Facebook Down: ವಿಶ್ವಾದ್ಯಂತ ಫೇಸ್‌ಬುಕ್ ಢಮಾರ್! ಮೆಟಾ ನೋಟಿಫಿಕೇಶನ್ ನೋಡಿ ಬೆಚ್ಚಿದ ಬಳಕೆದಾರರು! | ವ್ಯಾಪಾರ ಸುದ್ದಿ | ACTPnews

News18


Last Updated:

ಬೆಳಗ್ಗೆ ಇದ್ದಕ್ಕಿದ್ದಂತೆ ಫೇಸ್‌ಬುಕ್ ಬಗ್ಗೆ ಕೋಟ್ಯಂತರ ದೂರುಗಳು ಸೋಶಿಯಲ್ ಮೀಡಿಯಾದಲ್ಲಿ ಇದ್ದಕ್ಕಿದ್ದಂತೆ ಏರಲು ಪ್ರಾರಂಭಿಸಿದವು. ಬಳಕೆದಾರರು ಎಕ್ಸ್‌ ಖಾತೆ, ಇನ್ಸ್ಟಾಗ್ರಾಂ, ವಾಟ್ಸಾಪ್ ಸೇರಿದಂತೆ ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಫೇಸ್‌ಬುಕ್ ಸಮಸ್ಯೆಗಳ ಬಗ್ಗೆ ಪೋಸ್ಟ್ ಮಾಡಿದ್ದಾರೆ.

News18
News18

ನವದೆಹಲಿ: ಇಂದು ಬೆಳಿಗ್ಗೆಯಿಂದ ನಿಮ್ಮ ಫೇಸ್‌ಬುಕ್ (Facebook Server Down) ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ವಾ? ಅಯ್ಯೋ ನನ್ ಫೇಸ್‌ಬುಕ್ ಅಕೌಂಟ್ ಹೊಗೆ ಹಾಕಿಸ್ಕೊಳ್ತು ಅಂತಾ ಚಿಂತೆ ಮಾಡ್ತಿದ್ದೀರಾ? ಡೋಂಟ್‌ ವರಿ.. ಇದು ನಿಮ್ಮೊಬ್ಬರಿಗೆ ಉಂಟಾಗಿರೋ ಸಮಸ್ಯೆಯಲ್ಲ, ಜಾಗತಿಕವಾಗಿ ಫೇಸ್‌ಬುಕ್‌ ಸಮಸ್ಯೆ ಎದುರಿಸುತ್ತಿದೆ.

ಇಂದು ಮಧ್ಯಾಹ್ನ 12 ಗಂಟೆಯಿಂದ ಜಾಗತಿಕವಾಗಿ ಫೇಸ್‌ಬುಕ್ ಡೌನ್ ಆಗಿದ್ದು, ಕೋಟ್ಯಂತರ ಬಳಕೆದಾರರು ಫೇಸ್‌ಬುಕ್ ಬಳಸಲಾಗದೆ ಚಿಂತೆಗೀಡಾಗಿದ್ದಾರೆ. ಕೆಲ ದೇಶಗಳಲ್ಲಿ ಬೆಳಗ್ಗೆ 10.40ರ ಸಮಯದಲ್ಲಿ ಫೇಸ್‌ಬುಕ್ ಡೌನ್ ಆಗಿದೆ. ಪ್ರಪಂಚದಾದ್ಯಂತ ಕೋಟ್ಯಂತರ ಫೇಸ್‌ಬುಕ್ ಬಳಕೆದಾರರು ಫೇಸ್‌ಬುಕ್‌ಗೆ ಲಾಗಿನ್ ಆಗಲು, ವೆಬ್‌ಸೈಟ್‌ಗಳನ್ನು ತೆರೆಯಲು ಮತ್ತು ಅಪ್ಲಿಕೇಶನ್ ಬಳಸಲಾಗದೆ ತೊಂದರೆ ಎದುರಿಸುತ್ತಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: Liquor Tax In India: 1 ಸಾವಿರ ರೂಪಾಯಿಯ ಮದ್ಯದ ಬಾಟಲಿಗೆ ಸರ್ಕಾರ ಎಷ್ಟು ತೆರಿಗೆ ಹಾಕುತ್ತೆ? ತಿಳ್ಕೊಂಡ್ರೆ ಶಾಕ್ ಆಗ್ತೀರಿ!

ವರದಿಗಳ ಪ್ರಕಾರ, ಇಂದು (ಜುಲೈ 19) ಬೆಳಗ್ಗೆ ಇದ್ದಕ್ಕಿದ್ದಂತೆ ಫೇಸ್‌ಬುಕ್ ಬಗ್ಗೆ ಕೋಟ್ಯಂತರ ದೂರುಗಳು ಸೋಶಿಯಲ್ ಮೀಡಿಯಾದಲ್ಲಿ ಇದ್ದಕ್ಕಿದ್ದಂತೆ ಏರಲು ಪ್ರಾರಂಭಿಸಿದವು. ಬಳಕೆದಾರರು ಎಕ್ಸ್‌ ಖಾತೆ, ಇನ್ಸ್ಟಾಗ್ರಾಂ, ವಾಟ್ಸಾಪ್ ಸೇರಿದಂತೆ ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಫೇಸ್‌ಬುಕ್ ಸಮಸ್ಯೆಗಳ ಬಗ್ಗೆ ಪೋಸ್ಟ್ ಮಾಡಿದ್ದಾರೆ. ಕೆಲವರು ಇದೇ ಮೆಟಾ ಒಡೆತನದ ಮತ್ತೊಂದು ಆಪ್ ಇನ್‌ಸ್ಟಾಗ್ರಾಮ್‌ನಲ್ಲಿಯೂ ಸಮಸ್ಯೆ ಉಂಟಾದ ಬಗ್ಗೆ ವರದಿ ಮಾಡಿದ್ದಾರೆ.

ಸಮಸ್ಯೆ ಏನು?

ಬಳಕೆದಾರರ ಪ್ರಕಾರ, ಜಗತ್ತಿನಾದ್ಯಂತ ಕೋಟ್ಯಂತರ ಜನರು ವಿಭಿನ್ನ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕೆಲವರು ಫೇಸ್‌ಬುಕ್‌ಗೆ ಲಾಗಿನ್ ಆಗಲು ಸಾಧ್ಯವಾಗುತ್ತಿಲ್ಲ ಎಂದರೆ, ಇನ್ನೂ ಕೆಲವರು ವೆಬ್‌ಸೈಟ್ ಅಥವಾ ಅಪ್ಲಿಕೇಶನ್‌ನಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅನೇಕರು ತಮ್ಮ ನ್ಯೂಸ್ ಫೀಡ್ ಅಪ್ಡೇಟ್ ಆಗುತ್ತಿಲ್ಲ ಎಂದು ವರದಿ ಮಾಡಿದ್ದಾರೆ. ಆದರೆ, ಹೆಚ್ಚಿನ ಬಳಕೆದಾರರು ಸಮಸ್ಯೆ ಅಪ್ಲಿಕೇಶನ್‌ನಲ್ಲಿಲ್ಲ, ಆದರೆ ವೆಬ್ ಪ್ಲಾಟ್‌ಫಾರ್ಮ್‌ನಲ್ಲಿದೆ ಎಂದು ಹೇಳಿದ್ದಾರೆ.

ಡೌನ್‌ಡೆಕ್ಟರ್ ಮೇಲಿನ ದೂರುಗಳು ಹೆಚ್ಚಳ

ಫೇಸ್‌ಬುಕ್ ಸಂಬಂಧಿತ ದೂರುಗಳಲ್ಲಿ ಹಠಾತ್ ಹೆಚ್ಚಳ ಕಂಡುಬಂದಿದೆ ಎಂದು ಡೌನ್‌ಡೆಟೆಕ್ಟರ್ ವೆಬ್‌ಸೈಟ್ ವರದಿ ಮಾಡಿದೆ. ವರದಿಗಳ ಪ್ರಕಾರ, ಸಮಸ್ಯೆಗಳು ಅಮೆರಿಕದ ಸಮಯ ET 3:34 AM ರ ಸುಮಾರಿಗೆ ಪ್ರಾರಂಭವಾದವು ಮತ್ತು ಭಾರತದಲ್ಲಿ, ಸಮಸ್ಯೆ IST ಮಧ್ಯಾಹ್ನ 1:00 ಗಂಟೆಗೆ ಪ್ರಾರಂಭವಾಯಿತು.

ಮೆಟಾ ಏನು ಹೇಳಿದೆ?

ಈ ಲೇಖನ ಬರೆಯುವ ಸಮಯದಲ್ಲಿ, ಮೆಟಾ ಕಂಪನಿಯು ಸ್ಥಗಿತದ ಕಾರಣದ ಬಗ್ಗೆ ಯಾವುದೇ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿಲ್ಲ. ಇಂತಹ ಸಂದರ್ಭಗಳಲ್ಲಿ, ಮೆಟಾ ಕಂಪನಿಯು ಸಾಮಾನ್ಯವಾಗಿ ಸಮಸ್ಯೆಯನ್ನು ತನಿಖೆ ಮಾಡಿದ ನಂತರವೇ ಮಾಹಿತಿಯನ್ನು ಹಂಚಿಕೊಳ್ಳುತ್ತದೆ.

ಸಮಸ್ಯೆ ಎದುರಿಸುತ್ತಿದ್ದರೆ ಏನು ಮಾಡಬೇಕು?

ನೀವು ಫೇಸ್‌ಬುಕ್‌ನಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಸ್ವಲ್ಪ ಸಮಯ ಕಾಯುವುದು ಉತ್ತಮ. ಅಪ್ಲಿಕೇಶನ್ ಅನ್ನು ಪದೇ ಪದೇ ರಿಸ್ಟಾರ್ಟ್ ಅಥವಾ ರಿಫ್ರೆಶ್ ಮಾಡುವ ಅಥವಾ ನಿಮ್ಮ ಪಾಸ್‌ವರ್ಡ್ ಅನ್ನು ಬದಲಾಯಿಸುವ ಅಗತ್ಯವಿಲ್ಲ, ಅದು ಸರ್ವರ್‌ಗೆ ಸಂಬಂಧಿಸಿದ ಸಮಸ್ಯೆಯಾಗಿದೆ. ಹೀಗಾಗಿ ಅದನ್ನು ಕಂಪನಿಯೇ ಸರಿಪಡಿಸಿದ ನಂತರ ಸೇವೆ ಸಾಮಾನ್ಯ ಸ್ಥಿತಿಗೆ ಮರಳುತ್ತದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed