Last Updated:
ಹಾಸ್ಯ ನಾಯಕ ನಟ ಚಿಕ್ಕಣ್ಣ ಮದುವೆ ಆಗುತ್ತಿದ್ದಾರೆ. ಇದೇ ಆಗಸ್ಟ್-29 ಮತ್ತು 30 ರಂದು ಮೈಸೂರಿನಲ್ಲಿ ಮದುವೆ ಇದೆ. ಈ ವಿಷಯವನ್ನ ಸ್ವತಃ ಚಿಕ್ಕಣ್ಣ ಹೇಳಿದ್ದಾರೆ. ಪ್ರೆಸ್ ಮೀಟ್ ಅಲ್ಲಿ ಮಾತನಾಡಿದ ಇವರ ಮಾತುಗಳ ಕಂಪ್ಲೀಟ್ ವಿವರ ಇಲ್ಲಿದೆ ಓದಿ.
ಹಾಸ್ಯ ನಾಯಕ ನಟ ಚಿಕ್ಕಣ್ಣ ಮದುವೆ (Chikanna Marriage) ಆಗುತ್ತಿದ್ದಾರೆ. ಶೂಟಿಂಗ್ ಮಹದೇವಪುರದ ಹುಡುಗಿ ಪಾವನಾ (Pavana) ಅವರನ್ನ ವಿವಾಹ ಆಗುತ್ತಿದ್ದಾರೆ. ಆದರೆ, ಇದು ಲವ್ ಮ್ಯಾರೇಜ್ (Love Marriage) ಏನೂ ಅಲ್ಲ. ಮನೆಯವರೇ ನೋಡಿದ್ದಾರೆ. ಫಿಕ್ಸ್ ಆದ್ಮೇಲೆ ಲವ್ ಆಗಿದೆ. ಹಾಗಾಗಿಯೇ ಇದನ್ನ ಲವ್ ಕಮ್ ಅರೇಂಜ್ ಅಂತ ಹೇಳ್ಬಹುದು ಅಂತ ತಮಾಷೆ ಮಾಡಿದ್ದಾರೆ. ಮದುವೆಯನ್ನ ಮೈಸೂರಿನಲ್ಲಿ (Mysuru) ಮಾಡಿಕೊಳ್ಳುತ್ತಿದ್ದಾರೆ. ಇಲ್ಲಿಯೇ ಯಾಕೆ ಅನ್ನುವುದುಕ್ಕೂ ಉತ್ತರ ಕೊಟ್ಟಿದ್ದಾರೆ. ಇವರ ಮದುವೆಯ ಇತರ ಮಾಹಿತಿ ಇಲ್ಲಿದೆ ಓದಿ.














