Last Updated:
ಉತ್ತರ ವಲಯವನ್ನ ಕೇವಲ 195ಕ್ಕೆ ಆಲೌಟ್ ಮಾಡಿದ ನಂತರ ಬ್ಯಾಟಿಂಗ್ಗೆ ಇಳಿದಿದ್ದ ದಕ್ಷಿಣ ವಲಯ ಕೂಡ ನಿರೀಕ್ಷಿತ ಆರಂಭ ಪಡೆಯಲಿಲ್ಲ. ಕೇವಲ 80 ರನ್ಗಳಾಗುವಷ್ಟರಲ್ಲಿ ತಂಡದ ಅಗ್ರಕ್ರಮಾಂಕದ ಬ್ಯಾಟರ್ಗಳನ್ನ ಕಳೆದುಕೊಂಡಿತು. ಈ ಹಂತದಲ್ಲಿ ತಿಲಕ್ ಶತಕ ಸಿಡಿಸಿ ತಂಡ ಮೊದಲ ಇನ್ನಿಂಗ್ಸ್ ಮುನ್ನಡೆ ಪಡೆಯಲು ನೆರವಾದರು.
ದುಲೀಪ್ ಟ್ರೋಫಿ ಸೆಮಿಫೈನಲ್ನಲ್ಲಿ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್ಮನ್ ತಿಲಕ್ ವರ್ಮಾ ಶತಕ ಸಿಡಿಸಿ ಅಬ್ಬರಿಸಿದ್ದಾರೆ. ದಕ್ಷಿಣ ವಲಯದ ನಾಯಕನಾಗಿರುವ ತಿಲಕ್ ವರ್ಮಾ ಉತ್ತರ ವಲಯದ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ನಾಯಕನ ಆಟವಾಡಿ ಗಮನ ಸೆಳೆದಿದ್ದಾರೆ. ಬೆಂಗಳೂರಿನ ಸೆಂಟರ್ ಆಫ್ ಎಕ್ಸ್ಲೆನ್ಸ್ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ದಕ್ಷಿಣ ವಲಯ 2ನೇ ದಿನದಾಟದ ಅಂತ್ಯಕ್ಕೆ 90 ರನ್ಗಳ ಮುನ್ನಡೆ ಪಡೆದುಕೊಂಡಿದೆ. ಪ್ರಸ್ತುತ ತಿಲಕ್ ವರ್ಮಾ ಅಜೇಯ 106 ರನ್ಗಳಿಸಿ (225 ಎಸೆತಗಳಲ್ಲಿ 7 ಬೌಂಡರಿಗಳು ಸೇರಿದಂತೆ ಔಟಾಗದೆ 106) ಮೈದಾನದಲ್ಲಿದ್ದಾರೆ. ದಕ್ಷಿಣ ವಲಯ ಪ್ರಸ್ತುತ 94 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 285 ರನ್ಗಳಿಸಿ 3ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದಿರಿಸಿದೆ.














