಿತವಾಗಿ ಸಂಗ್ರಹಿಸಲಿದೆ

GBA
GBA

ಬೆಂಗಳೂರು: ಮನೆಯ ಮೂಲೆಯಲ್ಲಿ ಹಳೆಯ ಮಂಚ, ಸೋಫಾ, ಕಪಾಟು, ಮೇಜು ಧೂಳು ತಿನ್ನುತ್ತ ಬಿದ್ದಿವೆಯಾ? ಆದರೆ ಬಿಸಾಡಲು ಮನಸ್ಸಿಲ್ಲ, ವಿಲೇವಾರಿ (Clearing) ಮಾಡಲು ದಾರಿ ಗೊತ್ತಿಲ್ಲ ಎಂದು ಚಿಂತಿಸುತ್ತಿದ್ದೀರಾ? ಇನ್ನು ಚಿಂತೆ ಬೇಡ! ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಕರ್ನಾಟಕ ಸರ್ಕಾರದ (Government Of Karnataka) ಅಂಗಸಂಸ್ಥೆ ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತ (BSWML) ಬೆಂಗಳೂರಿನ ಜನರಿಗಾಗಿ ‘DCLUTTER APP’ ಎಂಬ ವಿಶೇಷ ಆ್ಯಪ್ ಸಹಯೋಗದಲ್ಲಿ ಮನೆ ಬಾಗಿಲಿಗೇ ಬಂದು ಉಚಿತವಾಗಿ ಬೃಹತ್ ಗಾತ್ರದ ತ್ಯಾಜ್ಯ (Bulk Waste) ಸಂಗ್ರಹಿಸಿ ವಿಲೇವಾರಿ ಮಾಡಲಾಗುತ್ತದೆ!

ಯಾವೆಲ್ಲಾ ವಸ್ತುಗಳನ್ನು ನೀಡಬಹುದು?

ಸಾರ್ವಜನಿಕರು ತಮ್ಮ ಮನೆಯಲ್ಲಿರುವ ಹಳೆಯ ಮಂಚ, ಸೋಫಾ, ಹಾಸಿಗೆ, ಟೇಬಲ್, ಕಮೋಡ್, ಫ್ರಿಡ್ಜ್ ಮತ್ತು ವಾಷಿಂಗ್ ಮೆಷಿನ್‌ಗಳಂತಹ ಭಾರೀ ವಸ್ತುಗಳನ್ನು ಉಚಿತವಾಗಿ ಮನೆ ಬಾಗಿಲಿನಿಂದಲೇ ವಿಲೇವಾರಿ ಮಾಡಬಹುದು. ಇದರೊಂದಿಗೆ ಹಳೆಯ ಬಟ್ಟೆಗಳು, ಶೂಗಳು, ಮಕ್ಕಳ ಆಟಿಕೆಗಳು ಮತ್ತು ಎಲೆಕ್ಟ್ರಾನಿಕ್ ವಸ್ತುಗಳನ್ನು ಸಹ ನೀಡಲು ಅವಕಾಶವಿದೆ. ಸದ್ಯಕ್ಕೆ ಭಾನುವಾರಗಳಂದು ಮಾತ್ರ ಈ ಉಚಿತ ಪಿಕ್-ಅಪ್ ಸೇವೆ ಲಭ್ಯವಿದ್ದು, ಸಾರ್ವಜನಿಕರು ಆ್ಯಪ್ ಡೌನ್‌ಲೋಡ್ ಮಾಡಿ, ತಮ್ಮ ವಿವರಗಳನ್ನು ನೋಂದಾಯಿಸಿ, ಕಸದ ವಿವರ ಹಾಗೂ ಸಮಯವನ್ನು ಕಾಯ್ದಿರಿಸಬೇಕಾಗುತ್ತದೆ. ರಸ್ತೆಯಲ್ಲಿ ತ್ಯಾಜ್ಯ ಎಸೆಯಬೇಡಿ ಜವಾಬ್ದಾರಿಯುತವಾಗಿ DCLUTTER ಮೂಲಕ ವಿಲೇವಾರಿ ಮಾಡಿ ಎಂದು ಈ ಮೂಲಕ ಪಾಲಿಕೆ ಮನವಿ ಮಾಡಿದೆ.

ಸೇವೆ ಬಳಸುವುದು ಬಹಳ ಸುಲಭ

ಸೇವೆ ಬಳಸುವುದು ಬಹಳ ಸರಳ, ಮೊದಲು Google Play Store ಅಥವಾ App Storeನಿಂದ DCLUTTER ಆ್ಯಪ್ ಡೌನ್‌ಲೋಡ್ ಮಾಡಿ. ನಂತರ ನಿಮ್ಮ ನಂಬರ್‌ ಅಥವಾ ಇ-ಮೈಲ್‌ ಮೂಲಕ ನೋಂದಾಯಿಸಿಕೊಳ್ಳಿ, ಆಮೇಲೆ ಓಟಿಪಿ ಹಾಕಿ, ನಂತರ ಪ್ರೊಫೈಲ್‌ ಹೆಸರು, ವಿಳಾಸ ದಾಖಲಿಸಿಕೊಳ್ಳಿ. ಇದಾದ ನಂತರ ವಿಲೇವಾರಿ ಮಾಡಬೇಕಾದ ವಸ್ತುಗಳನ್ನು ಆಯ್ಕೆ ಮಾಡಿ, ಪಿಕ್‌ಅಪ್ ಸಮಯ ನಿಗದಿಪಡಿಸಿ. ನಿಮ್ಮ ವಿಳಾಸವನ್ನು ಸರಿಯಾಗಿ ನಮೂದಿಸಿ. ಬಳಿಕ BSWML ವಾಹನ ನಿಮ್ಮ ಮನೆ ಬಾಗಿಲಿಗೇ ಬಂದು ಸಂಗ್ರಹಿಸುತ್ತದೆ. ಆ್ಯಪ್ ಡೌನ್‌ಲೋಡ್‌ಗೆ ಜಾಹೀರಾತಿನಲ್ಲಿರುವ QR ಕೋಡ್ ಸ್ಕ್ಯಾನ್ ಮಾಡಿ.

ಪಾಲಿಕೆಯ ಈ ನಿರ್ಧಾರಕ್ಕೆ ಕಾರಣವೇನು?



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports