Dynamite Diana: ಚಂದನ್ ಶೆಟ್ಟಿ, ಡಯನಾ ಮೀಟ್ ಆಗಿದ್ದು ಹೇಗೆ? ಇಂಟ್ರಸ್ಟಿಂಗ್ ಕಹಾನಿ ಇಲ್ಲಿದೆ! | | ACTPnews

ಒಡೆದು ಹೋದ 2 ಹೃದಯಗಳ 'ಡೈನಾಮೈಟ್' ಸ್ಟೋರಿ!


Last Updated:

ಚಂದನ್ ಶೆಟ್ಟಿ ಅವರ ಡಯಾನಾಮೈಟ್ ಮ್ಯೂಸಿಕ್ ವಿಡಿಯೋ ರಿಲೀಸ್ ಆಗಿದೆ. ಹಾಲಿವುಡ್ ಮಟ್ಟಕ್ಕೂ ಇದು ಇದೆ. ಇದರಲ್ಲಿ ಕಾಣಿಸಿಕೊಂಡ ಡಯಾನಾ ಈ ಆಲ್ಬಂ ಮತ್ತು ಚಂದನ್ ತಮಗೆ ಹೇಗೆ ಸಿಕ್ಕರು ಅನ್ನೋ ಇಂಟ್ರಸ್ಟಿಂಗ್ ವಿಚಾರ ಹೇಳಿಕೊಂಡಿದ್ದಾರೆ. ಇವರ ಮಾತುಗಳ ಇನ್ನಷ್ಟು ವಿವರ ಇಲ್ಲಿದೆ ಓದಿ.

ಒಡೆದು ಹೋದ 2 ಹೃದಯಗಳ 'ಡೈನಾಮೈಟ್' ಸ್ಟೋರಿ!
ಒಡೆದು ಹೋದ 2 ಹೃದಯಗಳ ‘ಡೈನಾಮೈಟ್’ ಸ್ಟೋರಿ!

ಡೈನಾಮೈಟ್ ಮ್ಯೂಸಿಕ್ ವಿಡಿಯೋ (Dynamite Music Video) ಎಲ್ಲರ ಗಮನ ಸೆಳೆದಿದೆ. ಚಂದನ್ ಶೆಟ್ಟಿ ಇದನ್ನ ಅಂತಾರಾಷ್ಟ್ರೀಯ ಮಟ್ಟದಲ್ಲಿಯೇ ಮಾಡಿದ್ದಾರೆ. ಹಾಲಿವುಡ್ ಹುಡುಗಿಯ ತರವೇ ಕಾಣಿಸೋ ಮೈಸೂರು ಹುಡುಗಿಯನ್ನೆ ಈ ಒಂದು ಡೈನಾಮೈಟ್ ಮ್ಯೂಸಿಕ್ ವಿಡಿಯೋಗೆ ಹಾಕಿಕೊಂಡಿದ್ದಾರೆ. ಇವರ ಹೆಸರು ಡಯಾನಾ ಅಂತಲೇ ಇದೆ. ಆದರೆ, ಡೈನಾಮೈಟ್ ಅಂತ ಚಂದನ್ ಶೆಟ್ಟಿ (Chandan Shetty) ಅವರೇ ಇಟ್ಟಿದ್ದಾರೆ. ಚಂದನ್ ಶೆಟ್ಟಿ (Chandan Shetty) ಕೂಡ ಈ ಕುರಿತು ಹೇಳಿಕೊಂಡಿದ್ದಾರೆ. ಇದೀಗ ಅದೇ ಡೈನಾಮೈಟ್ (Dynamite) ಒಂದಷ್ಟು ಮಾತನಾಡಿದ್ದಾರೆ. ಚಂದನ್ ಶೆಟ್ಟಿ ಹೇಗೆ ಮೀಟ್ ಆದರು ಅನ್ನೋದನ್ನ ಹೇಳಿಕೊಂಡಿದ್ದಾರೆ. ಇನ್ನು ಸುಮಾರು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅದೆಲ್ಲ ಏನು ಅನ್ನೊದು ಇಲ್ಲಿದೆ ಓದಿ.

ಚಂದನ್ ಶೆಟ್ಟಿ ಹೇಗೆ ಮೀಟ್ ಆದ್ರು

ಚಂದನ್ ಶೆಟ್ಟಿ ಮತ್ತು ಡಯನಾ ಹೇಗೆ ಮೀಟ್ ಆದರು? ಈ ಪ್ರಶ್ನೆಗೆ ಡಯನಾ ಇಂಟ್ರಸ್ಟಿಂಗ್ ಸ್ಟೋರಿ ಹೇಳ್ತಾರೆ. ಹಿಂದೆ ಒಮ್ಮೆ ಯಾವಾಗಲೂ ಇನ್‌ಸ್ಟಾಗ್ರಾಮ್ ಅಲ್ಲಿ ಇವರು ಮೆಸೇಜ್ ಮಾಡಿಕೊಂಡಿದ್ದರು.
Dynamite English Music Video Singer Actress Diana Share Interesting Facts of Chandan Shetty

ನಾಯಕಿ ಗಾಯಕಿ ಡಯನಾ ಹೇಳೋದೇನು?

(ಚಿತ್ರ ಕೃಪೆ: ಚಂದನ್ ಶೆಟ್ಟಿ ಇನ್‌ಸ್ಟಾಗ್ರಾಮ್)

ಅದ್ಮಾಗಲೇ ಮತ್ತೊಮ್ಮೆ ಕನೆಕ್ಟ್ ಆದರು. ಆವಾಗ ಡಯಾನಾ ಒಂದು ಪ್ರಶ್ನೆ ಕೇಳಿದರು. ಹೇಗೀದ್ದೀರಾ ಅನ್ನೋದನ್ನ ಡಯಾನಾ ಕೇಳಿದ್ದರು. ಆ ಸಮಯದಲ್ಲಿ ಚಂದನ್ ಶೆಟ್ಟಿ ಡಿವೋರ್ಸ್ ಪಡೆದಿದ್ದರು. ಆಗ ಚಂದನ್ ಶೆಟ್ಟಿ, ನಾನು ಸದ್ಯ ಕೇದಾರನಾಥ್ ಅಲ್ಲಿಯೇ ಇದ್ದೇನೆ. ಟ್ರೆಕಿಂಗ್ ಮಾಡ್ತಾ ಇದ್ದೇನೆ ಅಂತ ಹೇಳ್ತಾರೆ.

ಮೈಸೂರಿಗೆ ಬಂದ್ಮೇಲೆ..

ಈ ಒಂದು ಚಾಟ್ ಆದ್ಮೇಲೆ ಸುಮಾರು ಗ್ಯಾಪ್ ಆಗಿರುತ್ತದೆ. ಆದರೆ, ಚಂದನ್ ಶೆಟ್ಟಿ ಅವರಿಗೆ ಬೆಂಗಳೂರು ಬೇಸರ ಆಗಿರುತ್ತದೆ. ಬೇಡ್ವೇ ಬೇಡ ಅಂತ ಅನಿಸಿಬಿಡುತ್ತದೆ.

ಅದಕ್ಕೇನೆ ಇವರು ಮೈಸೂರಿಗ ಶಿಫ್ಟ್ ಆಗುತ್ತಾರೆ. ಮನೆ ಹುಡುಕೋಕೆ ಶುರು ಮಾಡಿದ ದಿನವೇ ಇವರಿಗೆ ಬಾಡಿಗೆ ಮನೆ ಸಿಗುತ್ತದೆ. ಮನೆಯರಿಗೂ ಹೇಳ್ತಾರೆ. ಏನಾದರೂ ಅರ್ಜೆಂಟ್ ಇದ್ದರೆ, ಸುಮಾರು ಒಂದೂವರೆ ಗಂಟೆಯಲ್ಲಿ ಬೆಂಗಳೂರಿಗೆ ಬರಬಹುದು ಅಂತ ಹೇಳಿ ಹೊರಡುತ್ತಾರೆ.

ನಾನು ಮೈಸೂರು ನೀವು ಮೈಸೂರಾ

ಚಂದನ್ ಶೆಟ್ಟಿ ಹಾಗೂ ಡಯಾನಾ ಮತ್ತೆ ಚಾಟ್‌ ಮಾಡ್ತಾರೆ. ನಾನು ಮೈಸೂರಿನಲ್ಲಿಯೇ ಇರೋದು ಅಂತ ಚಂದನ್ ಶೆಟ್ಟಿ ಹೇಳುತ್ತಾರೆ. ಡಯನಾ ಕೂಡ ನಾನು ಈ ಊರಿನವಳೇ ಅಂತ ಹೇಳ್ತಾರೆ.

Dynamite English Music Video Singer Actress Diana Share Interesting Facts of Chandan Shetty

ಲವ್ ಬಗ್ಗೆ ಡಯಾನಾ ಮಾತುಗಳು

(ಚಿತ್ರ ಕೃಪೆ: ಚಂದನ್ ಶೆಟ್ಟಿ ಇನ್‌ಸ್ಟಾಗ್ರಾಮ್)

ಈ ರೀತಿ ಚಂದನ್ ಮತ್ತು ಡಯಾನಾ ಮೀಟ್ ಆಗುತ್ತಾರೆ. ಇಂಗ್ಲಿಷ್ ಅಲ್ಲಿಯೇ ಇಬ್ಬರು ಒಂದು ಆಲ್ಬಂ ಮಾಡ್ತಾರೆ. ಡಯಾನಾ ಅವರಿಗೆ ಇದನ್ನ ಒಮ್ಮೆ ಹಾಡಿ ಅಂತ ಹೇಳ್ತಾರೆ. ಧ್ವನಿ ಚೆನ್ನಾಗಿದೆ ಅಂತ ಚಂದನ್ ಅವರಿಗೆ ಅನಿಸುತ್ತದೆ. ಎಲ್ಲ ಓಕೆ ಆದ್ಮೇಲೆ ಡಯಾನಾ ಅವರಿಗೆ ಮೈಟ್ ಅಂತ ಸೇರಿಸುತ್ತಾರೆ. ಅದೇ ಹೆಸರನ್ನೆ ತಮ್ಮ ಇಂಗ್ಲಿಷ್ ಮ್ಯೂಸಿಕ್ ವಿಡಿಯೋಗ “ಡಯಾನಾಮೈಟ್‌” ಅಂತಲೇ ಇಡ್ತಾರೆ ನೋಡಿ.

ಡಯಾನಾಮೈಟ್ ರಿಲೀಸ್ ಆಯ್ತಾ?

ಚಂದನ್ ಶೆಟ್ಟಿ ಅವರ ಈ ಒಂದು ಡಯಾನಾಮೈಟ್ ಇಂಗ್ಲಿಷ್ ಮ್ಯೂಸಿಕ್ ವಿಡಿಯೋ ರಿಲೀಸ್ ಆಗಿದೆ. ಕಳೆದ ಏಪ್ರಿಲ್-23 ರಂದು ಚಂದನ್ ಶೆಟ್ಟಿ ಅವರ ಯುಟ್ಯೂಬ್‌ ಚಾನೆಲ್ ಅಲ್ಲಿಯೇ ಈ ಗೀತೆ ರಿಲೀಸ್ ಆಗಿದೆ.

ಲವ್ ಬಗ್ಗೆ ಡಯಾನಾ ಮಾತುಗಳು

ಡಯಾನಾ ಕೂಡ ಪ್ರೀತಿಯಲ್ಲಿ ಸೋತವರೇ ಆಗಿದ್ದಾರೆ. ಇವರಿಗೆ ಒಂದು ಅರ್ಥ ಆಗಿದೆ. ಪ್ರೀತಿಯಿಂದ ತುಂಬಾನೆ ತೊಂದರೆಗಳಾಗುತ್ತಿದ್ದರೆ, ಅದರಿಂದ ಆಷ್ಟು ಬೇಗ ಹೊರಗೆ ಬಂದು ಬಿಡ್ಬೇಕು. ಇಲ್ಲ ಅಂದ್ರೆ ಅದು ಮುಂದುವರೆಯುತ್ತಲೇ ಇರುತ್ತದೆ ಅನ್ನೋದೇ ಇವರ ಮಾತಾಗಿದೆ.

ಇನ್ನುಳಿಂದೆ ರಾಪಿಡ್ ರಶ್ಮಿ ಅವರ ಜಸ್ಟ್ ಕ್ಯೂರಿಯಸ್ ಪಾಡ್ ಕಾಸ್ಟ್ ಅಲ್ಇಯೇ ಡಯಾನಾ ಅವರು ತಮ್ಮ ಈ ಡೈನಾಮೈಟ್ ಜರ್ನಿ ಬಗ್ಗೆ ಸಾಕಷ್ಟು ವಿಚಾರಗಳನ್ನ ಹಂಚಿಕೊಂಡಿದ್ದಾರೆ. ತಮ್ಮ ಲೈಫ್ ಅಲ್ಲೂ ಒಮ್ಮೆ ಪ್ರೀತಿ ಆಗಿತ್ತು ಅನ್ನೋದನ್ನು ಸಂಕ್ಷಿಪ್ತವಾಗಿಯೇ ಹೇಳಿಕೊಂಡಿದ್ದಾರೆ ಅಂತಲೇ ಹೇಳಬಹುದು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports