Nenapirali Prem: ‘ಹಂಸಲೇಖಗೆ ಪದ್ಮ ಪ್ರಶಸ್ತಿ ಗೌರವ ಸಲ್ಲಬೇಕು’, ನೆನಪಿರಲಿ ಪ್ರೇಮ್ ಅಭಿಯಾನ! | | ACTPnews

ಹಂಸಲೇಖ ಅವರಿಗೆ ಪದ್ಮ ಪ್ರಶಸ್ತಿ ಗೌರವ ಸಲ್ಲಬೇಕು; ನೆನಪಿರಲಿ ಪ್ರೇಮ್ ಅಭಿಯಾನ!


Last Updated:

ನಾಯಕ ನಟ ನೆನಪಿರಲಿ ಪ್ರೇಮ್ ಅಭಿಯಾನ ಶುರು ಮಾಡಿದ್ದಾರೆ. ಹಂಸಲೇಖ ಅವರಿಗೆ ಪದ್ಮ ಪುರಸ್ಕಾರ ಸಲ್ಲಬೇಕು ಅಂತಲೇ ಹೇಳುತ್ತಿದ್ದಾರೆ. ಇವರ ಈ ಅಭಿಯಾನದ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.

ಹಂಸಲೇಖ ಅವರಿಗೆ ಪದ್ಮ ಪ್ರಶಸ್ತಿ ಗೌರವ ಸಲ್ಲಬೇಕು; ನೆನಪಿರಲಿ ಪ್ರೇಮ್ ಅಭಿಯಾನ!
ಹಂಸಲೇಖ ಅವರಿಗೆ ಪದ್ಮ ಪ್ರಶಸ್ತಿ ಗೌರವ ಸಲ್ಲಬೇಕು; ನೆನಪಿರಲಿ ಪ್ರೇಮ್ ಅಭಿಯಾನ!

ನೆನಪಿರಲಿ ಪ್ರೇಮ್ (Nenapirali Prem) ಮೊನ್ನೆ ಬೇಸರ ವ್ಯಕ್ತಪಡಿಸಿದ್ದರು. ಚಿತ್ರರಂಗದ ಗೀತರಚನಾಕಾರರಿಗೆ ಬೆಲೆನೆ ಇಲ್ಲ. ಬೇರೆ ಕಡೆಗೆ ಅವಾರ್ಡ್ ಬರ್ತವೆ. ಮೂರು ಸಾವಿರ ಹಾಡುಗಳನ್ನ ಬರೆದರೂ ಅಷ್ಟೇನೆ. 300 ಚಿತ್ರಗಳಿಗೆ ಸಾಹಿತ್ಯ ಮತ್ತು ಸಂಗೀತ ಮಾಡಿದರನೂ ಅಷ್ಟೇನೆ ನೋಡಿ. ಏನೂ ಗೌರವವೇ ಇಲ್ಲ ಅಂತಲೇ ಹೇಳಿಕೊಂಡಿದ್ದರು. ಅದರೊಟ್ಟಿಗೆ ಹಂಸಲೇಖ (Hamsalekha) ಅವರಿಗೆ ಪದ್ಮ ಪ್ರಶಸ್ತಿ ಬರಬೇಕು ಅಂತಲೂ ಹೇಳಿದ್ದರು. ಅದನ್ನ ಹೇಳಿ ಮರು ದಿನವೇ ಸೋಷಿಯಲ್ ಮೀಡಿಯಾದಲ್ಲಿ ಒಂದು ಫೋಸ್ಟ್ ಹಾಕಿದರು. ಹಂಸಲೇಖ (Hamsalekha) ಅವರಿಗೆ ಪದ್ಮ ಪ್ರಶಸ್ತಿ (Padma Award) ಕೊಡ್ಬೇಕು ಅಂತ ಅಭಿಯಾನ ಶುರು ಮಾಡಿದ್ದಾರೆ. ಇದಕ್ಕೆ ಸಪೋರ್ಟ್ ಕೂಡ ಸಿಗುತ್ತಿದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ

ಹಂಸಲೇಖರವರಿಗೆ ಪದ್ಮ ಪುರಸ್ಕಾರ

ಈ ಒಂದು ಯೋಚನೆಯನ್ನ ನೆನಪಿರಲಿ ಪ್ರೇಮ್ ಮೊನ್ನೆ ಹೇಳಿಕೊಂಡರು. ಪಕ್ಕದಲ್ಲಿ ವಿ.ನಾಗೇಂದ್ರ ಪ್ರಸಾದ್ ಅವರೂ ಇದ್ದರು. ಇವರು 3000 ಹಾಡುಗಳನ್ನ ಬರೆದಿದ್ದಾರೆ.
nenapirali prem starts campaign demanding padma award for hamsalekha

ಬರವಣಿಗೆಗೆ ಮೆರವಣಿಗೆ

(ಚಿತ್ರ ಕೃಪೆ: ನೆನಪಿರಲಿ ಪ್ರೇಮ್ ಇನ್‌ಸ್ಟಾಗ್ರಾಮ್)

ಇವರಿಗೂ ಯಾವುದೇ ಪ್ರಶಸ್ತಿ ಇಲ್ಲ. ಹಂಸಲೇಖ ಅವರು 300 ಚಿತ್ರಗಳಿಗೆ ಸಾಹಿತ್ಯ ಮತ್ತು ಸಂಗೀತವನ್ನ ಕೊಟ್ಟಿದ್ದಾರೆ. ಇವರಿಗೂ ಯಾವುದೇ ಪ್ರಶಸ್ತಿ ಇಲ್ಲ ನೋಡಿ. ಆದರೆ, ಪಕ್ಕದ ರಾಜ್ಯದಲ್ಲಿ ಸಿನಿಮಾ ಸಾಹಿತಿಗಳಿಗೆ ಪ್ರಶಸ್ತಿ ಕೊಟ್ಟು ಗೌರವಿಸುತ್ತಾರೆ. ನಮ್ಮಲ್ಲಿ ಯಾಕೆ ಹಿಂಗೆ ಅಂತಲೇ ಬೇಸರ ವ್ಯಕ್ತಪಡಿಸಿದ್ದರು.

ಪದ್ಮ ಪ್ರಶಸ್ತಿ ಕೊಡಿ

ವಿ.ನಾಗೇಂದ್ರ ಪ್ರಸಾದ್ ಅವರಿಗೆ 50ನೇ ಜನ್ಮ ದಿನದಂಗವಾಗಿ ಕವಿರತ್ನ ಸಾರ್ಥಕ ಸುವರ್ಣ ಅಂತ ಕಾರ್ಯಕ್ರಮ ಮಾಡುತ್ತಿದ್ದಾರೆ. ಈ ಕಾರ್ಯಕ್ರಮದ ಬಗ್ಗೆ ಹೇಳುವ ಪ್ರೆಸ್ ಮೀಟ್ ಕರೆದಿದ್ದರು.

ಈ ಪ್ರೆಸ್‌ ಮೀಟ್‌ಗೆ ಬಂದ ನೆನಪಿರಲಿ ಪ್ರೇಮ್ ತಮ್ಮ ಬೇಸರ ವ್ಯಕ್ತಪಡಿಸಿದರು. ನಮ್ಮ ಸಿನಿಮಾ ಸಾಹಿತಿಗಳಿಗೆ ಯಾಕೆ ಪ್ರಶಸ್ತಿ ಬರೋದಿಲ್ಲ ಅಂತಲೂ ಪ್ರಶ್ನೆ ಮಾಡಿದರು. ಈ ಬೇಸರವನ್ನ ಹೇಳಿಕೊಂಡ್ಮೇಲೆ ಮರು ದಿನವೇ ಪ್ರೇಮ್ ಒಂದು ಅಭಿಯಾನ ಶುರು ಮಾಡಿದರು ನೋಡಿ.

ಹಂಸಲೇಖ ಅವರಿಗೆ ಪದ್ಮ ಪುರಸ್ಕಾರ

ನೆನಪಿರಲಿ ಪ್ರೇಮ್ ಇದೇ ಪ್ರೆಸ್ ಮೀಟ್ ಅಲ್ಲಿ ಒಂದು ಮಾತು ಹೇಳಿದ್ದರು. ಹೀರೋಗಳು ಆಗ್ಬೇಕು ಅಂದರೆ ಅಲ್ಲಿ ಬರವಣಿಗೆ ಬೇಕೇ ಬೇಕು. ‘ಬರವಣಿಗೆ ಇದ್ದರೆ ಮೆರವಣಿಗೆ’ ಅಂತಲೇ ಹೇಳಿದ್ದರು.

nenapirali prem starts campaign demanding padma award for hamsalekha

ಹಂಸಲೇಖ ಅವರಿಗೆ ಪದ್ಮ ಪ್ರಶಸ್ತಿ ಕೊಡಿ

(ಚಿತ್ರ ಕೃಪೆ: ನೆನಪಿರಲಿ ಪ್ರೇಮ್ ಇನ್‌ಸ್ಟಾಗ್ರಾಮ್)

ಹಾಗೆ ಹೇಳಿದ ಒಂದು ಮಾತನ್ನೆ ತಮ್ಮ ಅಭಿಯಾನದಲ್ಲಿ ಬಳಕೆ ಮಾಡಿದ್ದಾರೆ. ಬರವಣಿಗೆಗೆ ಮೆರವಣಿಗೆ ಅಂತಲೇ ಹೇಳಿದ್ದಾರೆ. ಈ ಮೂಲಕ ಹಂಸಲೇಖ ಅವರಿಗೆ ಪದ್ಮ ಪುರಸ್ಕಾರ ಸಲ್ಲಬೇಕು ಅನ್ನೋದನ್ನು ಒತ್ತಿ ಹೇಳಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್

ನೆನಪಿರಲಿ ಪ್ರೇಮ್ ತಮ್ಮ ಈ ಒಂದು ಅಭಿಯಾನವನ್ನ ಆರಂಭಿಸಿದ್ದಾರೆ. ಇನ್‌ಸ್ಟಾಗ್ರಾಮ್‌ನ ತಮ್ಮ ಪೇಜ್ ಅಲ್ಲಿಯೇ ಈ ಬಗೆಗಿನ ಒಂದು ಪೋಸ್ಟ್ ಹಾಕಿದ್ದಾರೆ.

ಬರವಣಿಗೆಗೆ ಮೆರವಣಿಗೆ 

ನಾದಬ್ರಹ್ಮ ಹಂಸಲೇಖರವರಿಗೆ ಪದ್ಮ ಪುರಸ್ಕಾರ ಸಲ್ಲಬೇಕು ಎಂಬುದರ ಕುರಿತಾಗಿ ಅಭಿಯಾನ ಶುರು ಮಾಡಲಿದ್ದೇನೆ. ಹಾಗಾಗಿ ಕನ್ನಡ ಚಿತ್ರರಂಗ, ಸಾಹಿತಿಗಳು, ಕನ್ನಡ ಚಿತ್ರ ಪ್ರೇಮಿಗಳು, ಮಾಧ್ಯಮದವರಿಗೂ ಹಾಗೂ ಕರ್ನಾಟಕ ರಾಜ್ಯ ಸರ್ಕಾರ ಹಾಗೂ ಭಾರತ ಕೇಂದ್ರ ಸರ್ಕಾರಕ್ಕೆ ಮನವಿ.

300 ಕ್ಕೂ ಹೆಚ್ಚು ಸಿನಿಮಾಗಳಿಗೆ ಸಾಹಿತ್ಯ ಹಾಗೂ ಸಂಗೀತ ಕೊಟ್ಟಂತಹ ಏಕೈಕ ಕನ್ನಡಿಗ ನಮ್ಮ ಕನ್ನಡ ಸಿನಿಮಾ ಹಾಗೂ ಸಾಹಿತ್ಯ ಲೋಕದ ಹೆಮ್ಮೆಗೆ ಸಲ್ಲಲೇ ಬೇಕಾದ ಗೌರವ. ಈ ಅಭಿಯಾನಕ್ಕೆ ನಿಮ್ಮೆಲ್ಲರ ಸಹಕಾರವಿರಲಿ. ಅದ್ಭುತವಾಗಿ ಸ್ಪಂದಿಸುತ್ತಿರುವ ಸರ್ವರಿಗೂ ಸಹೃದಯ ನಮನಗಳು

ನಿಮ್ಮ

ನೆನಪಿರಲಿ ಪ್ರೇಮ್

ಧನ್ಯವಾದಗಳು

ನೆನಪಿರಲಿ ಪ್ರೇಮ್ ಅವರ ಈ ಒಂದು ಅಭಿಯಾನಕ್ಕೆ ಉತ್ತಮ ಪ್ರಕ್ರಿಯೆ ಬರ್ತಿವೆ. ಸೋಷಿಯಲ್ ಮೀಡಿಯಾದಲೂ ಈ ವಿಚಾರ ಶೇರ್ ಆಗುತ್ತಿದೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed