Last Updated:
ಫಾದರ್ ಚಿತ್ರ ಟೀಸರ್ ಹೊಸ ಭರವಸೆ ಮೂಡಿಸುತ್ತಿದೆ. ಅಪ್ಪ ಮತ್ತು ಮಗನ ಭಾವನಾತ್ಮಕ ಕತೆಯ ಚಿತ್ರ ಇದಾಗಿದೆ. ಟೀಸರ್ ಅಲ್ಲಿರೋ ಎರಡು ಡೈಲಾಗ್ ಎಲ್ಲರಿಗೂ ಕನೆಕ್ಟ್ ಆಗುವ ರೀತಿನೆ ಇವೆ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.
ಕನ್ನಡದ ‘ಫಾದರ್’ ಚಿತ್ರದ (Father Movie) ಟೀಸರ್ ರಿಲೀಸ್ (Teaser Release) ಆಗಿದೆ. ಎಲ್ಲರ ಗಮನ ಸೆಳೆಯುವಂತೆ ಇದೆ. ಸಾಮಾನ್ಯವಾಗಿ ಅಮ್ಮನ ಮೇಲೆ ಹೆಚ್ಚಿನ ಸಿನಿಮಾಗಳು ಬಂದಿವೆ. ಅಮ್ಮನ ವಿಷಯಗಳನ್ನೆ ಹೆಚ್ಚು ಹೈಲೈಟ್ ಮಾಡಿರೋದು ಇದೆ. ಆದರೆ, ಈ ಚಿತ್ರ ಅಪ್ಪನ (Father) ಮಹತ್ವವನ್ನ ಸಾರುವಂತೆ ಇದೆ. ಈ ಸಿನಿಮಾದ ಟೀಸರ್ ಅಲ್ಲಿ ಎರಡು ಡೈಲಾಗ್ ಇವೆ. ಒಂದನ್ನ ಅಪ್ಪ ಹೇಳ್ತಾರೆ. ಇನ್ನೊಂದನ್ನ ಮಗ ಹೇಳ್ತಾರೆ. ಇವರ ಈ ಡೈಲಾಗ್ ಜನಕ್ಕೆ ಆ ಕ್ಷಣವೇ ಕನೆಕ್ಟ್ ಆಗುವ ರೀತಿನೇ ಇವೆ. ಟೀಸರ್ (Teaser) ಅಲ್ಲಿ ಇದೇ ಹೈಲೈಟ್ ಆಗಿದೆ. ಆದರೆ, ಇಲ್ಲಿ ಹೆಚ್ಚು ಮಾತಿಲ್ಲ. ಎಕ್ಸಪ್ರೆಷನ್ ಜಾಸ್ತಿ ಇದೆ. ಈ ಸಿನಿಮಾದ ಇನ್ನಷ್ಟು ಇಂಟ್ರಸ್ಟಿಂಗ್ ವಿಷಯ ಇಲ್ಲಿದೆ ಓದಿ.














